Monday, 23rd September 2024

Suvarna Mahotsava Award: ಸುವರ್ಣ ಮಹೋತ್ಸವ ಪ್ರಶಸ್ತಿಗೆ ಮನವಿಗಳ ಆಹ್ವಾನ; ಸಲ್ಲಿಕೆ ಹೇಗೆ?

Suvarna mahotsava Award

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ-50 (Karnataka Sambhrama-50) ರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಜನ ಪುರುಷರು ಮತ್ತು 50 ಜನ ಮಹಿಳೆಯರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ (Suvarna Mahotsava Award) ನೀಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ | Bengaluru’s NCA facility : ಸೆ.28ರಂದು ಬೆಂಗಳೂರಿನ ಹೊಸ ಎನ್‌ಸಿಎ ಸೌಲಭ್ಯ ಉದ್ಘಾಟನೆ

ಈ ಸಂಬಂಧ ಕಲೆ, ಸಾಹಿತ್ಯ ಜಾನಪದ, ಕೃಷಿ-ಪರಿಸರ, ವಿಜ್ಞಾನ-ತಂತ್ರಜ್ಞಾನ ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ 10 ರಿಂದ 15 ವರ್ಷಗಳ ಗಣನೀಯ ಸೇವೆ ಸಲ್ಲಿಸಿರುವ 50 ವರ್ಷ ಮೇಲ್ಪಟ್ಟ ಸಾಧಕರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಸಾಧನೆಯ ಕುರಿತು 500 ಶಬ್ದಗಳ ಸಂಕ್ಷಿಪ್ತ ಕಿರು ಪರಿಚಯದೊಂದಿಗೆ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ ಜೆ.ಸಿ. ರಸ್ತೆ, ಬೆಂಗಳೂರು ರವರಿಗೆ ಅಕ್ಟೋಬರ್ 05 ರ ಒಳಗಾಗಿ ಮನವಿಗಳನ್ನು ಸಲ್ಲಿಸಬಹುದಾಗಿದೆ. ಅಂದೇ ಕೊನೆಯ ದಿನಾಂಕವಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.