Sunday, 15th December 2024

ಪಿಂಚಣಿ, ಸಬ್ಸಿಡಿ ವಿಳಂಬ ನಿವಾರಿಸಿ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ನಮ್ಮ ಸಮಾಜದಲ್ಲಿ ಜೀವನ ನಿರ್ವಹಣೆಗಾಗಿ ಹಲವಾರು ರೀತಿಯ ವೃತ್ತಿ, ಕಾಯಕವನ್ನು ನಡೆಸುವ ವರ್ಗ ವಿದೆ. ಅದರಲ್ಲಿ ಸರಕಾರಿ ನೌಕರ, ದಿನಗೂಲಿ ನೌಕರ, ಖಾಸಗಿ ನೌಕರ, ಗುತ್ತಿಗೆ ನೌಕರ, ಕಮೀಷನ್ ಏಜೆಂಟ್, ಮಾರುಕಟ್ಟೆ ಉದ್ಯೋಗ, ವ್ಯಾಪಾರ, ವಹಿವಾಟು ಹೀಗೆ ಬದುಕಿನ ಬಂಡಿ ಎಳೆಯಲು ಮನುಷ್ಯ ಹತ್ತು ಹಲವು ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾನೆ. ಈ ಎಲ್ಲಾ ವೃತ್ತಿಯ ಮೂಲ ಫಲಿತಾಂಶ ಅಂತಿಮವಾಗಿ ಹೊಟ್ಟೆಪಾಡಿಗಾಗಿ ಅಥವಾ ಬದುಕುವುದಕ್ಕಾಗಿಯೇ ಆಗಿರುತ್ತದೆ.

ಉದ್ಯೋಗಂ ಪುರುಷ ಲಕ್ಷಣಂ ಎಂಬ ನಾಣ್ಣುಡಿಯಂತೆ ಸ್ವಾಭಿಮಾನದ ಬದುಕಿಗಾಗಿ ಪುರುಷನಿಗೆ ಉದ್ಯೋಗ ವೆಂಬುವುದು ಬೇಕೇ ಬೇಕು. ಇವುಗಳ ಮಧ್ಯೆ ನಮ್ಮ ಕಣ್ಣ ಮುಂದೆ ಅಸಹಾಯಕ, ನಿರ್ಗತಿಕ ವರ್ಗಗಳು ಕೂಡ ಗೋಚರಿಸುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಮನೆಗೆ ಆಧಾರಸ್ತಂಭವಾಗಿದ್ದ ಪತಿಯನ್ನು ಕಳೆದುಕೊಂಡ ವಿಧವೆ ಹೆಂಗಸರು, ಅರವತ್ತು ವರ್ಷ ಕಳೆದ ಬಳಿಕ ಸುಕ್ಕುಗಟ್ಟಿದ ದೇಹ, ದುಡಿದು ತಿನ್ನಲಾಗದ ಶರೀರವನ್ನು ಹೊಂದಿರುವ ವೃದ್ಧೆಯರು, ಸಮಾಜದಲ್ಲಿ ತಾವು ಮಾಡದ ತಪ್ಪಿಗೆ ಅಥವಾ ಇನ್ಯಾವುದೋ ಪೂರ್ವ ಜನ್ಮದ ಪಾಪವೆಂಬಂತೆ ಕಣ್ಣು ಕಾಣದ, ಕೈಕಾಲು ಕಳೆದುಕೊಂಡ, ಮಾತು ಬಾರದ ಅಂಗವಿಕಲರು, ಮಹಾಮಾರಿ ಎಂಡೋ ಸಲ್ಫಾನ್ ರೋಗಕ್ಕೆ ತುತ್ತಾಗಿ ಹುಟ್ಟಿನಿಂದಲೇ ಮಕ್ಕಳು ಎಂಡೋಪೀಡಿತರಾಗಿ ನೆಲದಲ್ಲಿ ಹೊರಳಾ ಡುತ್ತಾ ಸ್ಥೂಲ ಶರೀರವನ್ನು ಹೊಂದಿರುವ ಎಂಡೋಪೀಡಿತರು ಇವೆಲ್ಲವೂ ಅಸಹಾಯಕ ಅಥವಾ ನಿರ್ಗತಿಕ ವರ್ಗ ಎಂಬುವುದಾಗಿ ಸರಕಾರ ಪರಿಗಣಿಸಿದೆ.

ಇದಕ್ಕೆ ಪೂರಕವಾಗಿ ಸರಕಾರ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿನಿ, ಅಂಗವಿಕಲ ವೇತನ, ವಿಧವಾ ವೇತನ, ಎಂಡೋ ಪೀಡಿತರಿಗೆ ಸಹಾಯಧನ, ಹೀಗೆ 500 ರುಪಾಯಿಗಳಿಂದ ಒಂದು ಸಾವಿರ ರುಪಾಯಿಗಳವರೆಗೆ ಮಾಸಾಶನಗಳನ್ನು ನಿಗದಿಪಡಿಸಿ ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಾ ಬರುತ್ತಿದೆ.

