ಬೆಂಗಳೂರು: ಭಾರತದಲ್ಲಿ ಸೋಮವಾರ ಎಂಪಾಕ್ಸ್ ಕ್ಲೇಡ್ 1 ತಳಿಯ (Mpox Virus) ಮೊದಲ ಪ್ರಕರಣ ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳೆದ ತಿಂಗಳು ಎಂಪಾಕ್ಸ್ ಸಮಸ್ಯೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲು ಕಾರಣವಾದ ಇದೇ ವೇರಿಯೆಂಟ್ ಇದಾಗಿದೆ. ಕೇರಳದ ವ್ಯಕ್ತಿಯಲ್ಲಿ ಎಂಪಾಕ್ಸ್ ಕ್ಲೇಡ್ 1 ತಳಿ ಪತ್ತೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹಿಂದಿರುಗಿದ ಮಲಪ್ಪುರಂ ಜಿಲ್ಲೆಯ 38 ವರ್ಷದ ವ್ಯಕ್ತಿಯಲ್ಲಿ ಕ್ಲೇಡ್ 1 ಬಿ ಸ್ಟ್ರೈನ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ರೋಗಿಯ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ.
“ವಿಶ್ವ ಆರೋಗ್ಯ ಸಂಸ್ಥೆ ಕಳೆದ ತಿಂಗಳು ಎರಡನೇ ಬಾರಿಗೆ ಎಂಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲು ಕಾರಣವಾದ ತಳಿಯ ಮೊದಲ ಪ್ರಕರಣ ಇದಾಗಿದೆ” ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ ವಾರ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ವರದಿಯಾದ ಎಂಪಾಕ್ಸ್ ಪ್ರಕರಣವು ಕ್ಲೇಡ್ 1 ಗೆ ಸೇರಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದ ನಂತರ ಆರೋಗ್ಯ ಸಚಿವಾಲಯದ ವಕ್ತಾರೆ ಮನೀಷಾ ವರ್ಮಾ ಈ ಸ್ಟ್ರೈನ್ ಅನ್ನು ದೃಢಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಪತ್ತೆಯಾದ ಎಂಪೋಕ್ಸ್ ಪ್ರಕರಣವು ಹರಿಯಾಣದ ಹಿಸಾರ್‌ನ 26 ವರ್ಷದ ನಿವಾಸಿಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಈ ಪ್ರಕರಣದ ಪತ್ತೆಯಾಗಿತ್ತು ಹಾಗೂ ಹಿಂದಿನ ಪಶ್ಚಿಮ ಆಫ್ರಿಕಾದ ಕ್ಲೇಡ್ 2 ಸ್ಟ್ರೈನ್ಗೆ ಆಗಿದೆ. ಡಬ್ಲ್ಯುಎಚ್ಒ 2022ರಲ್ಲಿ ಎಂಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದಾಗಿನಿಂದ, ಭಾರತದಲ್ಲಿ ಒಟ್ಟು 30 ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: Nipah Virus: ಕೇರಳದಲ್ಲಿ ನಿಫಾ ವೈರಸ್ ಹೈ ಅಲರ್ಟ್, ಮಾಸ್ಕ್ ಕಡ್ಡಾಯ, ಶಾಲೆಗಳಿಗೆ ರಜೆ
ಎಂಪೋಕ್ಸ್ ಕ್ಲೇಡ್ 1 ಬಿ ಪ್ರಸ್ತುತ ಮಧ್ಯ ಆಫ್ರಿಕಾದಲ್ಲಿ ಹೆಚ್ಚಾಗಿದೆ. ಇದು ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ತಳಿಯು ವೇಗವಾಗಿ ಹರಡುತ್ತಿದೆ ಅದಕ್ಕಾಗಿಯೇ ಆಫ್ರಿಕಾದ ದೇಶಗಳಲ್ಲಿ ನೂರಾರು ಸೋಂಕುಗಳ ಪತ್ತೆಯಾದ ಬಳಿಕ ನಂತರ ಡಬ್ಲ್ಯುಎಚ್ಒ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.
ಈ ವರ್ಷದಿಂದ ಆಫ್ರಿಕಾದಲ್ಲಿ 30,000 ಕ್ಕೂ ಹೆಚ್ಚು ಶಂಕಿತ ಎಂಪಿಒಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ಡಬ್ಲ್ಯುಎಚ್ಒ ಹೇಳಿದೆ. ಅವುಗಳಲ್ಲಿ ಹೆಚ್ಚಿನವು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ವರದಿಯಾಗಿವೆ.