Sunday, 22nd September 2024

‌Virat Kohli: ನಾಗಿಣಿ ನೃತ್ಯ ಮಾಡಿದ ಕೊಹ್ಲಿ; ವಿಡಿಯೊ ವೈರಲ್

Virat Kohli

ಚೆನ್ನೈ: ಬಾಂಗ್ಲಾದೇಶ(India vs Bangladesh) ತಂಡದ ಆಟಗಾರರು ತಮ್ಮ ಬದ್ಧ ಎದುರಾಳಿಗಳ ವಿರುದ್ಧ ಪಂದ್ಯ ಗೆದ್ದಾಗ ಅಥವಾ ಸ್ಟಾರ್‌ ಆಟಗಾರರ ವಿಕೆಟ್‌ ಕಿತ್ತಾಗ ನಾಗಿಣಿ ಡ್ಯಾನ್ಸ್ ಮೂಲಕ ಗೇಲಿ ಮಾಡುವುದು ಇವರ ಗುಣ. ಆದರೆ, ಭಾರತ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಚೆನ್ನೈಯಲ್ಲಿ ಸಾಗುತ್ತಿರುವ ಟೆಸ್ಟ್‌ ಪಂದ್ಯದ ವೇಳೆ ನಾಗಿಣಿ ಸ್ಟೈಲ್‌ನಲ್ಲಿಯೇ ಬಾಂಗ್ಲಾ ತಂಡವನ್ನು ಟ್ರೋಲ್‌ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral video) ಆಗಿದೆ.

ಬಾಂಗ್ಲಾದೇಶದ ದ್ವಿತೀಯ ಬ್ಯಾಟಿಂಗ್‌ ಇನಿಂಗ್ಸ್‌ ವೇಳೆ ಫೀಲ್ಡಿಂಗ್‌ ನಡೆಸುತ್ತಿದ್ದ ಕೊಹ್ಲಿ ಪ್ರೇಕ್ಷಕರತ್ತ ಮುಖ ಮಾಡಿ ನಾಗಿಣಿ ಸಿಗ್ನಲ್ ಮಾಡಿ, ಹಾವು ಕಚ್ಚುತ್ತೆ ಎಚ್ಚರಿಕೆ ಎಂದು ಪರೋಕ್ಷವಾಗಿ ಬಾಂಗ್ಲಾ ಆಟಗಾರರನ್ನು ಟ್ರೋಲ್‌ ಮಾಡಿದ್ದಾರೆ. ಕೊಹ್ಲಿಯ ನಾಗಿಣಿ ಸಿಗ್ನಲ್‌ ಕಂಡು ನೆರದಿದ್ದ ಪ್ರೇಕ್ಷಕರು ಒಂದು ಕ್ಷಣ ನಗೆಗಡಲಲ್ಲಿ ತೇಲಿದರು. ಕೊಹ್ಲಿ ಈ ಸನ್ನೆ ಮಾಡಲೂ ಕೂಡ ಒಂದು ಕಾರಣವಿದೆ. ದ್ವಿತೀಯ ಇನಿಂಗ್ಸ್‌ ವೇಳೆ ಬಾಂಗ್ಲಾ ವಿಕೆಟ್‌ ನಷ್ಟವಿಲ್ಲದೆ ಉತ್ತಮ ಬ್ಯಾಟಿಂಗ್‌ ನಡೆಸುತ್ತಿತ್ತು. ಈ ಕಾಣದಿಂದಿಂದ ಕೊಹ್ಲಿ ಪ್ರೇಕ್ಷಕರತ್ತ ನಾಗಿಣಿ ನೃತ್ಯವನ್ನು ನೆನಪಿದರು.

ಕೊಹ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ 17 ರನ್‌ ಬಾರಿಸುವ ಮೂಲಕ ತವರು ನೆಲದಲ್ಲಿ 12,000 ರನ್ ಗಳಿಸಿದ ಮೈಲುಗಲ್ಲು ಸೃಷ್ಟಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ (Sachin Tendulkar) ನಂತರ ಈ ಸಾಧನೆ ಮಾಡಿದ ಎರಡನೇ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.  

35 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್​​ ಅವರ ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು. ಇದುವರೆಗೆ ಕೊಹ್ಲಿ ಒಟ್ಟು 295 ಏಕದಿನ ಪಂದ್ಯಗಳನ್ನು ಆಡಿದ್ದು 58.18 ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ 13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 5 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ Viral Video: ಸಿಂಹದ ಬಾಯಿಗೆ ಕೈಹಾಕಲು ಹೋದವನ ಪಾಡು ಏನಾಯಿತು ನೋಡಿ!

ಟೆಸ್ಟ್​ನಲ್ಲಿ 113 ಪಂದ್ಯಗಳಲ್ಲಿ 8848 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 30 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 125 ಟಿ20 ಪಂದ್ಯವಾಡಿ 4188 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ ಫೈನಲ್​ ಪಂದ್ಯವನ್ನಾಡುವ ಮೂಲಕ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಈಗ ಟೆಸ್ಟ್​ ಮತ್ತು ಏಕದಿನ ಮಾತ್ರ ಆಡುತ್ತಿದ್ದಾರೆ.