Friday, 22nd November 2024

KL Rahul : ಪಂತ್‌ ಔಟಾಗುವ ಮೊದಲೇ ಬ್ಯಾಟ್ ಮಾಡಲು ಹೊರಟ ಕೆ. ಎಲ್ ರಾಹುಲ್‌!

KL Rahul

ಬೆಂಗಳೂರು : ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿಯ ಪಂದ್ಯದ ವೇಳೆ ಕೆ. ಎಲ್‌ ರಾಹುಲ್‌ (KL Rahul) ಪೇಚಿಗೆ ಸಿಲುಕಿದ ಪ್ರಸಂಗವೊಂದು ನಡೆಯಿತು. ರಿಷಭ್ ಪಂತ್ ಔಟಾಗುವ ಮೊದಲೇ ಅವರು ಬ್ಯಾಟಿಂಗ್ ಮಾಡಲು ಹೊರಟು ಬಳಿಕ ಕುಳಿತುಕೊಳ್ಳುವಂತಾಯಿತು. ಈ ಎಲ್ಲ ದೃಶ್ಯಗಳು ನೇರ ಪ್ರಸಾರದ ಕ್ಯಾಮೆರಾದಲ್ಲಿ ಸೆರೆಯಾದವು.

ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರು ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್‌ ರಿಷಭ್ ಪಂತ್ ಅವರಿಗೆ ಜೀವದಾನ ನೀಡಿದಾಗಿ ಈ ಪ್ರಸಂಗ ನಡೆಯಿತು. ಹುಸೇನ್‌ ಸರಳ ಕ್ಯಾಚ್ ಅನ್ನು ಕೈಬಿಟ್ಟ ಕಾರಣ ಇದು ಸಂಭವಿಸಿತು. ಚೆಂಡು ಮೇಲಕ್ಕೆ ಏರುತ್ತಿದ್ದಂತೆ ರಿಷಭ್ ಔಟಾಗುತ್ತಾರೆ ಎಂದು ಅಂದುಕೊಂಡ ರಾಹುಲ್ ಬ್ಯಾಟಿಂಗ್‌ಗೆ ಹೊರಟರು. ಶಕೀಬ್ ಅಲ್ ಹಸನ್ ಅವರ ಬೌಲಿಂಗ್‌ನಲ್ಲಿ ನಜ್ಮುಲ್ ಹುಸೇನ್ ಶಾಂಟೊ ಕ್ಯಾಚ್ ಕೈಬಿಡುವ ಮೊದಲು ಈ ಪ್ರಸಂಗ ನಡೆಯಿತು.

ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಬಾರಿಸಿದ್ದಾರೆ. ಎಡಗೈ ಬ್ಯಾಟರ್‌ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಶತಕ ಬಾರಿಸಿದರು. 2022 ರಲ್ಲಿ ಗಂಭೀರ ಅಪಘಾತದಿಂದ ಚೇತರಿಸಿಕೊಂಡ ಅವರು ಮೊದಲ ಪಂದ್ಯದಲ್ಲಿಯೇ ಶತಕ ಬಾರಿಸಿ ಮಿಂಚಿದರು.

ಪಂತ್ ಅವರ ಹಿಂದಿನ ಟೆಸ್ಟ್ ಅರ್ಧಶತಕವು ಡಿಸೆಂಬರ್ 23, 2022 ರಂದು ಮಿರ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧಮೂಡಿ ಬಂದಿತ್ತು. ಗಂಭೀರ ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಋತುವಿನಲ್ಲಿ ಪ್ರಭಾವಶಾಲಿ ಪುನರಾಗಮನ ಮಾಡಿದ್ದರು. ಜೂನ್‌ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಭಾರತದ ಗೆಲುವಿನಲ್ಲಿ ಎಡಗೈ ಬ್ಯಾಟ್ಸ್ಮನ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಬ್ಯಾಟಿಂಗ್‌ ಇಳಿದ ಕೆಎಲ್ ರಾಹುಲ್

ಭಾರತದ ಎರಡನೇ ಇನ್ನಿಂಗ್ಸ್‌ನ 49 ನೇ ಓವರ್‌ನ ಆರನೇ ಎಸೆತದಲ್ಲಿ ಈ ಪ್ರಸಂಗ ನಡೆಯಿತು. ರಿಷಭ್ ಪಂತ್ ಶಕೀಬ್ ಅಲ್ ಹಸನ್ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿ ದೊಡ್ ಹೊಡೆತ ಬಾರಿಸಲು ಮುಂದಾದರು. ಚೆಂಡು ಗಾಳಿಯಲ್ಲಿ ಹಾರಿತು. ಮಿಡ್ ವಿಕೆಟ್ ಬಳಿ ಇದ್ದ ನಜ್ಮುಲ್ ಹುಸೇನ್ ಶಾಂಟೊ ಅವರಿಗೆ ಚೆಂಡು ಹಿಡಿಯಲು ಸಾಕಷ್ಟು ಸಮಯವಿತ್ತು. ಆದರೆ ಅವರು ಕ್ಯಾಚ್ ಪಡೆಯಲು ವಿಫಲರಾದರು.

ಇದನ್ನೂ ಓದಿ : Rishabh Pant : ದುಲೀಪ್ ಟ್ರೋಫಿ ಪಂದ್ಯದ ವೇಳೆ ಎದುರಾಳಿ ತಂಡಕ್ಕೆ ಮೋಸ ಮಾಡಿದ ರಿಷಭ್‌ ಪಂತ್‌!

ಭಾರತದ ಡಗ್‌ಔಟ್‌ ಕುರ್ಚಿಯಲ್ಲಿ ಕುಳಿತಿದ್ದ ಕೆಎಲ್ ರಾಹುಲ್ ಬ್ಯಾಟಿಂಗ್‌ಗೆ ಸಿದ್ಧರಾಗಲು ಮುಂದಾದರು. ಆದಾಗ್ಯೂ, ಶಾಂಟೊ ಕ್ಯಾಚ್ ಬಿಟ್ಟ ನಂತರ ಅವರು ಮತ್ತೆ ಕುಳಿತು. ಈ ವೀಡಿಯೊ ಕ್ಲಿಪ್ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯಿತು.