Friday, 22nd November 2024

Young India School: ಸಾಧನೆ ಮಾಡಲು ಆಸಕ್ತಿ ಮತ್ತು ಗುರಿ ಸಾಧಿಸ ಬೇಕೆಂಬ ಛಲ ಇರಬೇಕು-ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕ ಪ್ರೊ.ಡಿ.ಶಿವಣ್ಣ

ಬಾಗೇಪಲ್ಲಿ: ಕೃಷಿ, ಕ್ರೀಡೆ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆಸಕ್ತಿ ಮತ್ತು ಗುರಿ ಸಾಧಿಸಬೇಕೆಂಬ ಛಲ ಇರಬೇಕು ಎಂದು ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕರಾದ ಪ್ರೊ.ಡಿ.ಶಿವಣ್ಣ ತಿಳಿಸಿದರು.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುವ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಮಕ್ಕಳಿಗೆ ಪಟ್ಟಣದ ಶಾಲೆ ಆವರಣದಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿ,  ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಕ್ಕಳಲ್ಲಿನ ಪ್ರತಿಭೆ ಯನ್ನು ಗುರ್ತಿಸಿ ಪ್ರೋತ್ಸಾಹಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ಅದೇ ರೀತಿಯಲ್ಲಿ ಮಕ್ಕಳ ಪೋಷಕರ ಪಾತ್ರವೂ ಸಹ ಅಷ್ಟೇ ಮುಖ್ಯ ಮತ್ತು ಜವಾಬ್ದಾರಿ ಇರುತ್ತೆ ಎಂದ ಅವರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಶಾಲೆಯ ಮಕ್ಕಳನ್ನು ಅಭಿನಂಧಿಸಿದರು.

೨೦೦ ಮೀಟರ್ ಓಟದಲ್ಲಿ ಜಯಶ್ರೀ (ಪ್ರಥಮ ಸ್ಥಾನ), ಡಿಸ್ಕಸ್ ಥ್ರೋ-ಹೇಮಶ್ರೀ(ಪ್ರಥಮ ಸ್ಥಾನ), ಜಾವಲಿನ್ ಥ್ರೋ-ಧನುಷ್ (ಪ್ರಥಮ ಸ್ಥಾನ), ಉದ್ದ ಜಿಗಿತ-ಜೋಯ(ಪ್ರಥಮ ಸ್ಥಾನ), ಷಟಲ್ ಬ್ಯಾಟ್‌ಮಿಟನ್, ಕೋ, ಮತ್ತಿತರ ವಾಲಿಬಾಲ್, ಹ್ಯಾಂಡ್ ಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ವಿಜೇತರಾಗಿ ತಾಲೂಕು ಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡೆಗಳಲ್ಲಿ ಸ್ಪರ್ಧಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕಕಕ್ಷಕರಾದ ಟಿ. ಮಾಂಜಿನಪ್ಪ ಮತ್ತು ಅಮರನಾಥ್ ಕೆ.ರವರನ್ನು ಶಾಲೆಯ ಸಂಸ್ಥಾಪಕ ಪ್ರೊ.ಡಿ.ಶಿವಣ್ಣ, ಮುಖ್ಯ ಶಿಕ್ಷಕಿ ಕಲ್ಪನಾ ಆರ್ ರವರು ಅಭಿನಂಧಿಸಿದರು.

ಇದನ್ನೂ ಓದಿ: Chickballapur News: ಜನಪ್ರತಿನಿಧಿ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅರಿವು ಮೂಡಿಸುವುದೇ ಶಾಲಾ ಸಂಸತ್-ಬಿಇಒ ವೆಂಕಟೇಶ್