Friday, 22nd November 2024

Pregnancy Food: ಗರ್ಭಧಾರಣೆ ಮತ್ತು ಹೆರಿಗೆ ನಂತರ ಸೇವಿಸುವ ಆಹಾರದ ಬಗ್ಗೆ ಇರುವ ಈ ವಿಚಾರ ನಿಜವೇ? ಸುಳ್ಳೆ?

Pregnancy Food

ಗರ್ಭಿಣಿಯರು (Pregnancy Food) ತಮ್ಮ ಆರೋಗ್ಯದ ಜೊತೆಗೆ ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಯಾಕೆಂದರೆ ಆ ಆಹಾರದಿಂದಾಗುವ ಹಾನಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲಾಗುತ್ತದೆ. ಹಾಗಾಗಿ, ಗರ್ಭಿಣಿಯಾದ ಮೇಲೆ ಮತ್ತು ಹೆರಿಗೆಯಾದ ಮೇಲೆ ಅದನ್ನು ತಿನ್ನಬೇಡ, ಇದನ್ನು ತಿನ್ನಬೇಡ ಎಂದು ನಮ್ಮ ಹಿರಿಯರು ಸಲಹೆ ನೀಡುತ್ತಾರೆ. ಆದರೆ ತಾಯಂದಿರು ಆರೋಗ್ಯವಾಗಿರಲು ಆಹಾರದ ಅಗತ್ಯ ಸಾಕಷ್ಟಿದೆ. ಹಾಗಾಗಿ ತಾಯಂದಿರಿಗೆ ಏನು ತಿನ್ನಬೇಕು? ಏನು ತಿನ್ನಬಾರದು ?ಎಂದು ಗೊಂದಲವಾಗುತ್ತದೆ. ಹಾಗಾಗಿ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

Pregnancy Food

ಹಾಲುಣಿಸುವ ತಾಯಂದಿರು ಕೆಲವು ಆಹಾರ ಮತ್ತು ಮಸಾಲೆಗಳಿಂದ ದೂರವಿರಬೇಕು
ಹೆರಿಗೆಯಾದ ತಾಯಂದಿರು ಮಸಾಲೆಯುಕ್ತ ಬೆಳ್ಳುಳ್ಳಿ, ಈರುಳ್ಳಿ ಮತ್ತು ಇತರ ಬಲವಾದ ರುಚಿಯ ಆಹಾರಗಳನ್ನು ತಪ್ಪಿಸಬೇಕು. ಈ ಆಹಾರಗಳು ಎದೆ ಹಾಲಿನ ರುಚಿಯನ್ನು ಬದಲಾಯಿಸಬಹುದು ಮತ್ತು ಮಗುವಿಗೆ ಹೊಟ್ಟೆಯ ಸಮಸ್ಯೆಯನ್ನು ಉಂಟುಮಾಡಬಹುದು ಎಂದು ನಂಬುತ್ತಾರೆ. ಆದರೆ ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಬೆಳ್ಳುಳ್ಳಿಯನ್ನು ಬಳಸಬೇಕು. ಹಾಗೇ ಇತರ ಮಸಾಲೆಗಳನ್ನು ಸೇವಿಸುವುದರಿಂದ ಮಗುವಿಗೆ ಮಸಾಲೆಗಳ ರುಚಿ ತಿಳಿಯುತ್ತದೆ.

ಸಿಹಿತಿಂಡಿಗಳು ಮತ್ತು ತುಪ್ಪವನ್ನು ತಿಂದರೆ ಬೇಗ ಚೇತರಿಸಿಕೊಳ್ಳಬಹುದು:
ಹೆಚ್ಚಿನ ಕಡೆಗಳಲ್ಲಿ  ತಾಯಂದಿರ ದೇಹಕ್ಕೆ  ಶಕ್ತಿ ಸಿಗಲು  ಮತ್ತು ಹಾಲಿನ ಉತ್ಪಾದನೆಯನ್ನು ಸುಧಾರಿಸಲು ಹೆಚ್ಚಿನ ಪ್ರಮಾಣದ ತುಪ್ಪ  ಮತ್ತು ಸಿಹಿತಿಂಡಿಗಳನ್ನು ಸೇವಿಸಲು ಹೇಳಲಾಗುತ್ತದೆ. ತುಪ್ಪ ಮತ್ತು ಸಿಹಿತಿಂಡಿಗಳು ಕ್ಯಾಲೊರಿಗಳನ್ನು ಒದಗಿಸುತ್ತವೆಯಾದರೂ, ಇವು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುವುದಿಲ್ಲ.

