Friday, 22nd November 2024

PM Modi Visit US: ಮೋದಿ-ಬೈಡನ್‌ ದ್ವಿಪಕ್ಷೀಯ ಮಾತುಕತೆ; ಯಾವೆಲ್ಲಾ ವಿಚಾರ ಚರ್ಚೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

pm modi us visit

ವಾಷಿಂಗ್ಟನ್‌: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Modi Visit US) ಮತ್ತುಯುಎಸ್ ಅಧ್ಯಕ್ಷ ಜೋ ಬೈಡನ್(Joe Biden) ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಯುದ್ಧ ಪೀಡಿತ ರಷ್ಯಾ-ಉಕ್ರೇನ್‌ ನಡುವಿನ ಶಾಂತಿ ಸಂದೇಶಕ್ಕಾಗಿ ಪ್ರಧಾನಿ ಮೋದಿಯನ್ನು ಬೈಡನ್‌ ಶ್ಲಾಘಿಸಿದ್ದಾರೆ. ಅಲ್ಲದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(United States)ಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವವನ್ನು ಅಮೆರಿಕ(America) ಕೂಡ ಬೆಂಬಲಿಸಿದೆ.

ಉತ್ತರ ಕೆರೊಲಿನಾದ ವಿಲ್ಮಿಂಗ್ಟನ್‌ನಲ್ಲಿರುವ ಬೈಡನ್‌ ನಿವಾಸದಲ್ಲಿ ಭೇಟಿಯಾದ ಉಭಯ ನಾಯಕರು, ಹಲವು ವಿಚಾರಗಳನ್ನು ಚರ್ಚಿಸಿದರು. ಸಭೆಯಲ್ಲಿ, ಭಾರತ-ಅಮೆರಿಕ ಸಹಭಾಗಿತ್ವಕ್ಕೆ ಉತ್ತೇಜನ ನೀಡುವಲ್ಲಿ ಅಧ್ಯಕ್ಷ ಬೈಡೆನ್ ಅವರ ಅಪ್ರತಿಮ ಕೊಡುಗೆಗಳಿಗೆ ಪ್ರಧಾನಮಂತ್ರಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ವರ್ಷ ತಮ್ಮ ಹಿಂದಿನ ಯುಎಸ್ ಭೇಟಿ ಮತ್ತು ಜಿ 20 ಶೃಂಗಸಭೆಗಾಗಿ ಅಧ್ಯಕ್ಷ ಬೈಡೆನ್ ಅವರ ಭಾರತ ಪ್ರವಾಸವನ್ನು ನೆನಪಿಸಿಕೊಂಡ ಪ್ರಧಾನಿ, ಈ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಭದ್ರಗೊಳಿಸಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಪ್ರಮುಖ ಪಾತ್ರ

“COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟಕ್ಕೆ ಬೆಂಬಲ ನೀಡುವುದರಿಂದ ಹಿಡಿದು ಪ್ರಪಂಚದಾದ್ಯಂತದ ಘರ್ಷಣೆಗಳ ವಿನಾಶಕಾರಿ ಪರಿಣಾಮಗಳನ್ನು ಪರಿಹರಿಸುವವರೆಗೆ ಹಲವಾರು ಸವಾಲುಗಳಿಗೆ ಪರಿಹಾರಗಳನ್ನು ಹುಡುಕುವ ಪ್ರಯತ್ನಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ” ಎಂದು ಅಮೆರಿಕ ಹೇಳಿದೆ. ಅಧ್ಯಕ್ಷ ಬಿಡೆನ್ ಅವರು, ಪೋಲೆಂಡ್ ಮತ್ತು ಉಕ್ರೇನ್‌ಗೆ ಅವರ ಐತಿಹಾಸಿಕ ಭೇಟಿಗಳಿಗಾಗಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದರು, ಇದು ಹಲವು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಮೊದಲ ಭಾರಿಗೆ ಭೇಟಿ ನೀಡಿರುವುದಾಗಿದೆ ಎಂದು ಬೈಡನ್‌ ಹೊಗಳಿದ್ದಾರೆ.

ಬಾಹ್ಯಾಕಾಶ ತಂತ್ರಜ್ಞಾನ

ಬಾಹ್ಯಾಕಾಶ, ಸೆಮಿಕಂಡಕ್ಟರ್‌ಗಳು ಮತ್ತು ಸುಧಾರಿತ ದೂರಸಂಪರ್ಕ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಾದ್ಯಂತ ಯಶಸ್ವಿ ಕಾರ್ಯತಂತ್ರಕ್ಕೆ ಉಭಯ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ, 2025 ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲು ನಾಸಾ ಮತ್ತು ಇಸ್ರೋ ನಡೆಸಿದ ಮೊದಲ ಜಂಟಿ ಪ್ರಯತ್ನದ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು.

ರಕ್ಷಣಾ ಸಹಕಾರಕ್ಕೆ ಒತ್ತು

31 ಜನರಲ್ ಅಟಾಮಿಕ್ಸ್ MQ-9B (16 ಸ್ಕೈ ಗಾರ್ಡಿಯನ್ ಮತ್ತು 15 ಸೀ ಗಾರ್ಡಿಯನ್) ರಿಮೋಟ್ ಪೈಲಟ್ ವಿಮಾನಗಳು ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳ ಖರೀದಿಯನ್ನು ಪೂರ್ಣಗೊಳಿಸಿದ ಭಾರತದ ಪ್ರಗತಿಯನ್ನು ಯುಎಸ್ ಅಧ್ಯಕ್ಷರು ಸ್ವಾಗತಿಸಿದರು, ಇವುಗಳು ಗುಪ್ತಚರ, ಕಣ್ಗಾವಲು ಹೀಗೆ ರಕ್ಷಣಾ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಶ್ವೇತಭವನ ಹೇಳಿದೆ.

ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿಗೆ ಉತ್ತೇಜನೆ

ಉಭಯ ನಾಯಕರು ಹೊಸ ಅಮೆರಿಕ-ಭಾರತ ಔಷಧ ನೀತಿಯನ್ನು ಪ್ರಸ್ತಾಪಿಸಿದರು. ಇದು ಕೃತಕ ಔಷಧಗಳು ಮತ್ತು ಪೂರ್ವಗಾಮಿ ರಾಸಾಯನಿಕಗಳ ಅಕ್ರಮ ಉತ್ಪಾದನೆ ಮತ್ತು ಅಂತರರಾಷ್ಟ್ರೀಯ ಕಳ್ಳಸಾಗಣೆಯನ್ನು ತಡೆಯಲು ಉಭಯ ರಾಷ್ಟ್ರಗಳ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಲಿದೆ. ಅಲ್ಲದೇ ಸಮಗ್ರ ಸಾರ್ವಜನಿಕ ಆರೋಗ್ಯ ಪಾಲುದಾರಿಕೆಯನ್ನು ಭದ್ರಪಡಿಸುತ್ತದೆ. ಇದೇ ವೇಳೆ ಅಗಸ್ಟ್ 2024 ರಲ್ಲಿ ನಡೆದ ಮೊದಲ ಯುಎಸ್-ಭಾರತ ಕ್ಯಾನ್ಸರ್ ಸಂವಾದವನ್ನು ನಾಯಕರು ಶ್ಲಾಘಿಸಿದರು.

ಈ ಸುದ್ದಿಯನ್ನೂ ಓದಿ:PM Modi Visit US: ಉಚಿತ, ಮುಕ್ತ ವ್ಯವಹಾರವೇ ಕ್ವಾಡ್‌ನ ಗುರಿ- ಪ್ರಧಾನಿ ಮೋದಿ