Sunday, 22nd September 2024

Tirupati Laddoos Row : ತಿರುಪತಿಯಲ್ಲಿ ನಡೆದ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚನೆ

Tirupati Laddoos Row

ಹೈದರಾಬಾದ್: ತಿರುಪತಿ ದೇವಸ್ಥಾನದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು (Tirupati Laddoos Row) ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ನ ಮಾಜಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮತ್ತು ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಕಳೆದ ಐದು ವರ್ಷಗಳಲ್ಲಿ ದೇವಾಲಯದ ನಿರ್ವಹಣೆಯಲ್ಲಿ ಹಲವಾರು ಅಕ್ರಮಗಳನ್ನು ಮಾಡಿದ್ದಾರೆ ಎಂದು ಆಡಳಿತಾರೂಢ ತೆಲುಗು ದೇಶಂ ಪಕ್ಷ ಈ ಹಿಂದೆ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ತಂಡ ರಚಿಸಲಾಗಿದೆ.

ಹಿಂದಿನ ವೈಎಸ್ಆರ್‌ಪಿ ಸರ್ಕಾರದ ಆಡಳಿತದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಮುಖ್ಯಮಂತ್ರಿ, ನಾಯ್ಡು ವ್ಯವಸ್ಥೆಯನ್ನು “ಪಾವಿತ್ರ್ಯಗೊಳಿಸುವುದಾಗಿ ” ಹೇಳಿದ್ದರು. ಕಳೆದ ಐದು ವರ್ಷಗಳಲ್ಲಿ ತಿರುಮಲದಲ್ಲಿ ಅನೇಕ ಅಪವಿತ್ರ ಕೆಲಸಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದರು.

ಭಕ್ತರಲ್ಲಿ ವಿಶ್ವಾಸ ಮೂಡಿಸಲು ಮತ್ತು ಅವರು ಶಾಂತಿಯುತ ಮನಸ್ಸಿನಿಂದ ಪ್ರಾರ್ಥಿಸುವುದನ್ನು ಖಚಿತಪಡಿಸಿಕೊಳ್ಳಲು ನಾಳೆ ಒಂದು ದಿನದ ಪ್ರೋಕ್ಷಣೆ ಮತ್ತು ಶಾಂತಿ ಹೋಮಗಳನ್ನು (ಶುದ್ಧೀಕರಣ ಆಚರಣೆಗಳು) ನಡೆಸಲಾಗುವುದು ಎಂದು ರಾವ್ ಹೇಳಿದರು. ಇದು ದೇವಾಲಯದ ಪಾವಿತ್ರ್ಯ ಉಳಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಸಿಂಏ ಹೇಳಿದ್ದಾರೆ.

ತುಪ್ಪ ಖರೀದಿ ಮತ್ತು ದೇವಾಲಯದ ಕಾರ್ಯಾಚರಣೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ತನಿಖೆ ನಡೆಸಲು ಇನ್‌ಸ್ಪೆಕ್ಟರ್‌ ಜನರಲ್ ಶ್ರೇಣಿ ಅಥವಾ ಅದಕ್ಕಿಂತ ಹೆಚ್ಚಿನ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.

ಇದನ್ನೂ ಓದಿ: Tirupati Laddoos Row : ತಿರುಪತಿಯಲ್ಲಿ ಆದ ಅಪಸವ್ಯ ಮಸೀದಿಯಲ್ಲಿ ನಡೆದಿದ್ದರೆ; ಆಂಧ್ರ ಸಿಎಂ ಪವನ್ ಕಲ್ಯಾಣ್‌ ಪ್ರಶ್ನೆ

“ಐಜಿ ಮಟ್ಟದ ಅಥವಾ ಅದಕ್ಕಿಂತ ಹೆಚ್ಚಿನ ಅಧಿಕಾರಿ ನಿರ್ವಹಿಸುವ ಎಸ್ಐಟಿ ರಚಿಸಲಾಗುವುದು. ಇದು ಎಲ್ಲಾ ಕಾರಣಗಳು, ಅಧಿಕಾರ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ಪುನರಾವರ್ತನೆಗಳನ್ನು (ಲಡ್ಡು ಕಲಬೆರಕೆ) ತಪ್ಪಿಸಲು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಯಾವುದೇ ರಾಜಿ ಇಲ್ಲ” ಎಂದು ನಾಯ್ಡು ಹೇಳಿದ್ದಾರೆ.