ಸ್ತನ್ಯಪಾನದ ಸಮಯದಲ್ಲಿ ಇಬ್ಬರಿಗೆ ಆಗುವಷ್ಟು ಆಹಾರ ಸೇವಿಸಬೇಕು:
ಸ್ತನ್ಯಪಾನದ ಸಮಯದಲ್ಲಿ  ಕ್ಯಾಲೊರಿ ಅಗತ್ಯವಾಗಿ ಬೇಕಾಗುತ್ತದೆಯೇ ಹೊರತು ತಾಯಿ ಇಬ್ಬರು ತಿನ್ನುವಷ್ಟು ಆಹಾರ ಸೇವಿಸಬೇಕು ಎಂದರ್ಥವಲ್ಲ ಸಾಮಾನ್ಯವಾಗಿ, ಹಾಲುಣಿಸುವ ತಾಯಂದಿರಿಗೆ ದಿನಕ್ಕೆ ಹೆಚ್ಚುವರಿ 300-500 ಕ್ಯಾಲೊರಿಗಳು ಬೇಕಾಗುತ್ತವೆ.  ಇದು ಆಹಾರದ ಪ್ರಮಾಣಕ್ಕಿಂತ ಎರಡು ಪಟ್ಟು ಅಲ್ಲ. ಅತಿಯಾಗಿ ತಿನ್ನುವುದು ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ  ತಾಯಿ ತನ್ನ ಹೊಟ್ಟೆ ತುಂಬುವಷ್ಟೇ ತಿಂದರೆ ಸಾಕು. ಆದರೆ ಪೋಷಕಾಂಶಯುಕ್ತ ಆಹಾರ ಸೇವಿಸಿ.

Pregnancy Food

ತಂಪಾದ ಆಹಾರಗಳು ಮತ್ತು ಜ್ಯೂಸ್‍ಗಳನ್ನು ತಪ್ಪಿಸಿ:
ತಾಯಂದಿರು ತಂಪಾದ ಆಹಾರ ಮತ್ತು ಜ್ಯೂಸ್‍ಗಳನ್ನು ಕುಡಿಯುವುದನ್ನು ತಪ್ಪಿಸಬೇಕು ಎಂದು ಹೇಳುತ್ತಾರೆ. ಏಕೆಂದರೆ ಅವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಹೆರಿಗೆಯ ಬಳಿಕ ತಾಯಂದಿರು ತಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಹಾರ ಮತ್ತು ಹಣ್ಣಿನ ಜ್ಯೂಸ್‌ಗಳನ್ನು ಕುಡಿಯಬೇಕಾಗುತ್ತದೆ.

ಸರಿಯಾದ ಪೋಷಣೆಯು ಹೆರಿಗೆಯ ನಂತರದ ಖಿನ್ನತೆಯನ್ನು ತಡೆಯುತ್ತದೆ:
ಹೆರಿಗೆಯ ನಂತರದ ಆರೈಕೆಯು ದೇಹಕ್ಕೆ ಶಕ್ತಿಯನ್ನು ತುಂಬಬಹುದು. ಆದರೆ ತಾಯಂದಿರು ಮಾನಸಿಕವಾಗಿ ಸದೃಢರಾಗಲು ಮಾನಸಿಕ ತಜ್ಞರ ಅವಶ್ಯಕತೆ ಇರುತ್ತದೆ. ಹಾಗಾಗಿ ತಾಯಂದಿರಲ್ಲಿ ಖಿನ್ನತೆಯ ರೋಗಲಕ್ಷಣಗಳನ್ನು ಕಾಣಿಸಿಕೊಂಡರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

ತಾಯಂದಿರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಬೇಕು:
ಮನೆಯಲ್ಲಿ ತಯಾರಿಸಿದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ  ಸ್ತನ್ಯಪಾನ ಮಾಡಿದ ಮೂರು ತಿಂಗಳವರೆಗೆ ತಾಯಂದಿರಿಗೆ  ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ಸೂಚಿಸಲಾಗಿದೆ. ಅದರ ನಂತರ, ತಾಯಂದಿರು ತಮ್ಮ ಮಗುವಿನ ಸ್ಥಿತಿಗೆ ಅನುಗುಣವಾಗಿ ಬೇರೆ ಕಡೆಯ ಆಹಾರವನ್ನು ಸೇವಿಸಬಹುದು. ಅಂಗಡಿಗಳಿಂದ ಖರೀದಿಸಿದ ಆರೋಗ್ಯಕರ ಆಹಾರವನ್ನು  ಸೇವಿಸಬಹುದು.

ಇದನ್ನೂ ಓದಿ:ಪಿಸಿಒಎಸ್ ಸಮಸ್ಯೆ ಇರುವವರು ಡೈರಿ ಉತ್ಪನ್ನಗಳನ್ನು ಸೇವಿಸಬಹುದೇ?

ಈ ಸಲಹೆಗಳನ್ನು ಅನುಸರಿಸುವ ಮೂಲಕ ತಾಯಂದಿರು ತಮ್ಮ ಜೊತೆಗೆ ತಮ್ಮ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗೇ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ವೈದ್ಯರ ಸಹಾಯ, ಸಲಹೆ ಪಡೆಯಿರಿ.