23-09 ರಿಂದ 25-09 ರವರೆಗೆ ಬೆಂಗಳೂರಿನ, ಚಂದ್ರ ಬಡಾವಣೆಯ ಶ್ರೀ ಸಿದ್ದಗಂಗಾ ಹೈಯರ್ ಪ್ರೈಮರಿ ಶಾಲೆಯ ಆವರಣದಲ್ಲಿ ಸಿ ಬಿ ಎಸ್ ಸಿ ವಲಯ VIII, ಖೋ ಖೋ ಪಂದ್ಯಾವಳಿಯನ್ನು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಪೀಠ ಟ್ರಸ್ಟನ ಸಹಯೋಗದಲ್ಲಿ ಆಯೋಜಿಸಲಾಗಿದೆ.
136 ಶಾಲೆಗಳಿಂದ 290 ತಂಡಗಳು ನೋಂದಾಯಿಸಿಕೊಂಡು 3800 ಕ್ರೀಡಾಪಟುಗಳು ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿ ಭಾಗವಹಿಸುತ್ತಿದ್ದಾರೆ.
ಈ ಕ್ರೀಡಾ ಕೂಟದ ಉದ್ಘಾಟನೆಯನ್ನು ದಿ 23-09-2024 ರಂದು ರಾಮನಗರ ಜಿಲ್ಲಾಧಿಕಾರಿಗಳಾದ ಶ್ರೀಯುತ ಯಶವಂತ ವಿ ಗುರುಕಾರ್ ರವರು ನೆರವೇರಿಸಿ ಕೊಟ್ಟರು. ಶ್ರೀಮತಿ ಅನಿತಾ ಜೆ ಸಸ್ವನ್ (ಅಧೀನ ಕಾರ್ಯದರ್ಶಿಗಳು, ಸಿ ಬಿ ಎಸ್ ಸಿ, ಪ್ರಾದೇಶಿಕ ಕಚೇರಿ, ಬೆಂಗಳೂರು) ಮತ್ತು ಕುಮಾರಿ ಅಶ್ವಿನಿ ಆಕ್ಕುಂಜಿ ಚಿದಾನಂದ (ಅಂತರಾಷ್ಟ್ರೀಯ ಕ್ರೀಡಾಪಟು, ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತರು) ರವರು ಗೌರವಾನ್ವಿತ ಅತಥಿಗಳಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾದ ಯಶವಂತ ವಿ ಗುರುಕಾರ್ ರವರು ಕ್ರೀಡಾ ಪಟುಗಳನ್ನುದ್ದೇಶಿಸಿ ಖೋ ಖೋ ಕ್ರೀಡೆ ಜೀವನದಲ್ಲಿ ಶ್ರೇಯಸ್ ಗಳಿಸಲು ಬಹಳ ಉಪಯುಕ್ತವೆಂದು ತಿಳಿಸಿದರು. ಹಾಗೂ ಗೌರವಾನ್ವಿತ ಅತಿಥಿಗಳಾದ ಅನಿತಾ ಜೆ ಸಸ್ವನ್ ಮತ್ತು ಕುಮಾರಿ ಅಶ್ವಿನಿ ಆಕ್ಕುಂಜಿ ಚಿದಾನಂದರವರು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು .
ಕ್ರೀಡಾಕೂಟದ ಅಧ್ಯಕ್ಷತೆಯನ್ನು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಪೀಠ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ.ಎಲ್.ರೇವಣಸಿದ್ಧಯ್ಯ (ನಿವೃತ್ತ ಐಪಿಎಸ್ ಅಧಿಕಾರಿಗಳು) ಕಾರ್ಯದರ್ಶಿಗಳಾದ ಶ್ರೀ ಬಿ.ಎನ್.ಚೆನ್ನಪ್ಪ,ಜಂಟಿ ಕಾರ್ಯದರ್ಶಿಗಳಾದ ಶ್ರೀ ಎಸ್ ಮೃತ್ಯುಂಜಯ ಖಜಾಂಚಿಗಳಾದ ಡಾ.ಆರ್. ಲೋಕಪ್ರಕಾಶ್, ಶೈಕ್ಷಣಿಕ ಸಲಹೆಗಾರ ರಾದ ಶ್ರೀ ಟಿ. ಎಸ್. ತುಳಸಿಕುಮಾರ್ ಮತ್ತು ಪ್ರಾಂಶುಪಾಲರಾದ ಶ್ರೀಮತಿ ಹಂಸ ಟಿ.ಎಮ್. ಉಪಸ್ಥಿತರಿದ್ದರು.
ಇದನ್ನೂ ಓದಿ: 21 couples: ವಿರಸ ಮರೆತು ಒಂದಾದ 21 ಜೋಡಿಗಳು