Monday, 23rd September 2024

New Fashion: ಮ್ಯಾಗ್ನೆಟಿಕ್‌ ಸ್ಟಡ್ಸ್‌, ಇಯರ್‌ ರಿಂಗ್ಸ್; ಹೊಸ ಜನರೇಶನ್ ಹುಡುಗರ ಮೆಚ್ಚಿನ‌ ಆಯ್ಕೆ!

New Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮ್ಯಾಗ್ನೆಟಿಕ್‌ ಸ್ಟಡ್ಸ್‌ (Magnetic Studs) ಮತ್ತು ಇಯರ್‌ರಿಂಗ್ಸ್ (Ear Rings) ಜೆನ್‌ ಜಿ ಹುಡುಗರ ಫ್ಯಾಷನ್‌ (Fashion) ಆ್ಯಕ್ಸೆಸರೀಸ್‌ ಲಿಸ್ಟ್‌ಗೆ ಎಂಟ್ರಿ ನೀಡಿವೆ. ರಿಂಗ್ಸ್‌ ಶೈಲಿಯ ಸ್ಟಡ್ಸ್, ಹೂಪ್‌ ಸ್ಟಡ್ಸ್, ಜಂಕ್‌ ಸ್ಟಡ್ಸ್, ಸ್ಟ್ರಿಂಗ್‌ ಸ್ಟಡ್ಸ್ ಸೇರಿದಂತೆ ನಾನಾ ಬಗೆಯವು ಹೊಸ ರೂಪದಲ್ಲಿ ಫ್ಯಾಷನ್‌ ಜ್ಯುವೆಲರಿ ಲೋಕದಲ್ಲಿ (New Fashion) ಟ್ರೆಂಡಿಯಾಗಿವೆ. ಈ ಹಿಂದೆ ರಿಂಗ್ಸ್‌ ಧರಿಸುತ್ತಿದ್ದ ಯುವಕರು ಇದೀಗ ಹೊಸ ರೂಪ ಪಡೆದ ಇವುಗಳನ್ನು ಧರಿಸುತ್ತಿದ್ದಾರೆ. ಕಾಲೇಜು ಹುಡುಗರು ಮಾತ್ರವಲ್ಲ, ಇತರೆ ಪುರುಷರ ವರ್ಗವೂ ಕೂಡ ಈ ಫ್ಯಾಷನ್‌ನತ್ತ ಹೊರಳಿದೆ. ತಾತ್ಕಾಲಿಕ ಹಾಗೂ ಪರ್ಮನೆಂಟ್‌ ಮ್ಯಾಗ್ನೆಟಿಕ್‌ ಸ್ಟಡ್ಸ್‌ ಹುಡುಗರ ಕಿವಿಯನ್ನು ಅಲಂಕರಿಸುತ್ತಿವೆ.

ಚಿತ್ರಕೃಪೆ: ಪಿಕ್ಸೆಲ್‌

ಬಿಂದಾಸ್‌ ಸ್ಟೈಲ್‌

ಸ್ಟೈಲಿಸ್ಟ್ ರಾಜ್‌ ಪ್ರಕಾರ, ಇಂದು ಟ್ಯಾಟೂ ಫ್ಯಾಷನ್‌ನ್ನಷ್ಟೇ ಈ ಶೈಲಿಯ ಸ್ಟಡ್ಸ್ ಧರಿಸುವ ಟ್ರೆಂಡ್‌ ಚಾಲ್ತಿಯಲ್ಲಿದೆ. ಪೇಜ್‌3 ಸೆಲೆಬ್ರೆಟಿಗಳು, ಸ್ಟಾರ್ಸ್‌ ಮಾತ್ರವಲ್ಲ ಕಾಲೇಜು ಹುಡುಗರು, ಅಷ್ಟೇಕೆ? ವಿಕೆಂಡ್‌ನಲ್ಲಿ ಕೆಲವು ಕಾರ್ಪೋರೇಟ್‌ ವರ್ಗದ ಯುವಕರು ಕೂಡ ಪಾರ್ಟಿಗಳಲ್ಲಿ ಹಾಗೂ ಔಟಿಂಗ್‌ಗಳಲ್ಲಿ ಡಿಫರೆಂಟ್‌ ಮಾರ್ಡನ್‌ ಲುಕ್‌ಗಾಗಿ ಇವನ್ನು ಧರಿಸುತ್ತಿದ್ದಾರೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ಜಯ್‌.

