Monday, 28th October 2024

Street Vendors: ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನೀಡಲು ನಗರಾಡಳಿತಕ್ಕೆ ಸಂಘದ ಮನವಿ

ಗೌರಿಬಿದನೂರು : ಬೀದಿಬದಿ ವ್ಯಾಪಾರಸ್ಥರ ಸಂಘಟನೆಯಡಿ ನಗರಸಭೆಯ ನೂತನ ಅಧ್ಯಕ್ಷರು ಹಾಗೂ ಉಪಾ ಧ್ಯಕ್ಷ ರಿಗೆ ಸನ್ಮಾನ ಮಾಡಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಆಗುವಂತೆ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ನೆಲೆ ಒದಗಿಸಿಕೊಡಬೇಕೆಂದು ಮನವಿ ಮಾಡಲಾಯಿತು.

ನಗರಸಭೆ ಕಚೇರಿಯಲ್ಲಿ ಗುರುವಾರ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ತಾಲೂಕು ಬೀದಿ ಬದಿ ವ್ಯಾಪಾರಸ್ಥ ಸಂಘಟನೆಯಿAದ ಸನ್ಮಾನಿಸಿ ಸಂಘದ ಮುಖಂಡರು ಮಾತನಾಡದರು.

ಬೀದಿಬದಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಂಗ್ಲಿ ಮಾತನಾಡಿ ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರಸ್ಥ ರಿಗೆ ನಗರಸಭೆ ವ್ಯಾಪ್ತಿಯಲ್ಲಿ ಸ್ಥಳವಿಲ್ಲದೆ ರಸ್ತೆ ಪಕ್ಕದಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಜೀವನ ಸಾಗಿಸು ತ್ತೇವೆ. ಅದಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ನಮಗೆ ಸಹಕಾರ ನೀಡು ತ್ತಿದ್ದಾರೆ. ನಮಗೆ ವ್ಯಾಪಾರ ಮಾಡಲು ಯಾವುದೇ ರೀತಿಯ ಕಟ್ಟಡಗಳು ಬೇಕಿಲ್ಲ. ರಸ್ತೆ ಅಗಲೀಕರಣ ಆದಮೇಲೆ ಪುಟ್ ಪಾತ್ ೬ ಅಡಿಯಷ್ಟು ರಸ್ತೆ ಪಕ್ಕದಲ್ಲಿ ಜಾಗ ಬಿಟ್ಟಿಕೊಟ್ಟರೆ.ಒಂದು ಕಡೆ ವ್ಯಾಪಾರ ಮಾಡಿಕೊಂಡು ಜೀವನ ಸಾಗುಸುತ್ತೇವೆ ಎಂದು ಮನವಿ ಮಾಡಿದರು.

ನೂತನ ಅಧ್ಯಕ್ಷರು ಲಕ್ಷ್ಮೀನಾರಾಯಣಪ್ಪ ಮಾತನಾಡಿ. ಬೀದಿ ಬದಿ ವ್ಯಾಪಾರಸ್ಥರು ರಸ್ತೆ ಪಕ್ಕದಲ್ಲಿ 6 ಅಡಿ ಎಷ್ಟು ವ್ಯಾಪಾರ ಮಾಡಲು ಜಾಗ ಕೇಳಿದ್ದು. ಶಾಸಕರು ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿ ಆದಷ್ಟು ಸಹಾಯ ಮಾಡಿಕೊಳ್ಳುತ್ತೇನೆ ಎಂದರು. ಇದೆ ವೇಳೆ ನದಿ ಗಡ್ಡೆ ಪರಮೇಶ್ ವಿಜಿಯಮ್ಮ ವೆಂಕಟೇಶ್ ಶಾಂತಮ್ಮ ಗಂಗಾಧರ್ ನಾಗರಾಜ್ ಮಫ್ತರ್  ರಂಗಮ್ಮ ಮಧು ಸಂಘದ ಎಲ್ಲಾ ಸದಸ್ಯರು ಕಾರ್ಯದಲ್ಲಿ ಉಪಸ್ಥಿತರಿದ್ದರು