ಈ ಎಲ್ಲಾ ಅಸಹಾಯಕ ಕುಟುಂಬಗಳು ಶೇ.80ರಷ್ಟು ಇಂತಹ ಮಾಸಾಶನಗಳನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆಂಬುವುದು ಕೂಡ ಕಟು ವಾಸ್ತವ. ಈ ಮಧ್ಯೆ ಕಳೆದ 7-8 ತಿಂಗಳ ಹಿಂದೆ ಇಡೀ ಜಗತ್ತಿಗೆ ಅಪ್ಪಳಿ ಸಿದ ಕರೋನಾ ಮಹಾಮಾರಿಯಿಂದ ಲಾಕ್ ಡೌನ್ ಉಂಟಾಗಿ ಜಾಗತಿಕ ಮಟ್ಟದಲ್ಲಿಯೇ ಆರ್ಥಿಕ ಬಿಕ್ಕಟ್ಟು ಉಂಟಾಗಿ ಸರಕಾರದ ಬೊಕ್ಕಸಗಳು ಬರಿದಾಗಿ ಜನಸಾಮಾನ್ಯರು ಒಂದಷ್ಟು ಪರದಾಡಬೇಕಾದ ಸ್ಥಿತಿಗೆ ತಲು ಪಿತು.

ಬಳಿಕ ಲಾಕ್ ಡೌನ್ ತೆರವಾಗಿ ಜನಜೀವನ ಸಹಜ ಸ್ಥಿತಿಗೆ ತಲುಪಿದ್ದರೂ ಕಳೆದ 6-7 ತಿಂಗಳಿನಿಂದ ಇಂಥ ಅಸಹಾಯಕ ವರ್ಗಗಳಿಗೆ ಸರಕಾರದ ಸಹಾಯಧನಗಳು ಖಾತೆಗಳಿಗೆ ಜಮೆಯಾಗುವುದು ಸ್ಥಗಿತಗೊಂಡಿದೆ. ಈ ಸಹಾಯಧನ ಇಂತಹ ಕುಟುಂಬಗಳಿಗೆ ಮೂಲಭೂತ ಹಕ್ಕೇ ಸರಿ. ಆಸೆಗಣ್ಣಿನಿಂದ ಬ್ಯಾಂಕ್ ಪಾಸ್ ಬುಕ್ ಹಿಡಿದು ಬ್ಯಾಂಕ್, ಅಂಚೆ ಕಚೇರಿಗೆ ಅಲೆದಾಡಿದ್ದೇ ಬಂತು.

ವಿಚಾರಿಸಿದಾಗ ಕರೋನಾ ಕಾರಣದಿಂದ ಸರ ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಒಂದು ಉತ್ತರವಾದರೆ, ಮತ್ತೆ ಕೆಲವೆಡೆ ಇಂತಹ ನಿರ್ಗತಿಕರ ಸಹಾಯ ಧನದಲ್ಲೂ ಮೋಸವೆಸಗಿ ಎರಡು ಮೂರು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಒಂದೇ ಕುಟುಂಬದ ಬೇರೆ ಬೇರೆ ಯವರ ಹೆಸರಿನಲ್ಲಿ ಸಹಾಯಧನ ಪಡೆಯುವುದು, ಸುಳ್ಳು ದಾಖಲೆಗಳನ್ನು ನೀಡಿ ಹಣ ಪಡೆಯುವುದು ಸಾಕಷ್ಟು ಕಂಡು ಬಂದ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕೆಂಬ ನಿಯಮ ಜಾರಿಗೆ ಬಂದಿರುವುದರಿಂದ ಒಂದಷ್ಟು ತಾಂತ್ರಿಕ ಸಮಸ್ಯೆ ಗಳು ಇಲ್ಲೂ ಕಂಡು ಬಂದಿದೆ.

ಮೂರು  ಹೊತ್ತಿನ ಅನ್ನ, ನೀರನ್ನು ಇದೇ ಸಹಾಯಧನವನ್ನು ಅವಲಂಬಿತರಾಗಿರುವ ವೃದ್ಧರು ಅಂಗವಿಕ ಲರು, ವಿಧವೆಯರು, ಎಂಡೋ ಪೀಡಿತರ ಇಂತಹ ಸಹಾಯಧನಗಳನ್ನು ಸರಕಾರಗಳು ಈ ಕೂಡಲೇ ಬಿಡು ಗಡೆ ಮಾಡಬೇಕಾದ ಅವಶ್ಯಕತೆಯಿದೆ. ಪಡಿತರ ಚೀಟಿಯಲ್ಲಿ ದೊರಕುವ ಆಹಾರ ಮತ್ತು ಅದರ ಉತ್ತಮ ಗುಣಮಟ್ಟವನ್ನು ಕಾಯ್ದಿಿರಿಸುವ ಜವಾಬ್ದಾಾರಿಯನ್ನು ಸರಕಾರಗಳೇ ಹೊತ್ತುಕೊಂಡು ಈ ಎರಡು ವಿಚಾರ ಗಳಲ್ಲಿ ಮುತುವರ್ಜಿ ವಹಿಸಬೇಕಾಗಿದೆ.