Saturday, 21st September 2024

Rahul Gandhi : ಬಿಜೆಪಿಯ ಸುಳ್ಳು ಮುಂದುವರಿದಿದೆ; ಅಮೆರಿಕದಲ್ಲಿ ಸಿಖ್ ಹೇಳಿಕೆ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿ

Rahul Gandhi

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ()Rahul Gandhi ಅವರು ಇತ್ತೀಚೆಗೆ ತಮ್ಮ ಅಮೆರಿಕ ಪ್ರವಾಸದ ಸಮಯದಲ್ಲಿ ಸಿಖ್ಖರ ಬಗ್ಗೆ ನೀಡಿದ ಹೇಳಿಕೆಗಳ ಬಗ್ಗೆ ಭಾರಿ ಬಿಜೆಪಿ ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು ಬಿಜೆಪಿ (BJPINDIA) ಸುಳ್ಳುಗಳನ್ನು ಆಶ್ರಯಿಸಿದೆ ಹಾಗೂ ನನ್ನನ್ನು ಮೌನವಾಗಿಸಲು ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಎಂದಿನಂತೆ ಸುಳ್ಳು ಹೇಳುವುದನ್ನು ಆರಂಭಿಸಿದೆ. ಅವರಿಗೆ ಸತ್ಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದರಿಂದ ಅವರು ಹತಾಶರಾಗಿದ್ದಾರೆ. ಆದರೆ ನಾನು ಯಾವಾಗಲೂ ಭಾರತವನ್ನು ವ್ಯಾಖ್ಯಾನಿಸುವ ಮೌಲ್ಯಗಳಿಗೆ ಪೂರಕವಾಗಿ ಮಾತನಾಡುತ್ತೇನೆ. ವಿವಿಧತೆಯಲ್ಲಿ ಏಕತೆ, ಸಮಾನತೆ ಮತ್ತು ಪ್ರೀತಿಯೇ ನನ್ನ ತತ್ವ ಎಂದು ಅವರು ಎಕ್ಸ್‌ನಲ್ಲಿ ತಮ್ಮ ಹೇಳಿಕೆಗಳನ್ನು ಪ್ರಕಟಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಏನಾದರೂ ತಪ್ಪಿದೆಯೇ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, “ನಾನು ಭಾರತ ಮತ್ತು ವಿದೇಶದಲ್ಲಿರುವ ಪ್ರತಿಯೊಬ್ಬ ಸಿಖ್ ಸಹೋದರ ಸಹೋದರಿಯರನ್ನು ಕೇಳಲು ಬಯಸುತ್ತೇನೆ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯೇ? ಪ್ರತಿಯೊಬ್ಬ ಸಿಖ್ ಮತ್ತು ಪ್ರತಿಯೊಬ್ಬ ಭಾರತೀಯನು ಭಯವಿಲ್ಲದೆ ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸುವ ದೇಶ ಭಾರತವಾಗಬೇಕಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್ 10 ರಂದು ವಾಷಿಂಗ್ಟನ್ ಡಿಸಿಯಲ್ಲಿ ಅವರು ಮಾಡಿದ ಭಾಷಣವನ್ನು ಉಲ್ಲೇಖಿಸಿ ಅವರು ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ಚರ್ಚಿಸಿದರು. ವಾಷಿಂಗ್ಟನ್ ಡಿಸಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಭಾರತದಲ್ಲಿ ಸಿಖ್ಖರಿಗೆ ಪೇಟ ಧರಿಸಲು ಅವಕಾಶವಿದೆಯೇ ಅಥವಾ ಭಾರತದಲ್ಲಿ ಸಿಖ್ಖರಿಗೆ ಕಾರಾ ಧರಿಸಲು ಅವಕಾಶವಿದೆಯೇ ಅಥವಾ ಸಿಖ್ ಗುರುದ್ವಾರಕ್ಕೆ ಹೋಗಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಹೋರಾಟವಿದೆ. ಇದು ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದರು.

ಭಾರತ ಮೂಲದ ಇಲ್ಹಾನ್ ಒಮರ್ ಮತ್ತು ಇತರ ಯುಎಸ್ ಸಂಸದರೊಂದಿಗೆ ಸಭೆಯಲ್ಲಿ ವೇದಿಕೆ ಹಂಚಿಕೊಂಡಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.