Friday, 22nd November 2024

Virat Kohli : ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರಾ? ಬ್ರಾಡ್ ಹಾಗ್‌ ಭವಿಷ್ಯ

Virat Kohli

ನವದೆಹಲಿ: 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ICC world Test Championship) ಗೆಲ್ಲಬೇಕಾದರೆ ವಿರಾಟ್ ಕೊಹ್ಲಿ (Virat Kohli) ತಮ್ಮ ಬ್ಯಾಟಿಂಗ್ ಫಾರ್ಮ್ ಅನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಗ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಬೇಕೇ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಚೆನ್ನೈನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಆಡಿದ್ದರು. ಬಲಗೈ ಬ್ಯಾಟರ್‌ ಎರಡೂ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ ಅದ್ಭುತ ಪ್ರದರ್ಶನ ನೀಡಲು ವಿಫಲರಾದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರಮವಾತಿ 6 ಮತ್ತು 17 ರನ್‌ಗಳಿಗೆ ಔಟಾದರು.

ವಿರಾಟ್ ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾದರು. ಆದಾಗ್ಯೂ, ಈ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶದ ವಿರುದ್ಧ ಸುಲಭ ಗೆಲುವು ಸಾಧಿಸಿತು. ಅಂತಿಮ ಇನ್ನಿಂಗ್ಸ್‌ನಲ್ಲಿ 515 ರನ್ಗಳ ಬೃಹತ್ ಗುರಿ ನಿಗದಿಪಡಿಸಿದ ನಂತರ ಟೀಮ್ ಇಂಡಿಯಾ ಪ್ರವಾಸಿ ತಂಡವನ್ನು 280 ರನ್‌ಗಳಿಂದ ಸೋಲಿಸಿತ್ತು.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ?

ಲೈವ್ ವೀಡಿಯೊ ಶೋನಲ್ಲಿ ಅಭಿಮಾನಿಯೊಬ್ಬರು ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್‌ಗೆ ಪ್ರಶ್ನೆ ಕೇಳಿದರು. ವಿರಾಟ್ ಕೊಹ್ಲಿ ಟೆಸ್ಟ್ ನಿಂದ ನಿವೃತ್ತರಾಗಬೇಕೇ ಎಂದು ಕೇಳಿದರು. ಹಾಗ್ ಇಲ್ಲ ಎಂದು ಹೇಳಿದರು. ಆದರೆ ಮುಂಬರುವ ಪಂದ್ಯಗಳಲ್ಲಿ ತಮ್ಮ ಪ್ರದರ್ಶನ ಸುಧಾರಿಸುವಂತೆ ಕೊಹ್ಲಿಯನ್ನು ಒತ್ತಾಯಿಸಿದರು. ಕೊಹ್ಲಿ 4ನೇ ಕ್ರಮಾಂಕದಲ್ಲಿ ತಂಡಕ್ಕೆ ನಿರ್ಣಾಯಕ ಬ್ಯಾಟಿಂಗ್ ಸ್ಥಾನ ಹೊಂದಿದ್ದಾರೆ ಎಂದು ಅವರು ಭಾವಿಸುತ್ತಾರೆ.

ಮುಂದಿನ 15 ವಾರಗಳಲ್ಲಿ ವಿರಾಟ್ 10 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಅವರು ಅಲ್ಲಿ ಅತ್ಯುತ್ತಮವಾಗಿ ಆಡಬೇಕಾಗಿದೆ. ಅವರು ತಮ್ಮ ಆಟವನ್ನು ಸುಧಾರಿಸಬೇಕಾಗಿದೆ ಎಂದು ಹೇಳಿದರು.

ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಗೆಲ್ಲುವ ಅವಕಾಶವನ್ನು ಹೊಂದಬೇಕಾದರೆ, ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ನಿರ್ಣಾಯಕ. ನಾಲ್ಕನೇ ಸ್ಥಾನವು ಒಂದು ಪ್ರಮುಖ ಸ್ಥಾನವಾಗಿದೆ. ಇದು ನೀವು ಆಟವನ್ನು ನಿಯಂತ್ರಿಸಬಹುದಾದ ಸ್ಥಾನ”ಎಂದು ಅವರು ಹೇಳಿದರು.

ಕೊಹ್ಲಿ ಪ್ರದರ್ಶನ ನೀಡಿದರೆ ಭಾರತವನ್ನುಸೋಲಿಸುವುದು ಕಷ್ಟ

ಕೊಹ್ಲಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರೆ, 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಕಠಿಣ ತಂಡವಾಗಲಿದೆ ಎಂದು ಬ್ರಾಗ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Ananya Panday : ಅನನ್ಯಾ ಪಾಂಡೆಗೆ ರಿಯಾನ್ ಪರಾಗ್‌ಗಿಂತ ವಿರಾಟ್‌ ಕೊಹ್ಲಿಯೇ ಫೇವರಿಟ್‌

“ನೀವು ಇನ್ನಿಂಗ್ಸ್‌ನ ಕೊನೆಯ ಭಾಗದಲ್ಲಿ ಬ್ಯಾಟಿಂಗ್ ಮಾಡಬಹುದು. ಆ ಮಧ್ಯಮ ಕ್ರಮಾಂಕದಲ್ಲಿ ಅವರು ಹೊಂದಿರುವ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಆಡಬೇಕು. ವಿರಾಟ್ ಕೊಹ್ಲಿ ನಿಜವಾಗಿಯೂ ಹೆಜ್ಜೆ ಉತ್ತಮ ಹೆಜ್ಜೆ ಹಾಕಬೇಕು. ಇನ್ನಿಂಗ್ಸ್‌ನಲ್ಲಿ ಕೊನೆಯವರೆಗೆ ಬ್ಯಾಟಿಂಗ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಸೋಲಿಸುವುದು ತುಂಬಾ ಕಷ್ಟ. ಆದರೆ ವಿರಾಟ್‌ ಪ್ರದರ್ಶನ ನೀಡಲು ಪ್ರಾರಂಭಿಸಬೇಕು. ಇಲ್ಲದಿದ್ದರೆ, ಆಯ್ಕೆದಾರರು ಯುವಕರಿಗೆ ಅವಕಾಶ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.

ವಿಶೇಷವೆಂದರೆ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಂತಹ ಅನೇಕ ಹಿರಿಯ ಬ್ಯಾಟರ್‌ಗಳು ಅಸ್ಥಿರ ಪ್ರದರ್ಶನದಿಂದಾಗಿ ಯುವ ಆಟಗಾರರಿಗೆ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನಗಳನ್ನು ನೀಡಬೇಕಾಗಿ ಬಂತು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಇಬ್ಬರು ಅನುಭವಿ ಆಟಗಾರರು.