ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ (PM Modi And US). ಕ್ವಾಡ್ ನಾಯಕರ ಶೃಂಗಸಭೆ ಸೇರಿದಂತೆ ವಿವಿಧ ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ. ಜತೆಗೆ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಸಾವಿರಾರು ಭಾರತೀಯ ಸಮುದಾಯವರು ಹಾಜರಾಗಿ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಭಾನುವಾರ (ಸೆಪ್ಟೆಂಬರ್ 22) ಮೋದಿ ಅವರು ಭಾಗವಹಿಸಿದ್ದ ನ್ಯೂಯಾರ್ಕ್‌ನ ನಸ್ಸೌ ಕೊಲಿಜಿಯಂನಲ್ಲಿನ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕಲಾವಿದರಾದ, ಬೆಂಗಳೂರು ಮೂಲದ ರ‍್ಯಾಪರ್ ಹನುಮಾನ್‌ಕೈಂಡ್, ಆದಿತ್ಯ ಗಾಧ್ವಿ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಪ್ರದರ್ಶನ ಗಮನ ಸೆಳೆಯಿತು (Viral Video).
ಈ ಕಲಾವಿದರು ನೀಡಿದ ಪ್ರದರ್ಶನಕ್ಕೆ ಮೋದಿ ಮೆಚ್ಚುಗೆ ಸೂಚಿಸಿದರು. ಅಲ್ಲದೆ ಕಾರ್ಯಕ್ರಮ ನೆಟ್ಟಿಗರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral Singer Hanumankind wows Indian Crowd at PM Modi's community event in NYC#ModiInUSA #ModiAndUS pic.twitter.com/1e0rpP7QUO
— PoliticsSolitics (@IamPolSol) September 22, 2024
Pop sensation Hanumankind performs at Modi&US diaspora event in New York pic.twitter.com/5oxDZiG9Qb
— Sidhant Sibal (@sidhant) September 22, 2024
ಹನುಮಾನ್‌ಕೈಂಡ್ (Hanumankind)
ಕೇರಳ, ಬೆಂಗಳೂರು ಮೂಲದ ರ‍್ಯಾಪರ್ ಮತ್ತು ಗೀತೆ ರಚನೆಕಾರ ಹನುಮಾನ್‌ಕೈಂಡ್ ಅವರು ಈ ʼಮೋದಿ & ಯುಎಸ್ʼ (Modi & US) ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಮತ್ತು ಸಾವಿರಾರು ಪ್ರೇಕ್ಷಕರ ಮುಂದೆ ತಮ್ಮ ಹಿಟ್ ಹಾಡು ʼಬಿಗ್ ಡ್ವಾಗ್ಸ್ʼ ಪ್ರಸ್ತುತಪಡಿಸಿ ಗಮನ ಸೆಳೆದರು. ಅವರ ಅದ್ಭುತ ಪ್ರದರ್ಶನವು ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಪ್ರದರ್ಶನದ ನಂತರ ಪಿಎಂ ಮೋದಿ ಅವರು ಹನುಮಾನ್‌ಕೈಂಡ್‌ನನ್ನು ಭೇಟಿಯಾಗಿ ಮೆಚ್ಚುಗೆ ಸೂಚಿಸಿದರು. ಈ ಮೋದಿ ಪ್ರಧಾನಿ ಮೋದಿ ಅವರು ಹನುಮಂತನನ್ನು ತಬ್ಬಿಕೊಂಡು ‘ಜೈ ಹನುಮಾನ್’ ಎಂದು ಉದ್ಘರಿಸಿದರು. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದೆ. ಹನುಮಾನ್‌ಕೈಂಡ್ ಅವರ ಮೂಲ ಹೆಸರು ಸೂರಜ್ ಚೆರುಕತ್. ಸದ್ಯ ಅವರು ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿದ್ದಾರೆ.
ಆದಿತ್ಯ ಗಾಧ್ವಿ (Aditya Gadhvi)
ಮತ್ತೊಂದೆಡೆ ಆದಿತ್ಯ ಗಾಧ್ವಿ ತಮ್ಮ ಸೂಪರ್ ಹಿಟ್ ಟ್ರ್ಯಾಕ್ ‘ಖಲಾಸಿ’ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಸಾಂಪ್ರದಾಯಿಕ ಗುಜರಾತಿ ಜಾನಪದವನ್ನು ಆಧುನಿಕ ಪಾಪ್-ರಾಕ್ ಪ್ರಭಾವಗಳೊಂದಿಗೆ ಬೆರೆಸಿ, ಅಚಿಂತ್ ಅವರು ಸಂಗೀತ ಸಂಯೋಜಿಸಿದ ಈ ಹಾಡು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಕೊನೆಯಲ್ಲಿ ಮೋದಿ ಅವರು ವೇದಿಕೆಯತ್ತ ತೆರಳಿ ಆದಿತ್ಯ ಗಾಧ್ವಿ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡು ಬೆನ್ನು ತಟ್ಟಿದರು. ಈ ವೇಳೆ ಪ್ರೇಕ್ಷಕರು “ಮೋದಿ, ಮೋದಿ” ಎಂಬ ಘೋಷಣೆಗಳನ್ನು ಕೂಗಿದರು. ಆದಿತ್ಯ ಗಾಧ್ವಿ ಅವರು ತಮ್ಮ ಈ ಕಾರ್ಯಕ್ರಮದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಗುಜರಾತಿ ಜಾನಪದ ಸಂಗೀತವನ್ನು ಪಾಪ್-ರಾಕ್‌ನೊಂದಿಗೆ ಬೆರೆಸುವ ಮೂಲಕ ಅಚಿಂತ್ ʼಖಲಾಸಿʼ ಹಾಡನ್ನು ಹೊರ ತಂದಿದ್ದಾರೆ. ಸೌಮ್ಯ ಜೋಶಿ ಅವರ ಸಾಹಿತ್ಯವು ನಾವಿಕನೊಬ್ಬ ಗುಜರಾತ್ ತೀರವನ್ನು ಅನ್ವೇಷಿಸುವ ಕಥೆಯನ್ನು ಹೇಳುತ್ತದೆ. ಈ ಹಾಡು ವೈರಲ್ ಆಗಿದ್ದು, ಇದುವರೆಗೆ 4.5 ಕೋಟಿ ವೀಕ್ಷಣೆ ಪಡೆದಿದೆ.
ಈ ಸುದ್ದಿಯನ್ನೂ ಓದಿ: Modi visit to USA : ಅಮೆರಿಕ ಕ್ರಿಕೆಟ್ ತಂಡವನ್ನು ಹೊಗಳಿದ ಪ್ರಧಾನಿ ಮೋದಿ