Friday, 22nd November 2024

ಆಂಬುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು

ಪಾವಗಡ: ಮೃತದೇಹನ ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ಮೃತಪಟ್ಟಿರುವ ವೃದ್ಧರ ಮೃತದೇಹವನ್ನು ತಮ್ಮೂರಿಗೆ ದ್ವಿಚಕ್ರ ವಾಹನದಲ್ಲಿ ತಮ್ಮ ಮಕ್ಕಳು ತೆಗೆದುಕೊಂಡು ಹೋದ ಹೃದಯವಿದ್ರಾವಕ ಘಟನೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಜರುಗಿದೆ.

ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ  ಹೊನ್ನೂರಪ್ಪ ಎನ್ನುವ (68) ವರ್ಷ. ವೈ.ಎನ್. ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು,  ಮೃತಪಟ್ಟಿರುವ ಹೊನ್ನೂರಪ್ಪ ಅವರ ಶವವನ್ನು ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ದ್ವಿಚಕ್ರ ವಾಹನದಲ್ಲಿಯೇ ಹೊನ್ನೂರಪ್ಪ ಅವರ ಹಿರಿಯ ಪುತ್ರ ಚಂದ್ರಣ್ಣ ಮತ್ತು ಕಿರಿಯ ಪುತ್ರ ಗೋಪಾಲಪ್ಪ ತಮ್ಮೂರಿಗೆ ತೆಗೆದುಕೊಂಡು ತೆಗೆದುಕೊಂಡು ಹೋಗಿದ್ದಾರೆ. 

ಪಾವಗಡ ತಾಲೂಕು ಎಷ್ಟು ಹಿಂದುಳಿದರು ಇಂತಹ ಹೃದಯವಿದ್ರಾವಕ ಘಟನೆಗಳು ಮತ್ತೆ ಮತ್ತೆ ಮರುಕಳಿಸು ತ್ತಿರುವುದು ಒಂದು ರೀತಿ ಆಡಳಿತದ ನಿರ್ಲಕ್ಷಕ್ಕೆ ಹಿಡಿದ ಕೈಗಡಿಯಾಗಿದೆ.

ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರುಗಳು ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

*

ದಳವಾಯಿ ಹಳ್ಳಿ ಗ್ರಾಮದ ವಾಸಿ ಹೊನ್ನೂರಪ್ಪ ಎಂಬ ವೃದ್ಧರಿಗೆ  ಆಂಬುಲೆನ್ಸ್ ನಲ್ಲಿ ಕರೆತಂದರು ಆದರೆ ಕರೆತಂದು ಆ ಮಧ್ಯದಲ್ಲಿ ಪ್ರಾಣ ಹೋಗಿತ್ತು ಪರಿಶೀಲನೆ ಮಾಡಿ ಕುಟುಂಬ ಸದಸ್ಯರಿಗೆ ತಿಳಿಸಿದೆ. ನಂತರ ಆಂಬುಲೆನ್ಸ್ ಕೇಳಿದಾಗ ರಿಪೇರಿಗಾಗಿ ಹೋಗಿದ್ದ ಹಿನ್ನೆಲೆಯಲ್ಲಿ ನಮ್ಮಲ್ಲಿರಲಿಲ್ಲ ಅವರ ಗಮನಕ್ಕೆ ತರಲಾಗಿತ್ತು.

ಡಾ. ಲೋಕೇಶ್. ಸಮುದಾಯ ಆರೋಗ್ಯ ಕೇಂದ್ರ ವೈ ಎನ್. ಹೊಸಕೋಟೆ. ಪಾವಗಡ ತಾಲೂಕು.

*

ದಳವಾಯಿ  ಹಳ್ಳಿ ಯಿಂದ ಬೆಳಿಗ್ಗೆ 12:30 ರಲ್ಲಿ ನಮ್ಮ ತಾತನ ಕರೆದ್ಕೊಂಡು ಆಸ್ಪತ್ರೆಗೆ ಹೋದೆವು ಅದರೆ ವೈದ್ಯರು ನೋಡಿ ಈಗಾಗಲೇ ಮರಣ ಹೊಂದಿದ್ದಾರೆ ಎಂಬುದಾಗಿ ತಿಳಿಸಿದರು. ನಂತರ ನಮ್ಮನ್ನು ಕರೆತಂದಿದ್ದ 108 ಅಂಬುಲೆನ್ಸ್ ಡ್ರೈವರ್ ಗೆ ಕೇಳಿಕೊಂಡೆವು  ನಮ್ಮನ್ನು ಮತ್ತೆ ಹಳ್ಳಿಗೆ ಬಿಡಿ ಎಂಬುದಾಗಿ  ಆದರೆ ನಾವು ಬಿಡಲು ಸಾಧ್ಯವಿಲ್ಲ ಎಂಬುದಾಗಿ ಆಂಬುಲೆನ್ಸ್ ಡ್ರೈವರ್ ಹೇಳಿದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ನಮ್ಮ ತಾತನಿಗೆ  ಕೋರಿಸಿಕೊಂಡು ನಮ್ಮ ಹಳ್ಳಿಗೆ ಹೋದೆವು.

ಅಭಿ .ಮೃತರ ಮೊಮ್ಮಗ. ದಳವಾಯಿ ಹಳ್ಳಿ ಪಾವಗಡ ತಾಲೂಕು

ಇದನ್ನೂ ಓದಿ: Pavagada News: ಪಾವಗಡ ಪಟ್ಟಣದಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಅದ್ದೂರಿ ಯಾಗಿ ಆಚರಿಸಿದ ಮುಸ್ಲಿಂ ಬಾಂಧವರು