Sunday, 24th November 2024

ಸೆ.22ರಂದು ಪಂಚಮಸಾಲಿ 2, ಎ ಮಿಸಲಾತಿ ಹೋರಾಟ

ಇಂಡಿ: ಸೆ.22ರಂದು ಬೆಳಗಾವಿಯಲ್ಲಿ ಜರುಗಲಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ 2ಎ ಮಿಸಲಾತಿ ಹೋರಾಟದ ನ್ಯಾಯವಾದಿಗಳ ಸಮಾವೇಶಕ್ಕೆ ಪಂಚಮಸಾಲಿ ಸಮಾಜದ ಸರ್ವವಕೀಲರು ಬೆಂಬಲಿಸಿ ಪಾಲ್ಗೊಳ್ಳಲಿದ್ದೇವೆ ಎಂದು ವಕೀಲ ಸಂಘದ ಜಿಲ್ಲಾ ಸಂಘನಾ ಸಮೀತಿ ಸದಸ್ಯ ಬಿ.ಬಿ.ಬಿರಾದಾರ ಜೇವೂರ ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ನಮ್ಮ ಸಮಾಜದ ಶ್ರೀಬಸವಜಯ ಮೃತ್ಯುಂಜಯ ಶ್ರೀಗಳು ದಶಕಗಳಿಂದ ಹಲವು ಹೋರಾಟ ನಡೆಸಿದರೂ ಯಾವ ಸರ್ಕಾರವೂ ಪಂಚಮಸಾಲಿ ಸಮಾಜಕ್ಕೆ ಮಿಸಲಾತಿ ನೀಡದ ಹಿನ್ನಲೆ ಯಲ್ಲಿ ಪೂಜ್ಯ ಶ್ರೀಗಳ ಕಳಕಳಿ ಮೇರೆಗೆ ಕಾನೂನುನ ಹೋರಾಟ ಮಾಡಲು ಎಲ್ಲಾ ವಕೀಲರು ಸಂಘಟಿತರಾಗಿದ್ದು ಕಾನೂನು ಹೋರಾಟ ಕುರಿತು ದೀರ್ಘ ಸಮಾವೇಶ ನಡೆಯಲಿದೆ.

ಪೂಜ್ಯರ ನೃತೃತ್ವದಲ್ಲಿ ನಡೆಯುವ ಸಮಾವೇಶಕ್ಕೆ ಎಲ್ಲಾ ಜಿಲ್ಲೆಗಳ ಪಂಚಮಸಾಲಿ ಸಮಾಜದ ವಕೀಲರು ಬೆಂಬಲ ಸೂಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದು ಇಂಡಿ ತಾಲೂಕಿನ ವಕೀಲರು ಸಹ ಸಮಾವೇಶದಲ್ಲಿ ಪಾಲ್ಗೊಂಡು ಬಡಮಕ್ಕಳಿಗೆ ಮೀಸಲಾತಿ ಕೂಡಿಸುವ ಹೋರಾಟ ನಡೆಸಲಿದ್ದೇವೆ ಎಂದರು.

ನ್ಯಾಯವಾದಿ ಎಸ್.ಬಿ ಬೂದಿಹಾಳ, ಎ.ಎಂ ಬಿರಾದಾರ, ಜಿ.ಜಿ ಕೊಟಲಗಿ, ಜಿ.ಎಸ್ ಪಾಟೀಲ, ಬಿ.ಪಿ ಬಿರಾದಾರ, ವಿರೇಂದ್ರ ಪಾಟೀಲ, ಪಿ.ಬಿ ಲವುಗಿ, ಡಿ.ಜೆ ಜೊತಗೊಂಡ, ಎಸ್ ಆರ್ ಮುಜಗೊಂಡ , ಆರ್ ಜೆ ಪಾಟೀಲ, ಎಂ.ಬಿ ಬಿರಾದಾರ, ಎಂ ಸಿ ಬಿರಾದಾರ, ಎಸ್ ಎಸ್ ಬಿರಾದಾರ, ಎಸ್ ಆರ್ ಬಿರಾದಾರ, ಎ.ಬಿ ಆಳೂರ, ಎಸ್ .ಎ ಚಾಂದಕವಟೆ ಸೇರಿದಂತೆ ಅನೇಕ ನ್ಯಾಯವಾದಿಗಳು ಇದ್ದರು.