Saturday, 21st September 2024

Hair Care Tips : ಹೇರ್ ಆಯಿಲ್ ನಿಮ್ಮ ಕೂದಲು ಉದುರುವಿಕೆಗೆ ಕಾರಣವಾಗುತ್ತಿದೆಯೇ? ಅದಕ್ಕೆ ಕಾರಣವೇನು ಗೊತ್ತಾ?

Hair Care Tips


ಬೆಂಗಳೂರು : ಕೂದಲಿಗೆ ಆಯಿಲ್ ಮಸಾಜ್ ಮಾಡುವುದು ಹಳೆಯ ವಿಧಾನವಾಗಿದೆ. ಬಹಳ ಹಿಂದಿನ ಕಾಲದಿಂದಲೂ ಜನರು ತಮ್ಮ ಕೂದಲಿಗೆ ಎಣ್ಣೆ ಮಸಾಜ್ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಕೂದಲಿಗೆ (Hair Care Tips )ಎಣ್ಣೆ ಮಸಾಜ್ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ಯಾಕೆಂದರೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಅವರ ಹೇರ್ ಸ್ಟೈಲ್ ಚೆನ್ನಾಗಿ ಕಾಣಿಸುವುದಿಲ್ಲ ಎಂದು. ಕೂದಲಿಗೆ ಎಣ್ಣೆ ಮಸಾಜ್ ಮಾಡುವುದರಿಂದ ಆರೋಗ್ಯಕರವಾದ ಕೂದಲನ್ನು ಪಡೆಯಬಹುದು. ಆದರೆ ಕೆಲವೊಮ್ಮೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲುದುರುವ ಸಮಸ್ಯೆಗಳು ಕಾಡಬಹುದು. ಯಾಕೆಂದರೆ ಸೂಕ್ತವಲ್ಲದ ಎಣ್ಣೆಗಳನ್ನು ಬಳಸುವುದು, ಅತಿಯಾಗಿ ಎಣ್ಣೆ ಹಚ್ಚುವುದು ಮುಂತಾದ ತಪ್ಪುಗಳು ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಅಂತಹ ತಪ್ಪುಗಳು ಯಾವುದೆಂಬುದನ್ನು ತಿಳಿಯಿರಿ.

Hair Care Tips

ಕೂದಲಿಗೆ ಅತಿಯಾಗಿ ಎಣ್ಣೆ ಹಚ್ಚುವುದು:
ಹೌದು, ಕೂದಲಿಗೆ ಎಣ್ಣೆ ಹಚ್ಚುವುದು ನಿಜವಾಗಿಯೂ ಒಳ್ಳೆಯದು ಆದರೆ ಅತಿಯಾಗಿ ಎಣ್ಣೆಯನ್ನು ಹಚ್ಚುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದ ಎಣ್ಣೆಯು ಜಿಡ್ಡಿನ ರಚನೆಗೆ ಕಾರಣವಾಗುತ್ತದೆ. ಇದು ಕೂದಲಿನ ಕಿರುಚೀಲಗಳನ್ನು ನಿರ್ಬಂಧಿಸುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಕೆಡಿಸುತ್ತದೆ. ಇದರಿಂದ ಶಿಲೀಂಧ್ರ ಮತ್ತು ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಕೂದಲಿಗೆ ಎಣ್ಣೆ ಮಸಾಜ್ ಮಾಡಿದರೆ ಸಾಕು.

ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚದಿರುವುದು:
ನೀವು ಕೂದಲಿಗೆ ಎಷ್ಟು ಎಣ್ಣೆ ಹಚ್ಚುತ್ತೀರಿ ಎಂಬುದು ಎಷ್ಟೇ ಮುಖ್ಯನೋ ನೀವು ಕೂದಲಿಗೆ ಹೇಗೆ ಎಣ್ಣೆ ಹಚ್ಚುತ್ತಿದ್ದೀರಿ ಎಂಬುದು ಅಷ್ಟೇ ಮುಖ್ಯವಾಗುತ್ತದೆ. ಸ್ವಚ್ಛವಾಗಿರದ ನೆತ್ತಿಯ ಮೇಲೆ ನೇರವಾಗಿ ಎಣ್ಣೆಯನ್ನು ಹಚ್ಚುವುದರಿಂದ ನೆತ್ತಿಯ ರಂಧ್ರಗಳು ಮುಚ್ಚುತ್ತವೆ. ಇದು ನೆತ್ತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಹಾಗಾಗಿ ನೆತ್ತಿ ಸ್ವಚ್ಛವಾಗಿರುವಾಗಲೇ ಎಣ್ಣೆ ಹಚ್ಚಿ. ಮತ್ತು ವೃತ್ತಾಕಾರದ ಚಲನೆಗಳಲ್ಲಿ ಬೆರಳುಗಳಿಂದ ನಿಮ್ಮ ನೆತ್ತಿಯನ್ನು ನಿಧಾನವಾಗಿ ಮಸಾಜ್ ಮಾಡಿ, ಏಕೆಂದರೆ ಅದು ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ಎಣ್ಣೆಯಂಶ ಕೂದಲಿನ ಕಿರುಚೀಲಗಳಿಗೆ ತಲುಪಲು ಸಾಧ್ಯವಾಗುತ್ತದೆ.

