ಚಿಂಚೋಳಿ: ರಾಜ್ಯ ಬಿಜೆಪಿ ಅವರದು ಹಿಟ್ ಆಂಡ್ ರನ್ ಮಾಡುವ ಕೆಲಸ ಮಾಡುತ್ತಿದೆ. ಇಲ್ಲಸಲ್ಲದ ಆರೋಪ ಗಳು ಮಾಡಿ ಸರಕಾರಕ್ಕೆ ಕೆಟ್ಟ ಹೆಸರು ತರುವಂತಹ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು.
ಸೇಡಂ ಮತಕ್ಷೇತ್ರದ ಚಿಂಚೋಳಿ ತಾಲೂಕಿನ ಸುಲೇಪೇಟ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಗಳಿಗೆ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿ, ಸುದ್ಧಿಗಾರರೊಂದಿಗೆ ಮಾತನಾಡಿದರು.
ಜನಪರ ಹಿತಕ್ಕಾಗಿ ಯೋಜನೆಗಳು ಜಾರಿಗೆ ತರಬಯಸುವ ಸರಕಾರ ಯಾವುದೇ ಒಂದು ನಿರ್ಧಾರ ತೆಗೆದುಕೊಂಡರು ಇದರಲ್ಲಿ ಅಕ್ರಮವಾಗಿದೆ ಎಂದು ರಾಜ್ಯಪಾಲರನ್ನು ದೂರು ಕೊಡುವ ಕೆಲಸ ಬಿಜೆಪಿ ಯವರು ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಹತಾಷೆಗೊಂಡು ಇಂತಹ ಕೆಲಸಗಳು ಮಾಡುತ್ತಿದ್ದೇ. ರಾಜ್ಯ ಪಾಲರನ್ನು ಮುಂದೆ ಹಾಕಿ ಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸಗಳು ಬಿಜೆಪಿಯವರು ನಡೆಸಿದ್ದಾರೆ.
ರಾಜ್ಯದಲ್ಲಿ ಐದು ವರ್ಷ ಬಿಜೆಪಿ ಯಾವ ರೀತಿ ಸರಕಾರದ ಆಡಳಿತ ನಡೆಸಿದೆ ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಅವರು ಮಾಡಿರುವ ಭ್ರಷ್ಟಚಾರಕ್ಕೆ ಇನೊಬ್ಬರ ಮೇಲೆ ಕೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿ ಯವರಿಗೆ ಅಧಿಕಾರದಿಂದ ಹೊರಗಡೆ ಇರೋಕಾಗುತ್ತಿಲ್ಲ. ಹೀಗಾಗಿ ಸಂವಿಧಾನ ಬದ್ದವಾಗಿ ರಚನೆವಾಗಿರುವ ಸರಕಾರವನ್ನು ಉರುಳಿಸಲು ಸರಕಾರದ ಮೇಲೆ ಇಲ್ಲ ಸಲ್ಲದ ಆರೋಪಗಳು ಮಾಡುತ್ತಿದೆ. ಅವರ ಪ್ರಯತ್ನಗಳು ಉಪಯೋಗಕ್ಕೆ ಬರೋದಿಲ್ಲ ಎಂದರು.
ಕಲಬುರಗಿ ಸಚಿವ ಸಂಪುಟ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗೆ ಅಭಿವೃದ್ಧಿಗೆ ಆದ್ಯತೆ ನೀಡಿದೆ.
ಸೇಡಂ ಮತ ಕ್ಷೇತ್ರಕ್ಕೆ 11770 ಕೋಟಿ ರು ಅನುದಾನವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನೀಡಿದ್ದಾರೆ. ಸೇಡಂ ತಾಲೂಕಿಗೆ ಸರಕಾರಿ ನರ್ಸಿಂಗ್ ಮತ್ತು ಪ್ಯಾರ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಚಿಂಚೋಳಿ ತಾಲೂಕಿನ ಸುಲೇಪೇಟ ಹೋಬಳಿಗೆ ಸರಕಾರಿ ಐಟಿಐ ಕಾಲೇಜು ಸ್ಥಾಪಿಸುವ ಯೋಜನೆ ನಡೆಯುತ್ತಿದೆ.
3 ಕೋಟಿ ರು ವೆಚ್ಚದಲ್ಲಿ ಸೇಡಂ ತಾಲೂಕಿನ ಯಲ್ಲಮ್ಮ ಗೇಟ್ ನಿಂದ ಸುಲೇಪೇಟ ವರೆಗೆ ರಸ್ತೆ ಕಾಮಾಗಾರಿ ಕೈಗೆತಿಕೋಳಲಾಗಿದೆ. ರೈತರ ಬೆಳೆ ಪರಿಹಾರಕ್ಕೆ ಎನ್ ಡಿ ಆರ್ ಎಫ್ ಗೈಡ್ ಲೈನ್ ಪ್ರಕಾರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯ ಮತ್ತು ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಸೂಕ್ತ ರೀತಿಗಲ್ಲಿ ನಡೆಯುತ್ತಿದೆ. ನನ್ನ ಇಲಾಖೆ ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಅಕ್ರಮ ಮತ್ತು ಭ್ರಷ್ಟಚಾರಕ್ಕೆ ಅವಕಾಶವಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಮಟಕಾ ದಂಧೆ, ಗಾಂಜಾ, ಜೂಜಾಟ ಮತ್ತು ಡ್ರಕ್ಸ್ ದಂಧೆಯಲ್ಲಿ ಯಾರೇ ತೋಡಿಕೊಂಡಿದರು ಸರಕಾರ ಬಚ್ಚಾವ್ ಮಾಡುವುದಿಲ್ಲ. ನಿಗಾವಹಿಸಿ ಕ್ರಮಕೈಗೊಳಲು ಈಗಾಗಲೇ ಎಸ್ ಪಿ ಅವರಿಗೆ ಸೂಚಿಸಲಾಗಿದೆ ಎಂದರು.
ನಾನು ಮುಖ್ಯಮಂತ್ರಿ ಆಕಾಕ್ಷಿ ಅಲ್ಲ: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಾಯಕತ್ವದಲ್ಲಿ ಚೆನ್ನಾಗಿ ನಡೆಯುತ್ತಿದೆ. ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ನಾನು ಮುಖ್ಯಮಂತ್ರಿ ಆಕಾಕ್ಷಿ ಇಲ್ಲ ಎಂದು ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದರು.
ಇದನ್ನೂ ಓದಿ: Kalaburagi_incident: ಸಿದ್ದ ಸಿರಿ ಇಥೆನಾಲ್ ಕಾರ್ಖಾನೆ ಮರು ಸ್ಥಾಪನೆಗೆ ಆಗ್ರಹ, ರೈತ ಮುಖಂಡರ ಬಂಧನ