Monday, 23rd September 2024

Bengaluru Power Cut : ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

bengaluru power cut

ಬೆಂಗಳೂರು: ಬೆಂಗಳೂರು ನಗರದ 66/11 ಕೆ.ವಿ. ಪದ್ಮನಾಭನಗರ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ (Bengaluru Power Cut) ಜಯನಗರ ವಿಭಾಗದ 9ನೇ ಉಪವಿಭಾಗದ ಹಲವಡೆ ಸೆ.24 ರಂದು ಮಂಗಳವಾರ ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಜಯನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು

ನಗರದ ಬನಗಿರಿನಗರ, ಪಾಪಯ್ಯ ಗಾರ್ಡನ್‌, ಬಾಲಾಜಿ ಕಲ್ಯಾಣ ಮಂಟಪ ಸುತ್ತಮುತ್ತ, ಸಿದ್ದಮ್ಮ & ಸಿದ್ದಯ್ಯ ರೆಡ್ಡಿ ಏರಿಯಾ, S9ನೇ ಉಪ ವಿಭಾಗ ಕಛೇರಿ, 30ನೇ ಮೇನ್‌, 30ನೇ ಕ್ರಾಸ್‌, ಬಿ.ಎನ್. ಎಂ. ಕಾಲೇಜ್‌, ಬಿ.ಡಿ.ಎ. ಕಾಂಪ್ಲೆಕ್ಸ್‌, ದೇವಗಿರಿ ದೇವಸ್ಥಾನ, ಬಿ.ಎಸ್. ಎನ್.‌ ಎಲ್.‌ ಕಚೇರಿ, ಬನಶಂಕರಿ 2ನೇ ಹಂತ ಎಸ್. ಎಲ್.‌ ವಿ ಹೋಟೆಲ್‌ ನಿಂದ 24ನೇ ಕ್ರಾಸ್‌, ಉಪಹಾರ ಹೋಟೆಲ್‌, 24ನೇ ಕ್ರಾಸ್‌, ಚನ್ನಮ್ಮನಕೆರೆ ಅಚ್ಚುಕಟ್ಟು, ಮಂಜುನಾಥ ಕಾಲೋನಿ, ಬಿ.ಎಂ.ಟಿ.ಸಿ. ಡಿಪೋ, ರಾಜೀವ್‌ ನಗರ, ಸಿಂಡಿಕೇಟ್‌ ಬ್ಯಾಂಕ್‌ ಕಾಲೊನಿ, ಪದ್ಮನಾಭನಗರ, ರಾಘವೇಂದ್ರ ಲೇಔಟ್‌, 18ನೇ ಮೇನ್‌ ಟೆಲಿಫೋನ್‌ ಎಕ್ಸ್‌ಚೇಂಜ್‌, ಕಿಡ್ನಿ ಫೌಂಡೇಶನ್‌, ಮಹಾರಾಜ ಆಸ್ಪತ್ರೆ, ಲಕ್ಷ್ಮೀಕಾಂತ ಕಲ್ಯಾಣ ಮಂಟಪ, ಪುಟ್ಟಲಿಂಗಯ್ಯ ರಸ್ತೆ, ಪದ್ಮನಾಭ ನಗರ, ಲಕ್ಷೀಕಾಂತ ಕಲ್ಯಾಣ ಮಂಟಪ, ಶ್ರಾವಂತಿ ಅಪಾರ್ಟ್‌ ಮೆಂಟ್‌, ಆರ್.ಕೆ. ಲೇಔಟ್‌, ಕದಿರೇನಹಳ್ಳಿ, ಯಾರಬ್‌ ನಗರ, ಮೋನೋ ಟೈಪ್‌, ಟೀಚರ್ಸ್‌ ಕಾಲೋನಿ, ಕಾವೇರಿ ನಗರ, ಡಾ. ಅಂಬೇಡ್ಕರ್‌ ನಗರ, ಎಂ. ಎಂ. ಇಂಡಸ್ಟಿಯಲ್‌ ಏರಿಯ, ಉಮಾ ಮಹೇಶ್ವರಿ ದೇವಸ್ಥಾನ 15 ರಿಂದ 17ನೇ ಕ್ರಾಸ್‌ ವರೆಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Ambulance Service: ಆಧುನಿಕ‌ ಜೀವ ರಕ್ಷಕ ಸವಲತ್ತುಗಳಿರುವ 65 ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದ ಸಿಎಂ

ಬೆಂಗಳೂರು ನಗರದ 66/11ಕೆವಿ ಬ್ಯಾಟರಾಯನಪುರ ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ8 ಉಪ ವಿಭಾಗದ ಹಲವಡೆ ಸೆ.24 ರಂದು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಹೆಬ್ಬಾಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು

ನಗರದ ಎಲ್ ಮತ್ತು ಟಿ ಹಂತ-1 ಅಪಾರ್ಟ್‌ಮೆಂಟ್, ಸಹಕಾರನಗರ, ಎಲ್ ಮತ್ತು ಟಿ ಹಂತ-2 ಅಪಾರ್ಟ್‌ಮೆಂಟ್, ಮಾಲ್ ಅಡ್ಮಿನಿಸ್ಟ್ರೇಟಿವ್-ಏಷ್ಯನ್ ಮಾಲ್, ಸಹಕಾರನಗರ, ಎಲ್ ಮತ್ತು ಟಿ ವಾಣಿಜ್ಯ ಕಟ್ಟಡ, ಏಷ್ಯನ್ ಮಾಲ್, ಕಾಶಿನಗರ, ಹೂಡಿ ಲೇಔಟ್, ರಾಚೇನಹಳ್ಳಿ ಕೆರೆ, ಹೊಯ್ಸಳ ಲೇಔಟ್, ಅಮೃತಹಳ್ಳಿ 18ನೇ ನಗರ ಕ್ರಾಸ್, ಶಬರಿಯಾನನಗರ ಕ್ರಾಸ್, ಸೆಂಚುರಿ ಇಥಿಯೋಸ್, ಎಸ್‌ ಮಧುವನ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | ದಸರಾ ಚಲನಚಿತ್ರೋತ್ಸವ 2024- ಪೋಸ್ಟರ್ ಬಿಡುಗಡೆ

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.