Monday, 23rd September 2024

Relationship: ಇಂದಿನ ಯುವತಿಯರು ಅತ್ತೆ, ಮಾವನೊಂದಿಗೆ ಇರಲು ಒಪ್ಪುವುದಿಲ್ಲ ಏಕೆ?

Relationship

ಮನೆಗೆ ಹೊಸ ವಧು ಬಂದ ತಕ್ಷಣ ಮಗ ಬೇರೆ ಮನೆ ಮಾಡುವ ಮಾತಾಡುತ್ತಾನೆ, ಮದುವೆಗೆ ಒಪ್ಪುವ ಮೊದಲೇ ವಧು ತಾನು ಅತ್ತೆ ಮಾವನೊಂದಿಗೆ (Relationship) ಇರಲು ಬಯಸುವುದಿಲ್ಲ ಎನ್ನುತ್ತಾಳೆ. ಇದಕ್ಕೆ ವಧುವನ್ನೇ ದೂರುವ ಮೊದಲು ಇದಕ್ಕೆ ಕಾರಣ ಏನಿರಬಹುದು ಎಂದು ಒಮ್ಮೆ ಯೋಚಿಸಬೇಕು.

ಇಂದು ಕುಟುಂಬ ರಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುವುದು ಸಾಮಾನ್ಯವಾಗಿತ್ತು. ಆದರೆ ಈಗಿನ ಹೊಸ ತಲೆಮಾರಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅತ್ತೆ, ಮಾವನ ಜೊತೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಅವರು ಮದುವೆಯಾಗುವಾಗಲೇ ಅತ್ತೆ, ಮಾವನ ಜೊತೆ ಇರಲು ಇಷ್ಟ ಪಡುವುದಿಲ್ಲ.

ಮದುವೆಯ ಅನಂತರ ಯುವತಿಯರು ತಮ್ಮ ಅತ್ತೆ, ಮಾವನೊಂದಿಗೆ ವಾಸಿಸದೇ ಇರಲು ಐದು ಪ್ರಮುಖ ಕಾರಣಗಳಿವೆ.

Relationship

ಸ್ವಾತಂತ್ರ್ಯದ ಕೊರತೆ

ಈಗಿನ ಯುವತಿಯರು ತಮ್ಮದೇ ಆದ ಆಲೋಚನೆ, ನಿರ್ಧಾರ ಮತ್ತು ಜೀವನಶೈಲಿಯನ್ನು ಹೊಂದಿರುತ್ತಾರೆ. ಅದರಲ್ಲಿ ಅವರು ಯಾವುದೇ ರೀತಿಯ ಹಸ್ತಕ್ಷೇಪವನ್ನು ಬಯಸುವುದಿಲ್ಲ. ಮದುವೆಯ ಅನಂತರ ಯುವತಿಯರು ತಮ್ಮ ಸ್ವಂತ ಆಯ್ಕೆಗೆ ಅನುಗುಣವಾಗಿ ತಮ್ಮ ಮನೆಯನ್ನು ಅಲಂಕರಿಸಲು ಬಯಸುತ್ತಾರೆ. ಇದರ ಹೊರತಾಗಿ ಗಂಡನ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಉಪಾಹಾರ, ಊಟಕ್ಕೆ ಏನು ಮಾಡಬೇಕೆಂದು ಮಾಡಲು ನಿರ್ಧರಿಸಲು ಇಷ್ಟಪಡುತ್ತಾರೆ. ಆದರೆ ಹೆಚ್ಚಾಗಿ ಭಾರತೀಯ ಕುಟುಂಬಗಳಲ್ಲಿ ಮನೆಗೆ ಸಂಬಂಧಿಸಿದ ನಿರ್ಧಾರಗಳು ಅತ್ತೆಯ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಹೊಸದಾಗಿ ಬಂದ ಸೊಸೆಗೆ ಅತ್ತೆ, ಮಾವನೊಂದಿಗೆ ಇರಲು ಸಾಧ್ಯವಾಗುವುದಿಲ್ಲ.

