Friday, 22nd November 2024

Indian Railway : ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಾವು ಪ್ರತ್ಯಕ್ಷ, ರೈಲ್ವೆ ವಿರುದ್ಧ ನೆಟ್ಟಿಗರ ಆಕ್ರೋಶ

VIRAL VIDEO

ನವದೆಹಲಿ: ಅಚ್ಚರಿಯ ಘಟನೆಯೊಂದರಲ್ಲಿ ಜಬಲ್ಪುರ-ಮುಂಬೈ ಗರೀಬ್ ರಥ್ ಎಕ್ಸ್‌ಪ್ರೆಸ್‌ ರೈಲಿನ (Indian Railway) ಎಸಿ ಬೋಗಿಯಲ್ಲಿ ಹಾವು ಪತ್ತೆಯಾಗಿದೆ. ಘಟನೆಯಿಂದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಈ ಘಟನೆಯ ವೀಡಿಯೊ ಭಾನುವಾರ ನೆಟ್ಟಿಗರಲ್ಲಿ ವೈರಲ್ ಆಗಿದೆ. ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊದ ಪ್ರಕಾರ, ಸೀಟ್‌ಗಳ ನಡುವೆ ಹಾವು ಪತ್ತೆಯಾಗಿದೆ.

ವಿಡಿಯೊದಲ್ಲಿ ಸೀಟ್‌ಗಳ ನಡುವಿನ ಹ್ಯಾಂಡಲ್‌ಗಳ ಸುರುಳಿಯಾಕಾರದಲ್ಲಿ ಸುತ್ತಿರುವ ಹಾವು ಮತ್ತು ಬೋಗಿಯ ಎಸಿ ಟ್ಯೂಬ್‌ ಒಳಗೆ ನುಸುಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಮಾಹಿತಿಯ ಪ್ರಕಾರ, ರೈಲು ಕಸರಾ ರೈಲ್ವೆ ನಿಲ್ದಾಣವನ್ನು ಸಮೀಪಿಸಿದಾಗ ಜಿ 3 ಬೋಗಿಯ ಮೇಲಿನ ಬೆರ್ತ್ ಸೀಟ್‌ ಸಂಖ್ಯೆ 23ರಲ್ಲಿ ಹಾವು ಕಾಣಿಸಿಕೊಂಡಿದೆ.

ಹಾವು ಪತ್ತೆಯಾದ ಕೂಡಲೇ ಬರ್ತ್‌ನಲ್ಲಿದ್ದ ಪ್ರಯಾಣಿಕರು ದೂರ ಹೋಗಿದ್ದಾರೆ. ನಂತರ ಬೋಗಿಯೊಳಗೆ ಗೊಂದಲ ಸೃಷ್ಟಿಯಾಗಿದೆ. ಪ್ರಯಾಣಿಕರೊಬ್ಬರು ಹಾವಿನ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಅದು ಶೀಘ್ರದಲ್ಲೇ ವೈರಲ್ ಆಗಿದೆ. ಬೋಗಿಯಲ್ಲಿ ಹಾವು ಕಾಣಿಸಿಕೊಂಡ ನಂತರ, ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ಸ್ಥಳಾಂತರಿಸಲಾಗಿದೆ. ಈ ಬೋಗಿಗೆ ಬೀಗ ಹಾಕಲಾಗಿದೆ ರಿಪಬ್ಲಿಕ್ ವರ್ಲ್ಡ್‌ ವರದಿ ಮಾಡಿದೆ.

ಇದನ್ನೂ ಓದಿ: Viral Video: ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್; ಎಂಥ ತಾಯಿ ನೀನು ಎಂದು ಛೀಮಾರಿ ಹಾಕಿದ ನೆಟ್ಟಿಗರು

ಪ್ರಯಾಣಿಕರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇಡೀ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.