Saturday, 21st September 2024

Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

Bengaluru power cut

ಬೆಂಗಳೂರು: ಬೆಂಗಳೂರು ನಗರದ 220/66/11ಕೆ.ವಿ ಐ.ಟಿ.ಐ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ -3 ರ ನಿರ್ವಹಣಾ ಕಾರ್ಯಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಸೆ. 22 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಕಾಶಿ ವಿಶ್ವನಾಥ ಲೇಔಟ್, ವಾರಣಾಸಿ ಏರಿಯಾ, ಬಿ.ಡಿ.ಎ ಲೇಔಟ್, ಬಟ್ಟರಹಳ್ಳಿ, ಐಟಿಐ ಇಂಡಸ್ಟ್ರೀಯಲ್ ಮತ್ತು ಕೃಷ್ಣ ಥೀಯಟರ್, ಗಾಯತ್ರಿ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ಸೃಷ್ಟಿ ಲೇಔಟ್, ದೇವಸಂದ್ರ ಮೇನ್ ರೋಡ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | DK Shivakumar: ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲನೆಗೆ ರಾತ್ರಿ ನಗರ ಸಂಚಾರ: ಡಿ.ಕೆ. ಶಿವಕುಮಾರ್

ಬೆಂಗಳೂರು ನಗರದ 220/66/11 ಕೆವಿ ಎಸ್‌ಆರ್‌ಎಸ್ ಪೀಣ್ಯ ಸಬ್‌ಸ್ಟೇಷನ್‌ನಲ್ಲಿ ಬ್ಯಾಂಕ್-2 ಮತ್ತು ಆಯಾ ಫೀಡರ್‌ಗಳನ್ನು ತ್ರೈಮಾಸಿಕ ನಿರ್ವಹಣೆ ಕಾರ್ಯಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಸೆ. 22 ರಂದು ಭಾನುವಾರ ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 4.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, 4ನೇ ಬ್ಲಾಕ್, 2ನೇ ಬ್ಲಾಕ್, ಎಂಇಐ ಕಾರ್ಖಾನೆ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, 10ನೇ ಕ್ರಾಸ್, 1ನೇ ಕ್ರಾಸ್, 1ನೇ ಹಂತ ಪೀಣ್ಯ ಕೈಗಾರಿಕಾ ಪ್ರದೇಶ, 3ನೇ ಕ್ರಾಸ್, 4ನೇ ಅಡ್ಡರಸ್ತೆ, ಎಸ್‌ಎಸ್‌ಟ್ರೇಜ್ ಏರಿಯಾ 1ನೇ ಕ್ರಾಸ್. ,ಅನು ಸೋಲಾರ್ ರಸ್ತೆ, ಚೇರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಜನರಲ್ ಮೆಟಲ್ ರಸ್ತೆ, ಮೈಸೂರು ಇಂಜಿನಿಯರ್, ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ, 3ನೇ ಹಂತ. ವೈಷ್ಣವಿ ಮಾಲ್, ಕಾವೇರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Kannada New Movie: ಆದಿತ್ಯ ಶಶಿಕುಮಾರ್ ಹುಟ್ಟುಹಬ್ಬಕ್ಕೆ “ರಾಶಿ” ಉಡುಗೊರೆ!

ಬೆಂಗಳೂರು ನಗರದ 66/11kv IISC ಸಬ್ ಸ್ಟೇಷನ್‌ನಲ್ಲಿ ವಾರ್ಷಿಕ ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಸೆ. 22 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತ ಪುರ ಪೈಪ್‌ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ, ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Star Fashion: ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಲೇಟೆಸ್ಟ್ ಫ್ಯಾಷನ್ ಲುಕ್ ಹೀಗಿದೆ!

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.