ಮನೆಯನ್ನು ಸ್ವಚ್ಛಗೊಳಿಸುವಲ್ಲಿ (cleaning) ಪೊರಕೆಯ (broom) ಪಾತ್ರ ಅತ್ಯಂತ ಮಹತ್ವದ್ದು. ಆದರೆ ಇದನ್ನು ಎಲ್ಲೆಂದರಲ್ಲಿ ಇಟ್ಟರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುವ ಸಾಧ್ಯತೆ ಇದೆ ಎನ್ನುತ್ತದೆ ವಾಸ್ತು ನಿಯಮ (Vastu Tips). ಹೀಗಾಗಿ ಪೊರಕೆಯನ್ನು ಇಡಲು ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ.
ಪ್ರತಿಯೊಬ್ಬರೂ ತಮ್ಮ ದಿನಚರಿಯ ಭಾಗವಾಗಿ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಬಳಕೆಯ ಅನಂತರ ನಾವು ಪೊರಕೆಯನ್ನು ಎಲ್ಲಿ ಇಡುತ್ತೇವೆ ಎಂಬುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪೊರಕೆಯನ್ನು ಇರಿಸಲು ನಿರ್ದಿಷ್ ಸ್ಥಳವನ್ನು ಬಳಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತಂದುಕೊಳ್ಳಬಹುದು.
ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದ ವಸ್ತುವಾಗಿದೆ. ನಾವು ಮನೆ ಖಾಲಿ ಮಾಡುವಾಗ ಪೊರಕೆಯನ್ನು ತೆಗೆದುಕೊಂಡು ಹೋಗಬೇಕು. ಯಾಕೆಂದರೆ ಪೊರಕೆಯನ್ನು ತೆಗೆದುಕೊಳ್ಳದಿದ್ದರೆ ಲಕ್ಷ್ಮೀ ದೇವಿಯು ಅಲ್ಲಿಯೇ ಉಳಿದಿದ್ದಾಳೆ ಎಂದರ್ಥ!
ಬಳಸಿದ ಅನಂತರ ಪೊರಕೆಯನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡಬೇಕು. ಇಲ್ಲದಿದ್ದರೆ ಮನೆಯಲ್ಲಿ ಬಡತನ ಹೆಚ್ಚಾಗುವ ಸಾಧ್ಯತೆ ಇದೆ. ಮನೆಯಲ್ಲಿ ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸಲು ಪೊರಕೆ ಇಡಬೇಕಾದ ದಿಕ್ಕು ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿದೆ.
ಪೊರಕೆ ಖರೀದಿಸಲು ಶುಭ ದಿನ
ಅಮಾವಾಸ್ಯೆ, ಮಂಗಳವಾರ, ಶನಿವಾರ ಮತ್ತು ಭಾನುವಾರ ಪೊರಕೆ ಖರೀದಿಸಲು ಉತ್ತಮ ದಿನಗಳು ಎಂದು ಪರಿಗಣಿಸಲಾಗಿದೆ. ಸೋಮವಾರ ಮತ್ತು ಶುಕ್ಲ ಪಕ್ಷವನ್ನು ಅಶುಭವೆಂದು ಪರಿಗಣಿಸಲಾಗಿದೆ. ಈ ದಿನ ಪೊರಕೆಯನ್ನು ಖರೀದಿಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಈ ದಿನ ಪೊರಕೆ ಖರೀದಿಸುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.
ಈ ಸ್ಥಳಗಳಲ್ಲಿ ಪೊರಕೆ ಇಡಬೇಡಿ
ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗಿದ್ದರೂ ಅದನ್ನು ಎಂದಿಗೂ ಆಭರಣ ಅಥವಾ ಬೆಲೆಬಾಳುವ ವಸ್ತುಗಳ ಬಳಿ ಇಡಬಾರದು. ಒಂದು ವೇಳೆ ಇಟ್ಟರೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ.
