ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಸವಾಲುಗಳನ್ನು ಎದುರಿಸಲು, ಹೆಚ್ಚಿನ ಅಂಕಗಳನ್ನು ಗಳಿಸುವು ದಕ್ಕೆ ಸೀಮಿತವಲ್ಲ ಬದಲಾಗಿ ನಾವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ ಅಲ್ಲದೆ ಪ್ರಪಂಚ ಏನು ಎಂಬುದನ್ನು ತೋರಿಸಿ ಕೊಡುತ್ತವೆ ಎಂದು ವಿದ್ಯಾಶಂಕರ ಲರ್ನಿಂಗ್ ಸೆಂಟರ್ ನ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದ್ಯಾಶಂಕರ್ ಹೇಳಿದರು.
ಅವರು ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿ- ಮಾಸ್ಟರ್ ಮೈಂಡ್ ಸ್ಕಾಲರ್ಶಿಪ್ ಎಕ್ಸಾಮ್ ನ ಪೋಸ್ಟರ್ ಮತ್ತು ವೆಬ್ಸೈಟ್ ಅನಾವರಣಗೊಳಿಸಿದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ದರು.
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದ ತುಮಕೂರು ಇಂದು ರಾಜ್ಯಮಟ್ಟದಲ್ಲಿ ರಾಂಕ್ ಗಳನ್ನು ಪಡೆಯುತ್ತ ಸಾಧನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾನಿಧಿ ಕಾಲೇಜಿನ ಪ್ರಯತ್ನ ದೊಡ್ಡದು. ಇಲ್ಲಿ ವಿದ್ಯಾರ್ಥಿಗಳಿಗೆ ಒದಗಿಸ ಲಾಗುತ್ತಿರುವ ಪ್ರೋತ್ಸಾಹ ಅಭಿನಂದನಾರ್ಹ ಎಂದು ಶ್ಲಾಘಿಸಿದರು.
ವಿದ್ಯಾ ವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್ ಬಿ ಪ್ರದೀಪ್ ಕುಮಾರ್ ಮಾತನಾಡಿ, ಹತ್ತನೇ ತರಗತಿಯ ಹಂತದಲ್ಲಿ ಈ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಭದ್ರವಾದ ಬುನಾದಿಯನ್ನು ಕಟ್ಟಿಕೊಡುತ್ತದೆ. ಹೆಚ್ಚಿನ ಸಾಧನೆಗಳಿಗೆ ಪ್ರೇರಣೆಯಾಗುತ್ತದೆ ಎಂದರು.
ವಿ-ಮಾಸ್ಟರ್ ಮೈಂಡ್ ಸ್ಕಾಲರ್ಶಿಪ್ ಪರೀಕ್ಷೆಯು ನವೆಂಬರ್ ಹತ್ತರಂದು ನಡೆಯಲಿದ್ದು ಕರ್ನಾಟಕದಾದ್ಯಂತ 10ನೇ ತರಗತಿಯ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದಾಗಿದೆ. ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.
ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವ ತಲಾ ಐದು ಮಂದಿ ವಿದ್ಯಾರ್ಥಿಗಳಿಗೆ ಮತ್ತು ಭಾಗವಹಿಸುವ ಪ್ರತೀಶಾಲೆಯ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸಿಗಲಿದೆ.
ರಾಜ್ಯಾದ್ಯಂತ ವಿವಿಧ ಸೆಂಟರ್ ಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು ಪರಿಣಿತ ಶಿಕ್ಷಕ ವೃಂದವು ಪ್ರಶ್ನೆ ಪತ್ರಿಕೆಯನ್ನು ರೂಪಿಸಲಿದೆ. ಅತ್ಯಂತ ಪಾರದರ್ಶಕವಾಗಿ ನಡೆಯುವ ಈ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಪ್ರಯೋಜನವನ್ನು ಪಡೆಯಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 9844857419, 9380345722, 7019781264 ಸಂಪರ್ಕಿಸಬಹುದು. ಅಥವಾ ಸಂಪೂರ್ಣ ಮಾಹಿತಿಯನ್ನು ಕಾಲೇಜಿನ ವೆಬ್ ಸೈಟ್ ತಿತಿತಿ. viಜಥಿಚಿಟಿiಜhiಠಿuಛಿoಟಟege.ಛಿom ಮೂಲಕ ಪಡೆಯಬಹುದು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮನ್ವಿತಾ ಪ್ರಾರ್ಥಿಸಿದರು. ಉಪನ್ಯಾಸಕಿ ಆರತಿ ಪಟ್ರಮೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಟೆಕ್ನೋ ಸಂಯೋಜಕಿ ನಂದಿನಿ ವಿ ಮಾಸ್ಟರ್ ಮೈಂಡ್ ಸ್ಕಾಲರ್ ಶಿಪ್ ಪರೀಕ್ಷೆ ಯ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: Tumkur News: ಕೋರ ಗ್ರಾಪಂ ಸದಸ್ಯರಿಂದ ಅಕ್ರಮವಾಗಿ ನಿವೇಶನ ಹಂಚಿಕೆ