Friday, 20th September 2024

Babar Azam: ಕೊಹ್ಲಿಯ ಶತಕದ ದಾಖಲೆ ಮುರಿದ ಬಾಬರ್‌ ಅಜಂ

ಕರಾಚಿ: ಕಳೆದೊಂದು ವರ್ಷದಿಂದ ಬ್ಯಾಟಿಂಗ್‌ ವೈಫಲ್ಯ ಕಂಡು ಭಾರೀ ಟೀಕೆಗೆ ಗುರಿಯಾಗಿದ್ದ ಬಾಬರ್‌ ಅಜಂ(Babar Azam) ದೇಶೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸುವ ಮೂಲಕ ಮತ್ತೆ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಿದ್ದಾರೆ. ಬಾಬರ್‌ ಅವರ ಈ ಶತಕದಿಂದ ಭಾರತ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಯ(Virat Kohli) ದಾಖಲೆಯೊಂದು ಪತನಗೊಂಡಿದೆ.

ಚಾಂಪಿಯನ್ಸ್ ಏಕದಿನ ಕಪ್‌ನ(One-Day Champions Cup) ಏಳನೇ ಪಂದ್ಯದಲ್ಲಿ, ಸ್ಟಾಲಿಯನ್ಸ್ ತಂಡದ ಪರ ಆಡುತ್ತಿರುವ ಬಾಬರ್ ಅಜಂ ಡಾಲ್ಫಿನ್ಸ್ ತಂಡದ ವಿರುದ್ಧ 110 ಎಸೆತಗಳಲ್ಲಿ 104 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದು ಬಾಬರ್‌ ಅವರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದಾಖಲಾದ 30 ನೇ ಶತಕ. ಇದೇ ವೇಳೆ ಅವರು ಅತಿ ಕಡಿಮೆ ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಇದುವರೆಗೆ ಈ ದಾಖಲೆ ವಿರಾಟ್‌ ಕೊಹ್ಲಿಯ ಹೆಸರಿನಲ್ಲಿತ್ತು.

ಕೊಹ್ಲಿ 199 ಇನಿಂಗ್ಸ್‌ ಆಡಿ 30 ಶತಕ ಬಾರಿಸಿದ್ದರು. ಇದೀಗ ಬಾಬರ್‌ 180 ಇನಿಂಗ್ಸ್‌ನಲ್ಲಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ. ಕೊಹ್ಲಿ ಒಟ್ಟಾರೆಯಾಗಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 329 ಪಂದ್ಯಗಳನ್ನಾಡಿ 54 ಶತಕ ಬಾರಿಸಿದ್ದಾರೆ. ಬಾಬರ್‌ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 8870 ರನ್‌ ಬಾರಿಸಿದ್ದಾರೆ.

ಇದನ್ನೂ ಓದಿ Babar Azam: ಕೊಹ್ಲಿಗೆ ಸರಿಸಮಾನ ಎಂದರೆ ಸಾಲದು ಆತನಂತೆ ಆಡಬೇಕು; ಬಾಬರ್‌ಗೆ ತಿವಿದ ಪಾಕ್‌ ಆಟಗಾರ

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 30 ಶತಕ ಬಾರಿಸಿದ ಆಟಗಾರರು

ಬಾಬರ್‌ ಅಜಂ-180 ಇನಿಂಗ್ಸ್‌

ವಿರಾಟ್‌ ಕೊಹ್ಲಿ-199 ಇನಿಂಗ್ಸ್‌

ಹಾಶಿಮ್ ಆಮ್ಲ- 225 ಇನಿಂಗ್ಸ್‌

ಮಾರ್ಟಿನ್ ಗಪ್ಟಿಲ್-259 ಇನಿಂಗ್ಸ್‌

ಶಿಖರ್‌ ಧವನ್‌-262 ಇನಿಂಗ್ಸ್‌

ಸಚಿನ್ ತೆಂಡೂಲ್ಕರ್-267 ಇನಿಂಗ್ಸ್‌

ರೋಹಿತ್ ಶರ್ಮಾ-275 ಇನಿಂಗ್ಸ್‌

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೂ ಸೋಲಿನ ಅಪಮಾನ ಎದುರಿಸಿತ್ತು. ಲೀಗ್​ ಹಂತದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಈ ವೇಳೆ ನಾಯಕ ಬಾಬರ್‌ ವಿರುದ್ಧ ಮಾಜಿ ಆಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.