Hair Care Tips

ಎಣ್ಣೆಯನ್ನು ಸರಿಯಾಗಿ ತೊಳೆಯದಿರುವುದು:
ಎಣ್ಣೆಯನ್ನು ಹೆಚ್ಚು ಸಮಯ ಕೂದಲಿನಲ್ಲಿ ಇಟ್ಟುಕೊಳ್ಳುಸವುದರಿಂದ ಧೂಳು ಕೊಳೆ ಕೂದಲಿನಲ್ಲಿ ಸಂಗ್ರಹವಾಗಿ ಕೂದಲು ಉದುರುತ್ತದೆ. ಹಾಗೇ ಕೂದಲನ್ನು ಸರಿಯಾಗಿ ತೊಳೆಯದಿದ್ದರೆ ಎಣ್ಣೆಯಂಶ ಸ್ವಚ್ಛವಾಗುವುದಿಲ್ಲ. ಇದರಿಂದ ಕೂಡ ಕೂದಲು ಹಾನಿಗೊಳಗಾಗುತ್ತದೆ. ಹಾಗಾಗಿ ಎಣ್ಣೆಯನ್ನು ತೊಳೆಯುವಾಗ, ಉಗುರುಬೆಚ್ಚಗಿನ ನೀರನ್ನು ಬಳಸಿ, ಇದು ಎಣ್ಣೆಯಂಶವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುತ್ತದೆ.

ಬಿಸಿ ಎಣ್ಣೆ ಹಚ್ಚುವುದು
ಕೆಲವರಿಗೆ ಕೂದಲಿಗೆ ಹಚ್ಚುವ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚುವ ಅಭ್ಯಾಸವಿರುತ್ತದೆ. ಆದರೆ ಇದು ನೆತ್ತಿಯನ್ನು ಸುಡಬಹುದು ಅಥವಾ ಕೂದಲಿಗೆ ಹಾನಿಯಾಗಬಹುದು. ಬಿಸಿ ಎಣ್ಣೆಯನ್ನು ಎಂದಿಗೂ ನೆತ್ತಿಯ ಮೇಲೆ ನೇರವಾಗಿ ಹಚ್ಚಬೇಡಿ. ಅದನ್ನು ಉಗುರು ಬೆಚ್ಚಗೆ ಮಾಡಿಕೊಂಡು ಕೈಗಳಿಂದ ಮಸಾಜ್ ಮಾಡಿ.

ಅವಧಿ ಮೀರಿದ ಅಥವಾ ಕಡಿಮೆ-ಗುಣಮಟ್ಟದ ಎಣ್ಣೆಯ ಬಳಕೆ
ಮಾರುಕಟ್ಟೆಯಲ್ಲಿ ಹಲವು ಬಗೆಯ ಹೇರ್ ಆಯಿಲ್ ಗಳು ದೊರೆಯುತ್ತವೆ. ಹಾಗಾಗಿ ಜನರು ಅವುಗಳನ್ನು ಖರೀದಿಸಿ ತಂದು ಕೂದಲಿಗೆ ಹಚ್ಚುತ್ತಾರೆ. ಆದರೆ ಉತ್ತಮ ಗುಣಮಟ್ಟದ ಹೇರ್ ಆಯುಲ್ ಅನ್ನು ಬಳಸಿ. ಮತ್ತು ಎಕ್ಸ್ ಪರಿ ಡೇಟ್ ಅನ್ನು ಸರಿಯಾಗಿ ಗಮನಿಸಿ. ಅಥವಾ ನೈಸರ್ಗಿಕವಾಗಿ ತಯಾರಿಸಿದ ಎಣ್ಣೆಯನ್ನು ಬಳಸಿ. ಇಲ್ಲವಾದರೆ ಇದರಿಂದ ಕೂದಲು ಹಾನಿಗೊಳಗಾಗಬಹುದು.

ಪ್ರತಿದಿನ ಕೂದಲಿನ ಆರೈಕೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ:
ಪ್ರತಿದಿನ ಕೂದಲಿನ ಆರೈಕೆ ಮಾಡಿ. ಇದರಿಂದ ಆರೋಗ್ಯಕರವಾದ ಕೂದಲನ್ನು ಪಡೆಯಬಹುದು. ಕೂದಲನ್ನು ಆಗಾಗ್ಗೆ ತೊಳೆಯುವುದು, ಕಂಡೀಷನಿಂಗ್ ಮಾಡುವುದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಉತ್ತಮ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನೀರನ್ನು ಕುಡಿಯಿರಿ.

ಇದನ್ನೂ ಓದಿ: ಜಿಯೊ ವಾರ್ಷಿಕೋತ್ಸವ ಆಫರ್; ಆಯ್ದ ರೀಚಾರ್ಜ್‌ ಮೇಲೆ 700 ರೂ. ಮೌಲ್ಯದ ಬೆನಿಫಿಟ್‌

ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚುವುದು ಮತ್ತು ತೊಳೆಯುವುದು ಕೂದಲಿನ ಆರೈಕೆಗೆ ಬಹಳ ಒಳ್ಳೆಯದು. ಇದು ಕೂದಲು ಉದುರುವಿಕೆಯಂತಹ ಅನೇಕ ಕೂದಲಿನ ಸಮಸ್ಯಗೆಳನ್ನು ನಿವಾರಿಸುತ್ತದೆ. ಹಾಗಾಗಿ ಈ ಸಲಹೆಯನ್ನು ಪಾಲಿಸಿದರೆ ನೀವು ಆರೋಗ್ಯವಾದ ದಟ್ಟವಾದ ಕೂದಲನ್ನು ಪಡೆಯಬಹುದು.