Saturday, 21st September 2024

ISRO HSFC Recruitment 2024: ಇಸ್ರೋದಲ್ಲಿದೆ ಉದ್ಯೋಗಾವಕಾಶ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ISRO HSFC Recruitment 2024

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಬೆಂಗಳೂರಿನಲ್ಲಿರುವ ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ (Human Space Flight Centre-HSFC) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಿದೆ. ಟೆಕ್ನೀಷಿಯನ್‌, ಮೆಡಿಕಲ್‌ ಆಫೀಸರ್‌ ಸೇರಿ ಒಟ್ಟು 103 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ (ISRO HSFC Recruitment 2024). 10ನೇ ತರಗತಿ, ಐಟಿಐ, ಪದವಿ ಮುಂತಾದ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಅಕ್ಟೋಬರ್‌ 9 (Job Guide)

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮೆಡಿಕಲ್‌ ಆಫೀಸರ್‌- 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್‌, ಎಂ.ಡಿ
ಸೈಂಟಿಸ್ಟ್ ಎಂಜಿನಿಯರ್- 10 ಹುದ್ದೆ, ವಿದ್ಯಾರ್ಹತೆ: ಬಿ.ಇ ಅಥವಾ ಬಿ.ಟೆಕ್‌ ಅತವಾ ಎಂ.ಟೆಕ್‌
ಟೆಕ್ನಿಕಲ್ ಅಸಿಸ್ಟೆಂಟ್- 28 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ
ಸೈಂಟಿಫಿಕ್ ಅಸಿಸ್ಟೆಂಟ್- 1 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ, ಪದವಿ
ಟೆಕ್ನೀಷಿಯನ್‌-ಬಿ (ಫಿಟ್ಟರ್)- 22 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 12 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ (ಎಸಿ ಮತ್ತು ರೆಫ್ರಿಜರೇಷನ್‌)- 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ವೆಲ್ಡರ್) 2 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಮೆಷಿನಿಸ್ಟ್) 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಎಲೆಕ್ಟ್ರಿಕಲ್)- 3 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಟರ್ನರ್) 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಗ್ರೈಂಡರ್) 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಡ್ರಾಫ್ಟ್‌ಮ್ಯಾನ್‌-ಬಿ- (ಮೆಕ್ಯಾನಿಕಲ್)- 9 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಡ್ರಾಫ್ಟ್‌ಮ್ಯಾನ್‌-ಬಿ- (ಸಿವಿಲ್)-4 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಅಸಿಸ್ಟಂಟ್‌- (ರಾಜಭಾಷಾ) 5 ಹುದ್ದೆ, ವಿದ್ಯಾರ್ಹತೆ: ಪದವಿ

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ISRO HSFC Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://cdn.digialm.com/EForms/configuredHtml/1258/90047/Registration.html)
  • ಹೆಸರು ನೋಂದಾಯಿಸಿ ಲಾಗಿನ್‌ ಆಗಿ.
  • ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಿ
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂ ಡೌಲನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಈ ಸುದ್ದಿಯನ್ನೂ ಓದಿ: Job News: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