Friday, 22nd November 2024

On This Day In 2007: ಭಾರತದ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ ತುಂಬಿತು 17 ವರ್ಷ

On This Day In 2007

ಬೆಂಗಳೂರು: ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ(MS Dhoni) ನೇತೃತ್ವದಲ್ಲಿ ಭಾರತದ ಯುವ ತಂಡ ಚೊಚ್ಚಲ ಟಿ20(2007 T20 World Cup) ವಿಶ್ವಕಪ್ ಗೆದ್ದ ವಿಜಯ ಯಾತ್ರೆಗೆ ಇಂದಿಗೆ(On This Day In 2007) 17 ವರ್ಷದ ಸಂಭ್ರಮ. 2007 ಸೆ.24ರಂದು(On This Day in 2007) ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ(ind vs pak 2007 t20 world cup final) ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ರೋಮಾಂಚನದಲ್ಲಿ ಗೆಲುವು ಸಾಧಿಸಿತ್ತು.

ಅದು, ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯವಾಗಿ ಸೋಲು ಕಂಡ ವರ್ಷವಾಗಿತ್ತು. ಈ ಸೋಲಿನಿಂದ ಕಂಗೆಟ್ಟಿದ್ದ ಸಚಿನ್​ ತೆಂಡೂಲ್ಕರ್​, ರಾಹುಲ್​ ದ್ರಾವಿಡ್​, ಸೌರವ್​ ಗಂಗೂಲಿ ಸೇರಿ ಖ್ಯಾತನಾಮ ಆಟಗಾರರು ಈ ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕಿದರು. ಎಲ್ಲರು ವಿಶ್ರಾಂತಿ ಬಯಸಿದರು. ದಿಕ್ಕು ತೋಚದೆ ಬಿಸಿಸಿಐ ಆಗಿದ್ದಾಗಲಿ ಎಂದು ವಿಕೆಟ್‌ಕೀಪರ್ ಧೋನಿಗೆ ನಾಯಕತ್ವ ನೀಡಿ ಯುವ ಪಡೆಯನ್ನು ಕಣಕ್ಕಿಳಿಸಿತು. ಧೋನಿ ನೇತೃತ್ವದ ಯುವಪಡೆ ತಮ್ಮ ಮೊದಲ ಪ್ರಯತ್ನದಲೇ ಕಪ್​ ಗೆದ್ದು ಇತಿಹಾಸ ಸೃಷ್ಟಿಸಿತ್ತು.

ಜೋಹಾನ್ಸ್ ಬರ್ಗ್​ನ ವಾಂಡರರ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 157 ರನ್ ಗಳ ಸಾಧಾರಣ ಮೊತ್ತ ಪೇರಿಸಿ ಸವಾಲೊಡ್ಡಿತ್ತು. 75 ರನ್ ಗಳಿಸಿದ್ದ ಗೌತಮ್ ಗಂಭೀರ್ ಅವರದ್ದೇ ಗರಿಷ್ಠ ಗಳಿಕೆಯಾಗಿತ್ತು. ರೋಹಿತ್ ಶರ್ಮಾ 30 ರನ್ ಕೊಡುಗೆ ನೀಡಿದ್ದರು. ಉಳಿದ ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ತಂಡಕ್ಕೆ ಸಿಗಲಿಲ್ಲ. ಪಾಕ್ ಪರ ಉಮರ್ ಗುಲ್ ಮೂರು ವಿಕೆಟ್ ಕಿತ್ತಿದ್ದರು.

ಇದನ್ನೂ ಭದ್ರತಾ ವ್ಯವಸ್ಥೆಗೆ ಐಸಿಸಿ ತೃಪ್ತಿ; ಪಾಕ್‌ ನೆಲದಲ್ಲೇ ಚಾಂಪಿಯನ್ಸ್‌ ಟ್ರೋಫಿ

ಸುಲಭ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲಿ ಸತತ ವಿಕೆಟ್ ಕಳೆದುಕೊಂಡಿತ್ತು, ಆದರೆ ಮತ್ತೊಂದು ತುದಿಯಲ್ಲಿ ತಂಡದ ಗೆಲುವಿಗಾಗಿ ಟೊಂಕಕಟ್ಟಿ ನಿಂತಿದ್ದ ಮಿಸ್ಬಾ ಉಲ್ ಹಕ್ ಏಕಾಂಗಿ ಹೋರಾಟ ನಡೆಸಿ ಗೆಲುವಿನ ಆಸೆ ಚಿಗುರಿಸಿದ್ದರು. ಕೊನೆಯ ಓವರ್​ಗೆ ಒಂದು ವಿಕೆಟ್ ಸಹಾಯದಿಂದ 13 ರನ್ ತೆಗೆಯುವ ಸವಾಲು ಪಾಕ್​ಗೆ ಎದುರಾಯಿತು.

ಅನುಭವಿ ಬೌಲರ್ ಹರ್ಭಜನ್ ಸಿಂಗ್‌ ಅವರ ಓವರ್​ ಬಾಕಿ ಉಳಿದಿದ್ದರೂ, ಧೋನಿ ಗಟ್ಟಿ ನಿರ್ಧಾರ ಮಾಡಿ ಜೋಗಿಂದರ್ ಶರ್ಮಾಗೆ ಬಾಲ್ ನೀಡಿದ್ದರು. ಆರಂಭದಲ್ಲೇ ಸಿಕ್ಸರ್ ಬಾರಿಸಿದರೂ, ಮೂರನೇ ಎಸೆತವನ್ನು ಸ್ಕೂಪ್ ಮಾಡಲು ಹೋದ ಮಿಸ್ಬಾ ಅವರು ಶ್ರೀಶಾಂತ್ ಕೈಗೆ ಕ್ಯಾಚ್ ನೀಡಿದ್ದರು. ಇದರೊಂದಿಗೆ ಭಾರತ 5 ರನ್ ಅಂತರದಿಂದ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿತು. ಇಲ್ಲಿಂದ ಧೋನಿ ಯುವ ಕೂಡ ಆರಂಭವಾಯಿತು. ಬಳಿಕ 2011ರ ಏಕದಿನ ವಿಶ್ವಕಪ್​ನಲ್ಲಿಯೂ ಭಾರತಕ್ಕೆ ಧೋನಿ ವಿಶ್ವಕಪ್​ ತಂದುಕೊಟ್ಟರು.