Monday, 23rd September 2024

Working Hours: ವಿಶ್ವದಲ್ಲೇ ಅತ್ಯಂತ ಕಡಿಮೆ ಕೆಲಸ, ಹೆಚ್ಚು ವಿಶ್ರಾಂತಿಗೆ ಅವಕಾಶ ಇರುವ ದೇಶಗಳ ಪಟ್ಟಿ ಇಲ್ಲಿದೆ!

Working hours

ಪುಣೆಯ ಕಂಪನಿಯೊಂದರ (pune compeny) ಉದ್ಯೋಗಿಯಾಗಿದ್ದ 26 ವರ್ಷದ ಯುವತಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ (Anna Sebastian Perayil) ಇತ್ತೀಚೆಗಷ್ಟೇ ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಎಲ್ಲರ ಮನದಲ್ಲಿ ಹಚ್ಚಹಸಿರಾಗಿರುವಾಗಲೇ ಚೆನ್ನಾಗಿ ಕೆಲಸ ಮಾಡಲು ಎಷ್ಟು ಸಮಯ (Working Hours) ಮೀಸಲಾಗಿಡಬೇಕು ಎನ್ನುವ ಚರ್ಚೆ ಉದ್ಭವವಾಗಿದೆ.

ಉತ್ತಮವಾಗಿ ಕೆಲಸ ಮಾಡುವಲ್ಲಿ ಕೆಲಸದ ಸಮಯವು ನಿರ್ಣಾಯಕವಾಗಿದೆ. ಯಾಕೆಂದರೆ ಇದು ಕೆಲಸದ ಮೇಲೆ ಮಾತ್ರವಲ್ಲ ವ್ಯಕ್ತಿಯ ಆದಾಯ, ಯೋಗಕ್ಷೇಮ ಮತ್ತು ಜೀವನ ಪರಿಸ್ಥಿತಿಗಳ ಮೇಲೂ ಪರಿಣಾಮ ಬೀರುತ್ತದೆ.
ಕೈಗಾರಿಕಾ ಯುಗದ ಆರಂಭದಿಂದಲೂ ಕೆಲಸದ ಸಮಯದ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಲೇ ಇದೆ.

ಕೆಲಸದ ಸಮಯವನ್ನು ನಿಗದಿಪಡಿಸುವ ಮೂಲಕ ವಿಶ್ರಾಂತಿ, ವೇತನ ಸೇರಿದಂತೆ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸಲು ರಜೆಯನ್ನು ಕಾರ್ಮಿಕ ಕಾನೂನುಗಳಲ್ಲಿ ಉಲ್ಲೇಖಿಸಲಾಗಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳ ಪ್ರಕಾರ ವಿಶ್ವದಲ್ಲೇ ವನವಾಟು ಎಂಬ ದೇಶವು ಅತ್ಯಂತ ಕಡಿಮೆ ಕೆಲಸ ಮಾಡುವ ಸಮಯವನ್ನು ಹೊಂದಿದೆ. ಇಲ್ಲಿ ಒಂದು ವಾರದಲ್ಲಿ ಕಾರ್ಮಿಕರು ಮತ್ತು ಸಿಬ್ಬಂದಿ ಸರಾಸರಿ 24.7 ಗಂಟೆ ಮಾತ್ರ ಕೆಲಸ ಮಾಡುತ್ತಾರೆ.

Working hours

ಇನ್ನು ಕಿರಿಬಾಟಿಯಲ್ಲಿ 27.3 ಗಂಟೆ, ಮೈಕ್ರೋನೇಷಿಯಾದಲ್ಲಿ 30.4 ಗಂಟೆ, ರುವಾಂಡಾದಲ್ಲಿ 30.4 ಗಂಟೆ, ಸೊಮಾಲಿಯಾದಲ್ಲಿ 31.4 ಗಂಟೆ, ನೆದರ್ಲ್ಯಾಂಡ್ ನಲ್ಲಿ31.6 ಗಂಟೆ, ಇರಾಕ್ ನಲ್ಲಿ 31.7, ವಲ್ಲಿಸ್ ಮತ್ತು ಫುಟುನಾ ದ್ವೀಪಗಳಲ್ಲಿ 31.8, ಇಥಿಯೋಪಿಯಾದಲ್ಲಿ 31.9, ಕೆನಡಾದಲ್ಲಿ 32.1 ಗಂಟೆ ಕಾರ್ಮಿಕರು ವಾರದಲ್ಲಿ ಕೆಲಸ ಮಾಡುತ್ತಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಉದ್ಯೋ ಗಿಗಳು ವಾರದಲ್ಲಿ ಕ್ರಮವಾಗಿ 32.3 ಮತ್ತು 33 ಗಂಟೆ ಕೆಲಸ ಮಾಡುತ್ತಾರೆ.

ವಾರದಲ್ಲಿ 40 ಗಂಟೆಗಳಿಗಿಂತಲೂ ಹೆಚ್ಚು ಸಮಯ ಕೆಲಸ ಮಾಡುವ ದೇಶಗಳಲ್ಲಿ ಭಾರತದ ಕಾರ್ಮಿಕರೂ ಸೇರಿದ್ದಾರೆ. ಇಲ್ಲಿ ಸರಾಸರಿ 46.7 ಗಂಟೆಗಳ ಕಾಲ ಕೆಲಸ ಮಾಡಲಾಗುತ್ತದೆ.

ಈ ಮೂರು ದೇಶಗಳಲ್ಲಿ 50 ಗಂಟೆಗಳಿಗಿಂತಲೂ ಹೆಚ್ಚು ಸಮಯ ಕಾರ್ಮಿಕರು ಕೆಲಸ ಮಾಡುತ್ತಾರೆ. ಇದರಲ್ಲಿ ಮೊದಲ ಸ್ಥಾನ ಭೂತಾನ್ ಗೆ ಸೇರಿದೆ. ಇಲ್ಲಿ 54.4 ಗಂಟೆಗಳ ಕಾಲ ಕಾರ್ಮಿಕರು ವಾರದಲ್ಲಿ ದುಡಿಯುತ್ತಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ 50.9 ಹಾಗೂ ಲೆಸೊಥೊದಲ್ಲಿ 50.4 ಗಂಟೆಗಳ ಕಾಲ ಕಾರ್ಮಿಕರು ಕೆಲಸ ಮಾಡುತ್ತಾರೆ.

Eco Friendly Home: 16,000 ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರಸ್ನೇಹಿ ಮನೆ ನಿರ್ಮಿಸಿದ ಯುವತಿಯರು!

ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ವಾರದಲ್ಲಿ ಕಾರ್ಮಿಕರ ದುಡಿಯು ಅವಧಿ ಸರಾಸರಿ ಇಂತಿದೆ. ಬಾಂಗ್ಲಾದೇಶ 46.9, ಕೆನಡಾ 32.1, ಚೀನಾ 46.1, ಫ್ರಾನ್ಸ್ 35.9, ಜರ್ಮನಿ 34.2, ಜಪಾನ್ 36.6, ಮಲೇಷ್ಯಾ 44.7, ರಷ್ಯಾ 39.2, ಯುಕೆ 35.9, ಅಮೆರಿಕ 38 ಗಂಟೆಯಾಗಿದೆ.