ಮ್ಯಾಗ್ನೆಟಿಕ್‌ ಸ್ಟಡ್ಸ್‌ ಸ್ಟೈಲ್‌

ಕಿವಿಗೆ ರಿಂಗ್‌ ಧರಿಸಲು ಕಿವಿ ಚುಚ್ಚಿಸಿಕೊಳ್ಳಬೇಕಾ? ಎಂಬ ಗೊಂದಲದಲ್ಲಿರುವವರು ಈ ಮ್ಯಾಗ್ನೆಟಿಕ್‌ ಇಯರಿಂಗ್ಸ್ ಪ್ರೀತಿಸಲಾರಂಭಿಸಿದ್ದಾರೆ. ಇಂತವರಿಗೆಂದೇ ವೈವಿಧ್ಯಮಯ ಮ್ಯಾಗ್ನೆಟಿಕ್‌ ಕ್ಲಿಪ್‌ ಸ್ಟಡ್ಸ್ ಅಥವಾ ಇಯರಿಂಗ್ಸ್‌ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಬೇಡಿಕೆ ಪಡೆದುಕೊಂಡಿವೆ.

ಪಾರ್ಟಿ ಪ್ರಿಯರ ಚಾಯ್ಸ್

ವೀಕೆಂಡ್‌ ಪಾರ್ಟಿ ಪ್ರಿಯರು ಅತಿ ಹೆಚ್ಚಾಗಿ ಇವನ್ನು ಧರಿಸುತ್ತಾರೆ ಎನ್ನುತ್ತದೆ ಫ್ಯಾಷನ್‌ ಜ್ಯುವೆಲರಿ ಸಂಸ್ಥೆಯ ಸಮೀಕ್ಷೆಯೊಂದು. ಸಮೀಕ್ಷೆ ಪ್ರಕಾರ, ಮಾಡರ್ನ್‌ ಯುವಕರು ಅತಿ ಹೆಚ್ಚು ಧರಿಸುತ್ತಾರಂತೆ.

ಈ ಸುದ್ದಿಯನ್ನೂ ಓದಿ | Colour Jeans Pant Fashion: ಕಲರ್ ಕಲರ್ ಜೀನ್ಸ್‌ ಪ್ಯಾಂಟ್ಸ್! ಕಾಲೇಜು ಯುವತಿಯರ ಹೊಸ ಟ್ರೆಂಡ್

ಮ್ಯಾಗ್ನೆಟಿಕ್‌ ಸ್ಟಡ್ಸ್ ಎಲ್ಲೆಲ್ಲಿ ಲಭ್ಯ?

ಸುಲಭವಾಗಿ ಧರಿಸಬಹುದಾದ ಈ ಸ್ಟಡ್ಸ್‌ ಮತ್ತು ಇಯರಿಂಗ್ಸ್‌, ಬೆಂಗಳೂರಿನ ಬ್ರಿಗೇಡ್‌, ಕಮರ್ಷಿಯಲ್ಲ್‌ ಸ್ಟ್ರೀಟ್‌, ಮಲ್ಲೇಶ್ವರ, ಜಯನಗರ, ಕೋರಮಂಗಲ ಸೇರಿದಂತೆ ನಾನಾ ಮಾಲ್‌ಗಳ ಫ್ಯಾಷನ್‌ ಜ್ಯುವೆಲರಿ ಶಾಪ್‌ಗಳಲ್ಲಿ ದೊರೆಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಸ್ಟೆರ್ಲಿಂಗ್‌ ಸಿಲ್ವರ್‌ ಸ್ಟಡ್ಸ್

ಇವು 92.5 ಪರ್ಸೆಂಟ್‌ ಸ್ಟೆರ್ಲಿಂಗ್‌ ಸಿಲ್ವರ್‌ನಲ್ಲೂ ದೊರೆಯುತ್ತವೆ. ಸುಮಾರು 500 ರೂ.ಗಳಿಂದ ಸಾವಿರದವರೆಗೂ ಇವುಗಳಿಗೆ ಬೆಲೆಯಿದೆ. ಕಡಿಮೆ ದರದವು ಲಭ್ಯ ಎನ್ನುತ್ತಾರೆ ಮಾರಾಟಗಾರರು.

ಈ ಸುದ್ದಿಯನ್ನೂ ಓದಿ |Bengaluru’s NCA facility : ಸೆ.28ರಂದು ಬೆಂಗಳೂರಿನ ಹೊಸ ಎನ್‌ಸಿಎ ಸೌಲಭ್ಯ ಉದ್ಘಾಟನೆ

ಮ್ಯಾಗ್ನೆಟಿಕ್‌ ಸ್ಟಡ್ಸ್ ಮತ್ತು ಇಯರಿಂಗ್ಸ್ ಆಯ್ಕೆ ಹೀಗಿರಲಿ

ಮುಖದ ಆಕಾರಕ್ಕೆ ಹೊಂದುವಂತದ್ದನ್ನು ಕೊಂಡು ಕೊಳ್ಳಿ.
ಜಂಕ್‌ ಹಾಗೂ ಫಂಕಿ ಸ್ಟಡ್ಸ್ ಠಪೋರಿ ಲುಕ್‌ ನೀಡುತ್ತವೆ.
ಉತ್ತಮ ಗುಣಮಟ್ಟದ ಫಿನಿಶಿಂಗ್‌ ಇರುವಂತವನ್ನು ಖರೀದಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)