ಪೀಳಿಗೆಯ ಅಂತರ

ಹೆಣ್ಣು ಹುಟ್ಟಿನಿಂದಲೇ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರುತ್ತಾಳೆ. ಆದ್ದರಿಂದ ಅವಳು ಬಾಲ್ಯದಿಂದಲೂ ತನ್ನ ಕುಟುಂಬದ ಸಂಪ್ರದಾಯಗಳ ಬಗ್ಗೆ ತಿಳಿದಿರುತ್ತಾಳೆ. ಅಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಆಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಅವಳು ತನ್ನ ಅತ್ತೆಯ ಮನೆಗೆ ಬಂದಾಗ ಅವಳ ಸಿದ್ಧಾಂತ ಮತ್ತು ಸಂಪ್ರದಾಯಗಳ ಮೇಲೆ ತಲೆಮಾರಿನ ವ್ಯತ್ಯಾಸವನ್ನು ಅನುಭವಿಸುತ್ತಾಳೆ. ಅತ್ತೆ ತನ್ನ ಸೊಸೆಗೆ ಮನೆಯಲ್ಲಿ ಏನು ನಿಯಮಗಳಿವೆ, ಕುಟುಂಬದಲ್ಲಿ ಹೇಗೆ ಬದುಕಬೇಕು, ಏನು ಮಾಡಬೇಕು ಎಂಬುದನ್ನುಹೇಳಿಕೊಡುತ್ತಾರೆ. ಆದರೆ ಇದು ಹೊಸದಾಗಿ ಮದುವೆಯಾಗಿ ಬಂದ ಯುವತಿಯರಿಗೆ ಕಷ್ಟ ಎಂದೆನಿಸಲು ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಮತ್ತು ಮನೆ ಮಂದಿಯ ನಡುವೆ ಉದ್ವಿಗ್ನತೆಗೆ ಕಾರಣವಾಗುತ್ತದೆ.
ಪತಿಗೆ ಸಮಯ ನೀಡಲಾಗುವುದಿಲ್ಲ.

Relationship

ಪತಿಗೆ ಸಮಯ ನೀಡಲಾಗುವುದಿಲ್ಲ

ಹೊಸದಾಗಿ ಮದುವೆಯಾಗಿ ಬಂದ ಯುವತಿಯರು ತಮ್ಮ ಗಂಡನೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು ಬಯಸುತ್ತಾರೆ. ಅವರ ನಡುವೆ ಖಾಸಗಿ ಸಮಯ ಇರಬೇಕು ಎಂದು ಬಯಸುತ್ತಾರೆ. ಆದರೆ ಕುಟುಂಬದಲ್ಲಿ ಎಲ್ಲರ ಜೊತೆ ಇರುವಾಗ ಅವರಿಗೆ ಇದು ಸಿಗುವುದಿಲ್ಲ. ಅತ್ತೆ, ಮಾವ ಇದ್ದಾಗ ಎಲ್ಲರ ಜೊತೆ ಹೊಂದಿಕೊಂಡು ಹೋಗುವುದು ಸವಾಲಾಗುತ್ತದೆ. ಇದರಿಂದ ಅವರು ಒತ್ತಡವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಸಂಬಂಧದಲ್ಲಿ ಹಸ್ತಕ್ಷೇಪ

