Monday, 28th October 2024

ಸಾವಯವ ಗೊಬ್ಬರ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸಿದ ಕೃಷಿ ವಿವಿ ವಿದ್ಯಾರ್ಥಿಗಳು

ಶಿಡ್ಲಘಟ್ಟ: ಯೂರಿಯಾ ಡಿಎಪಿ ಕಾಂಪ್ಲೆಕ್ಸ್ ಇತ್ಯಾದಿ ರಸಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರ ಬಳಸುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ರೈತರು ಮುಂದಾಗಬೇಕು ಎಂದು ರೇಷ್ಮೆ ಕೃಷಿ ವಿಶ್ವವಿದ್ಯಾ ಲಯದ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.

ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾವಯವ ಕೃಷಿ ಬಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಅರಿವು ಮೂಡಿಸಿ ಮಾತನಾಡಿದರು

ವಿದ್ಯಾರ್ಥಿಗಳು ಹಸಿರು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ತಯಾರಿಸುವುದು ಹೇಗೆ ಹಾಗೂ ಅದರ ಮಹತ್ವವನ್ನು ತಿಳಿಸಿದರು.ಹಾಗೆಯೇ ಸಾವಯವ ಗೊಬ್ಬರ ತಯಾರಿಸುವುದು ಹೇಗೆ ಅದರಲ್ಲಿ ನಾಡೆಪ್  ಮತ್ತು ಜಪಾನೀಸ್ ವ್ಯಾಟ್ ಪದ್ಧತಿಯ ಬಗ್ಗೆ ತಿಳಿಸಿಕೊಟ್ಟರು. ನಂತರ ಬೀಜಾಮೃತ ,ಜೀವಾಮೃತ ,ಪಂಚಗವ್ಯ ಇವುಗಳನ್ನು ಮಾಡುವ ವಿಧಾನದ ಬಗ್ಗೆ ಕೂಡ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಅವುಗಳನ್ನು ಹೇಗೆ ಬಳಸಬೇಕು ಅದರಿಂದ ಆಗುವ ಲಾಭವೇನು ಎಂಬ ಬಗ್ಗೆ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಬಂದಿದ್ದ ಚಿಂತಾಮಣಿ ರೇಷ್ಮೆ ಕೃಷಿ ಮಹಾ ವಿದ್ಯಾಲಯದ  ಬೇಸಾಯ ಶಾಸ್ತçದ ಪ್ರಾಧ್ಯಾಪಕಿ ಡಾ. ಶುಭಶ್ರೀ ಮಾತನಾಡಿ ಸಾವಯವ ಕೃಷಿಯನ್ನು ಏಕೆ ಮಾಡಬೇಕು ಮತ್ತು ಅದರಿಂದ ಆಗುವ ಲಾಭಗಳೇನು ಎಂಬ ಬಗ್ಗೆಗ್ರಾಮಸ್ಥರಿಗೆ ಮನವರಿಕೆ ಆಗುವ ಹಾಗೆ ತಿಳಿಸಿಕೊಟ್ಟರು. ಊರಿನ ಗ್ರಾಮಸ್ಥರಾದ ಕೃಷ್ಣಾರೆಡ್ಡಿ ಮತ್ತು ದೇವರಾಜ ಸಾವಯುವ ಕೃಷಿ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿ ಕೊಂಡರು.

ಗ್ರಾಮ ಪಂಚಾಯತಿ ಸದಸ್ಯರಾದ ಮೂರ್ತಿ, ಊರಿನ ಮುಖ್ಯಸ್ಥರಾದ  ಭಾನುಪ್ರತಾಪ್ ಜಿ , ಚನ್ನಕೇಶವ್ , ಅಂಬರೀಶ್, ಮುರುಳಿ , ಅಶೋಕ ಹಾಗೂ ರೇಷ್ಮೆ ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳಾದ ಪ್ರಮೋದ್ , ವಿಭಾ, ಪೂಜ ಬಿ, ಸುಹಾಸ , ಪೂಜ ಎಂ , ಪ್ರಿಯದರ್ಶಿನಿ , ಸುರೇಂದ್ರ , ಸಾದಿಯಾ ಕೌಸರ್ , ಲಿಖಿತ್ ಕುಮಾರ್ , ಸೌಮ್ಯ , ಮೊಹಮ್ಮದ್ ಫಾಸಿಬಾಬಾ , ಸೃಷ್ಠಿ , ರಾಕೇಶ , ಸಂದೀಪ , ರಾಜೇಶ್ವರಿ , ವಿಜಯಲಕ್ಷ್ಮಿ ಹಾಗೂ ಊರಿನ ಗ್ರಾಮಸ್ಥರು ಆಗಮಿಸಿದ್ದರು.

ಇದನ್ನೂ ಓದಿ: ಶೇಟ್‌ದಿನ್ನೆ ಬಳಿ ಲಾರಿ ಟಾಟಾ ಸುಮೋ ನಡುವೆ ಭೀಕರ ಅಪಘಾತ 3 ಸಾವು 4 ಮಂದಿ ಆಸ್ಪತ್ರೆ ಪಾಲು