Sunday, 22nd September 2024

Virat Kohli Dance: ಕೊಹ್ಲಿಯ ಡ್ಯಾನ್ಸ್‌ಗೆ ಫಿದಾ ಆದ ಚೆನ್ನೈ ಪ್ರೇಕ್ಷಕರು

ಚೆನ್ನೈ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಕ್ರಿಕೆಟ್​ನಲ್ಲಿ ಎಷ್ಟು ಖ್ಯಾತಿ ಪಡೆದಿದ್ದಾರೋ ಅಷ್ಟೇ ಖ್ಯಾತಿಯನ್ನು ಮೈದಾನದಲ್ಲಿ ಡ್ಯಾನ್ಸ್(Virat Kohli Dance)​ ಮಾಡುವ ಮೂಲಕವೂ ಪಡೆದಿದ್ದಾರೆ. ಕೊಹ್ಲಿ ಹಲವು ಬಾರಿ ಫಿಲ್ಡಿಂಗ್​ ನಡೆಸುವ ವೇಳೆ ಡ್ಯಾನ್ಸ್​ ಮಾಡಿದ ವಿಡಿಯೊ ವೈರಲ್​ ಆಗಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ನಾಲ್ಕನೇ ದಿನದಾಟದ ವೇಳೆ ಕೊಹ್ಲಿ ಒಂದೆಡರು ಸ್ಟೆಪ್ಸ್‌ ಹಾಕಿ ಸಹ ಆಟಗಾರರನ್ನು ರಂಜಿಸಿದ್ದಾರೆ. ಇದರ ವಿಡಿಯೊ ವೈರಲ್‌(viral video) ಆಗಿದೆ.

ಭಾನುವಾರ ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನ ನಾಯಕ ರೋಹಿತ್‌ ಶರ್ಮ ಆಟಗಾರರ ಜತೆ ಪಂದ್ಯದ ಪ್ಲ್ಯಾನ್‌ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಕೊಹ್ಲಿ ತಮ್ಮ ಪಕ್ಕದಲ್ಲಿ ನಿಂತಿದ್ದ ಜಸ್‌ಪ್ರೀತ್‌ ಬುಮ್ರಾ ಜತೆ ಏನೋ ಹೇಳುತ್ತಾ ಸ್ಟೇಡಿಯಂನಲ್ಲಿ ಹಾಕಿದ್ದ ಹಿಂದಿ ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ. ಜತೆಗೆ ಬುಮ್ರಾಗೆ ಈ ರೀತಿ ಕುಣಿಯಬೇಕು ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕಾಣಬಹುದು. ಇಷ್ಟಕ್ಕೆ ಸುಮ್ಮನಾಗದ ಕೊಹ್ಲಿ ಡ್ರಿಂಕ್ಸ್ ಬ್ರೇಕ್ ವೇಳೆಯೂ ಡ್ಯಾನ್ಸ್‌ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಅವರು ವಿಶ್ವ ಕ್ರಿಕೆಟ್​ನ ಅತ್ಯಂತ ಫಿಟ್​ ಆಗಿರುವ ಕ್ರಿಕೆಟಿಗ ಅವರ ಫಿಟ್​ನೆಸ್​ ಬಗ್ಗೆ ಬದ್ಧ ವೈರಿ ಪಾಕ್​ ತಂಡದ ಆಟಗಾರರು ಸೇರಿ ವಿಶ್ವದ ಅನೇಕರು ಸಲಾಂ ಹೊಡೆದಿದ್ದಾರೆ. ಅದೆಷ್ಟೋ ಕ್ರಿಕೆಟ್‌ ಆಟಗಾರರಿಗೆ ಅವರು ಫಿಟ್‌ನೆಸ್‌ ವಿಚಾರದಲ್ಲಿಯೂ ಸ್ಫೂರ್ತಿಯಾಗಿದ್ದಾರೆ. ಇತರ ಆಟಗಾರರಂತೆ ವಿರಾಟ್ ಕೊಹ್ಲಿ ಗಾಯಗೊಂಡು ತಂಡದಿಂದ ಹೊರಗುಳಿದ ನಿದರ್ಶನ ಇದುವರೆಗೂ ಕಂಡುಬಂದಿಲ್ಲ. ಕ್ರಿಕೆಟ್​ ಆಡಲು ಆರಂಭಿಸಿದ ದಿನದಿಂದಲೂ ಕೊಹ್ಲಿ ತಮ್ಮ ಫಿಟ್​ನೆಸ್​ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಕ್ರಿಕೆಟ್​ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಪಂದ್ಯದ ವೇಳೆ ಕೊಹ್ಲಿ ನಾಗಿಣಿ ಸ್ಟೈಲ್‌ನಲ್ಲಿಯೇ ಬಾಂಗ್ಲಾ ಆಟಗಾರರನ್ನು ಟ್ರೋಲ್‌ ಕೂಡ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral video) ಆಗಿದೆ. ಬಾಂಗ್ಲಾದೇಶದ ದ್ವಿತೀಯ ಬ್ಯಾಟಿಂಗ್‌ ಇನಿಂಗ್ಸ್‌ ವೇಳೆ ಫೀಲ್ಡಿಂಗ್‌ ನಡೆಸುತ್ತಿದ್ದ ಕೊಹ್ಲಿ ಪ್ರೇಕ್ಷಕರತ್ತ ಮುಖ ಮಾಡಿ ನಾಗಿಣಿ ಸಿಗ್ನಲ್ ಮಾಡಿ, ಹಾವು ಕಚ್ಚುತ್ತೆ ಎಚ್ಚರಿಕೆ ಎಂದು ಪರೋಕ್ಷವಾಗಿ ಬಾಂಗ್ಲಾ ಆಟಗಾರರನ್ನು ಟ್ರೋಲ್‌ ಮಾಡಿದ್ದಾರೆ. ಕೊಹ್ಲಿಯ ನಾಗಿಣಿ ಸಿಗ್ನಲ್‌ ಕಂಡು ನೆರದಿದ್ದ ಪ್ರೇಕ್ಷಕರು ಒಂದು ಕ್ಷಣ ನಗೆಗಡಲಲ್ಲಿ ತೇಲಿದರು. 

ಇದನ್ನೂ ಓದಿ ‌Virat Kohli: ನಾಗಿಣಿ ನೃತ್ಯ ಮಾಡಿದ ಕೊಹ್ಲಿ; ವಿಡಿಯೊ ವೈರಲ್

ಕೊಹ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ 17 ರನ್‌ ಬಾರಿಸುವ ಮೂಲಕ ತವರು ನೆಲದಲ್ಲಿ 12,000 ರನ್ ಗಳಿಸಿದ ಮೈಲುಗಲ್ಲು ಸೃಷ್ಟಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ (Sachin Tendulkar) ನಂತರ ಈ ಸಾಧನೆ ಮಾಡಿದ ಎರಡನೇ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.