ಅಪರಿಚಿತರಿಬ್ಬರು ಹೊಸದಾಗಿ ಮದುವೆಯಾದಾಗ ಇಲ್ಲಿ ಪ್ರೀತಿಯ ಕೊರತೆ ಇರುತ್ತದೆ. ತಮ್ಮ ಸಂಬಂಧಕ್ಕೆ ಸಂಬಂಧಪಟ್ಟ ಎಲ್ಲ ನಿರ್ಧಾರಗಳನ್ನು ಅವರು ತೆಗೆದುಕೊಳ್ಳಲು ಬಯಸುತ್ತಾರೆ. ಅತ್ತೆ ಮತ್ತು ಮಾವ ಒಟ್ಟಿಗೆ ಇದ್ದಾಗ ಅವರು ಮಗ, ಸೊಸೆಯ ಸಂಬಂಧದ ಮೇಲೆ ಹಸ್ತಕ್ಷೇಪ ಮಾಡುತ್ತಾರೆ. ಅವರಿಗೆ ಇದು ಅಧಿಕಾರ ಎಂದೆನಿಸಿದರೂ ಹೊಸದಾಗಿ ಮದುವೆಯಾಗಿ ಬಂದ ಯುವತಿಗೆ ಇಷ್ಟವಾಗುವುದಿಲ್ಲ.

ಸಮಸ್ಯೆಗಳು ಎಷ್ಟೇ ಇದ್ದರೂ ಗಂಡ ಅಥವಾ ಹೆಂಡತಿ ಬಂದು ಪ್ರೀತಿಯಿಂದ ತಮ್ಮನ್ನು ಸಮಾಧಾನಿಸಬೇಕು ಎಂದು ಬಯಸುತ್ತಾರೆ. ಆದರೆ ಇದು ಅತ್ತೆ, ಮಾವನ ಜೊತೆ ಇದ್ದಾಗ ಅವರಿಗೆ ಸಾಧ್ಯವಾಗುವುದಿಲ್ಲ. ಇದರಿಂದ ಭಿನ್ನಾಭಿಪ್ರಾಯದೊಂದಿಗೆ ಮನೆ ಮಂದಿಯ ನಡುವೆ ಅಂತರವೂ ಹೆಚ್ಚಾಗುತ್ತದೆ.

ವೃತ್ತಿ, ಕುಟುಂಬದಲ್ಲಿ ಆಯ್ಕೆ

ಇತ್ತೀಚಿನ ದಿನಗಳಲ್ಲಿ ಯುವತಿಯರು ವೃತ್ತಿ ಜೀವನವನ್ನು ಮದುವೆಯ ಅನಂತರವೂ ಮುಂದುವರಿಸಲು ಬಯಸುತ್ತಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುವವರಾಗಿರುತ್ತಾರೆ. ಅತ್ತೆ, ಮಾವನ ಜೊತೆ ಇರುವ ಸೊಸೆಗೆ ತನ್ನ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ಕೊಡಲಾಗುವುದಿಲ್ಲ ಅಥವಾ ಅತ್ತೆ, ಮಾವನನ್ನು ಸರಿಯಾಗಿ ನೋಡಿಕೊಳ್ಳಲಾಗುವುದಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತವೆ.

Costly Rice: ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ; ಕೆಜಿಗೆ 15,000 ರೂ!

ವೃತ್ತಿಯ ಕಡೆಗೆ ಹೆಚ್ಚು ಗಮನ ಕೊಡುವ ಸೊಸೆ ಮನೆಯನ್ನು ನೋಡಿಕೊಳ್ಳುವುದಿಲ್ಲ ಎಂಬ ಒತ್ತಡ ಹೇರಲಾಗುತ್ತದೆ. ಕೆಲಸ, ಮನೆ ಮತ್ತು ಕುಟುಂಬ ಎರಡನ್ನೂ ಸೊಸೆ ನಿಭಾಯಿಸಬೇಕೆಂದು ಅತ್ತೆ ಮತ್ತು ಮಾವ ನಿರೀಕ್ಷಿಸುತ್ತಾರೆ. ಅವರು ಮಗನ ಆಯಾಸ ಮತ್ತು ತೊಂದರೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಸೊಸೆಯನ್ನಲ್ಲ. ಇಂತಹ ಪರಿಸ್ಥಿತಿಯಲ್ಲಿ ಯುವತಿಯರು ಅತ್ತೆ, ಮಾವನ ಜೊತೆ ಇರಲು ಬಯಸುವುದಿಲ್ಲ.