ಮುರಿದ ಪೊರಕೆ ಬಳಸಬೇಡಿ
ಮನೆಯಲ್ಲಿ ಮುರಿದ ಪೊರಕೆಯನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಎಸೆಯಿರಿ. ಯಾಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಪೊರಕೆಯನ್ನು ಬಳಸುವುದು ಒಳ್ಳೆಯದಲ್ಲ. ಇದರಿಂದ ಕುಟುಂಬದಲ್ಲಿ ಸಮಸ್ಯೆಗಳೂ ಉಂಟಾಗಬಹುದು.
ಸಂಜೆ ಮನೆ ಸ್ವಚ್ಛಗೊಳಿಸಬೇಡಿ
ಸಂಜೆ ಮನೆ ಸ್ವಚ್ಛಗೊಳಿಸಬಾರದು ಎಂದು ಮನೆಯಲ್ಲಿ ಅಜ್ಜಿ ಆಗಾಗ್ಗೆ ಹೇಳುವುದನ್ನು ಕೇಳಿರಬಹುದು. ಸಂಜೆ ಮನೆಯನ್ನು ಗುಡಿಸಿದರೆ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ಆದ್ದರಿಂದ, ಯಾವಾಗಲೂ ಸಂಜೆ ಮತ್ತು ರಾತ್ರಿಯಲ್ಲಿ ಮನೆ ಗುಡಿಸುವುದನ್ನು ತಪ್ಪಿಸಿ. ಒಂದು ವೇಳೆ ಗುಡಿಸಿದರೂ ಮನೆಯಿಂದ ಕಸವನ್ನು ಎಸೆಯಬೇಡಿ.
ಪೊರಕೆ ಇಡಲು ದಿಕ್ಕು ಯಾವುದು?
ಪೊರಕೆಯನ್ನು ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದರೆ ಯಾವತ್ತೂ ಉತ್ತರ ದಿಕ್ಕಿನಲ್ಲಿ ಇಡಬಾರದು. ಈ ದಿಕ್ಕಿಗೆ ಇಟ್ಟರೆ ಮನೆಯಲ್ಲಿ ಸುಖ ಸಂತೋಷ ಮಾಯವಾಗುತ್ತದೆ. ಇದಲ್ಲದೇ ಮನೆಯಲ್ಲಿರುವವರ ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗುವುದು. ಪೊರಕೆಗಳನ್ನು ಅಡುಗೆ ಮನೆಯಲ್ಲಿ ಇಡಬಾರದು.
ಸ್ವಚ್ಛತೆ ಮಾಡುವುದು ಹೇಗೆ?
ಮನೆಯನ್ನು ಶುಚಿಗೊಳಿಸುವಾಗ ಮೊದಲು ಪಶ್ಚಿಮದಿಂದ ಉತ್ತರಕ್ಕೆ ಗುಡಿಸಲು ಪ್ರಾರಂಭಿಸಿ. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಅದೇ ರೀತಿ ಮನೆ ಗುಡಿಸಿದ ಅನಂತರ ಕಸವನ್ನು ಡಸ್ಟ್ಬಿನ್ಗೆ ಹಾಕಿ. ಮನೆಯಲ್ಲಿ ಕಸ ಶೇಖರಣೆಗೊಂಡರೆ ಬಡತನ, ಸಂಕಟ ಹೆಚ್ಚುತ್ತದೆ.
Vastu Tips: ಪರ್ಫ್ಯೂಮ್ ಗಿಫ್ಟ್ ಕೊಡಬಾರದು; ಅದಕ್ಕೂ ಒಂದು ಕಾರಣವಿದೆ ಗೊತ್ತಾ?
ಪೊರಕೆಯನ್ನು ಕಾಲಿನಿಂದ ಒದೆಯಬಾರದು ಹಾಗೂ ಎರಡು ಪೊರಕೆಗಳನ್ನು ಎಂದಿಗೂ ಒಟ್ಟಿಗೆ ಇಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ.