Saturday, 21st September 2024

Daily Wage Workers: ದಿನಗೂಲಿ ನೌಕರರಿಗೆ ಗುಡ್ ನ್ಯೂಸ್ : ಕನಿಷ್ಠ ವೇತನ ನಿಗದಿಗೊಳಿಸಿದ ರಾಜ್ಯ ಸರಕಾರ

daily wage workers vidhana soudha

ಬೆಂಗಳೂರು: ದಿನಗೂಲಿ ನೌಕರರಿಗೆ (Daily Wage Workers) ಕನಿಷ್ಠ ವೇತನ (minimum Salary) ನಿಗದಿಗೊಳಿಸಿ ರಾಜ್ಯ ಸರಕಾರ (Karnataka Government) ಆದೇಶಿಸಿದೆ. ಜೊತೆಗೆ ಅರ್ಹ ದಿನಗೂಲಿ ನೌಕರರಿಗೆ 2024ರ ಪರಿಷ್ಕೃತ ವೇತನ ಶ್ರೇಣಿಗಳನ್ವಯ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡಿ ಆದೇಶಿಸಲಾಗಿದೆ.

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡಾವಳಿಯನ್ನು ಹೊರಡಿಸಿದ್ದು, ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ನ್ನು ಜಾರಿಗೆ ತರಲಾಗಿದೆ.

19.09.2014ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಸೇವಾ ಮುಂದುವರಿಕೆಗೆ ಅರ್ಹರಾದ ದಿನಗೂಲಿ ನೌಕರರಿಗೆ ಇವರುಗಳನ್ನು ಅಧಿಸೂಚಿಸಿದ ದಿನಾಂಕದಿಂದ ಅವರನ್ನು ಮುಂದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನ, ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿಭತ್ಯೆಯ ಶೇಕಡ 75ರಷ್ಟು ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ಅವರುಗಳು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯ ಸಾಮಾನ್ಯ ದರಗಳ ಶೇಕಡ 75ರಷ್ಟನ್ನು ಅರ್ಹ ದಿನಗೂಲಿ ನೌಕರರಿಗೆ, ಅವರನ್ನು ಮುಂದುವರೆಸುವ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನದ ಮೇಲೆ ಮನೆ ಬಾಡಿಗೆ ಭತ್ಯೆಯಾಗಿ ಮಂಜೂರು ಮಾಡುವಂತೆ ಆದೇಶಿಸಲಾಗಿದೆ ಹಾಗೂ ಇವರುಗಳು ಅರ್ಹರಿರುವ ಇತರ ಸೌಲಭ್ಯಗಳ ಕುರಿತು ಆದೇಶ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಅಧಿಸೂಚಿಸಲ್ಪಟ್ಟ ದಿನಗೂಲಿ ನೌಕರರಿಗೆ ದಿನಾಂಕ: 1.8.2018ರಿಂದ ಜಾರಿಗೆ ಬರುವಂತೆ 2018ರ ಪರಿಷ್ಕೃತ ವೇತನ ಶ್ರೇಣಿಗಳನ್ನಯ ಅವರುಗಳನ್ನು ಮುದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನವನ್ನು ದಿನಾಂಕ: 1.8.2018ರಿಂದ ಜಾರಿಗೆ ಬರುವಂತೆ ನಿಗದಿಗೊಳಿಸಿ ಆದೇಶಿಸಲಾಗಿದೆ ಎಂದಿದ್ದಾರೆ.

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಅಧಿಸೂಚಿಸಲ್ಪಟ್ಟ, ದಿನಗೂಲಿ ನೌಕರರಿಗೆ ದಿನಾಂಕ: 19.9.2014ರ ಆದೇಶದಂತೆ ನೀಡಲಾಗುತ್ತಿದ್ದ ಶೇಕಡ 75ರಷ್ಟು ತುಟ್ಟಿಭತ್ಯೆಯನ್ನು ಶೇಕಡ 90ಕ್ಕೆ ಹಾಗೂ ಶೇಕಡ 75ರಷ್ಟು ನೀಡುತ್ತಿದ್ದ ಮನೆ ಬಾಡಿಗೆ ಭತ್ಯೆಯನ್ನು ಶೇಕಡ 90ಕ್ಕೆ ನಿಗದಿಪಡಿಸಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಗಳನ್ನು ಸರ್ಕಾರವು ಮಂಜೂರು ಮಾಡಿರುತ್ತದೆ. ಮೇಲೆ (1) ಹಾಗೂ (2)ರಲ್ಲಿ ಓದಲಾದ ಅಧಿನಿಯಮ ಹಾಗೂ ಸರ್ಕಾರದ ಆದೇಶಗಳಲ್ಲಿ ಕಲ್ಪಿಸಲಾಗಿರುವ ಅವಕಾಶಗಳಂತೆ ಈ ಪರಿಷ್ಕೃತ ವೇತನಗಳನ್ವಯ ಅರ್ಹ ದಿನಗೂಲಿ ನೌಕರರ ಆರ್ಥಿಕ ಸೌಲಭ್ಯಗಳನ್ನು ಕೂಡ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ, 2012ರನ್ವಯ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ ದಿನಾಂಕ: 01.09.2024ರಿಂದ ಜಾರಿಗೆ ಬರುವಂತೆ ಈ ಕೆಳಕಂಡ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  1. 2024ರ ಪರಿಷ್ಕೃತ ವೇತನ ಶ್ರೇಣಿಗಳನ್ವಯ ಅವರುಗಳನ್ನು ಸೇವೆಯಲ್ಲಿ ಮುಂದುವರೆಸಿದ ಹುದ್ದೆಯ ಕಾಲಿಕ ಶ್ರೇಣಿಯ ಕನಿಷ್ಠ ವೇತನವನ್ನು ನಿಗದಿಗೊಳಿಸತಕ್ಕದ್ದು,
  2. ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿಭತ್ಯೆಯ ಶೇಕಡ 90ರಷ್ಟು ಅರ್ಹ ದಿನಗೂಲಿ ನೌಕರರಿಗೆ ಅವರನ್ನು ಮುಂದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನದ ಮೇಲೆ ತುಟ್ಟಿ ಭತ್ಯೆಯಾಗಿ ಮಂಜೂರು ಮಾಡತಕ್ಕದ್ದು

3.ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ, ಅವರುಗಳು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆ ಸಾಮಾನ್ಯ ದರಗಳ ಶೇಕಡ 90ರಷ್ಟು ಅರ್ಹ ದಿನಗೂಲಿ ನೌಕರರಿಗೆ ಅವರನ್ನು ಮುಂದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನದ ಮೇಲೆ ಮನೆ ಬಾಡಿಗೆ ಭತ್ಯೆಯಾಗಿ ಮಂಜೂರು ಮಾಡತಕ್ಕದ್ದು. ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: FD 598 Exp-12/2024, ದಿನಾಂಕ: 04.09.2024ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ.

ಇದನ್ನೂ ಓದಿ: Job News: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