ನಮಗೆ ನೈಸರ್ಗಿಕವಾಗಿ ಹಲವು ವಸ್ತುಗಳು ದೊರೆಯುತ್ತವೆ. ನಮ್ಮ ಪ್ರಕೃತಿಯಲ್ಲಿ ನಮಗೆ ಅದ್ಭುತ ಪ್ರಯೋಜನಗಳನ್ನು ನೀಡುವಂತಹ ಸಾಕಷ್ಟು ಸಸ್ಯಗಳು, ಗಿಡಮೂಲಿಕೆಗಳು ಇವೆ. ಅದು ನಮಗೆ ವರವಾಗಿ ಬಂದಿದೆ ಎಂದೇ ಹೇಳಬಹುದು. ಆದರೆ ಜನರು ಹೆಚ್ಚು ಕೃತಕ ವಸ್ತುಗಳತ್ತ ಆಕರ್ಷಿತರಾಗುತ್ತಾರೆ. ಯಾಕೆಂದರೆ ಅದರಿಂದ ಬಹಳ ಬೇಗನೆ ಫಲಿತಾಂಶವನ್ನು ಪಡೆಯಬಹುದು ಎಂದು. ಆದರೆ ಇದರಿಂದ ಪ್ರಯೋಜನಕ್ಕಿಂತ ಹೆಚ್ಚು ಹಾನಿಗಳು ಉಂಟಾಗುತ್ತದೆ. ಹಾಗಾಗಿ ಪ್ರಕೃತಿಯಲ್ಲಿ ದೊರೆಯುವಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ ನಿಮ್ಮ ಆರೋಗ್ಯ, ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಅದರಲ್ಲಿ ಒಂದು ಅದ್ಭುತವಾದ ವಸ್ತು ಎಂದರೆ ನುಗ್ಗೆ ಸೊಪ್ಪು (Drumstick Leaves Benefits). ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ 300 ರೋಗಗಳನ್ನು ನಿವಾರಿಸಬಹುದು ಎಂದು ಹೇಳುತ್ತಾರೆ. ಹಾಗೇ ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ನುಗ್ಗೆ ಸೊಪ್ಪನ್ನು ಬಳಸಿ ಏನೆಲ್ಲಾ ಸೌಂದರ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.
ವಿಟಮಿನ್‌ಗಳಿಂದ ಸಮೃದ್ಧವಾಗಿದೆ:
ನುಗ್ಗೆ ಸೊಪ್ಪು ಮತ್ತು ಅದರ ಬೀಜಗಳಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದೆ. ಚರ್ಮದಿಂದ ಉತ್ಪತ್ತಿಯಾಗುವಂತಹ ನೈಸರ್ಗಿಕ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುತ್ತದೆ. ಹಾಗಾಗಿ ನುಗ್ಗೆ ಸೊಪ್ಪಿನ ನೀರನ್ನು ಸೇವಿಸಿ ಚರ್ಮವನ್ನು ಹೈಡ್ರೇಟ್ ಆಗಿಡಿ.
ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ
ಈ ಸೊಪ್ಪು ಝೆಟಿನ್ ಮತ್ತು ಕ್ವೆರ್ಸೆಟಿನ್ ಸೇರಿದಂತೆ ಹಲವು ಆ್ಯಂಟಿ ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ಫ್ರೀ ರಾಡಿಕಲ್ಸ್ ಹಾನಿಯಿಂದ ರಕ್ಷಿಸುತ್ತದೆ. ಮತ್ತು ನೆರಿಗೆಗಳು ಹಾಗೂ ಸೂಕ್ಷ್ಮ ಗೆರೆಗಳನ್ನು ಕಡಿಮೆ ಮಾಡುವ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿ ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ತೇವಾಂಶಯುಕ್ತ ಚರ್ಮವನ್ನು ಪಡೆಯಿರಿ
ಇದರಲ್ಲಿ ಅಮೈನೋ ಮತ್ತು ಒಲಿಯಿಕ್ ಆಮ್ಲಗಳು ಸಮೃದ್ಧವಾಗಿರುವ ಕಾರಣ ಇದು ಒಣ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಇದರಿಂದ ನಿಮ್ಮ ಚರ್ಮ ಹೊಳೆಯುತ್ತದೆ.
ಪಿಂಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ:
ಹೈಪರ್ ಪಿಂಗ್ಮೆಂಟೇಶನ್ ಹಲರಲ್ಲಿ ಕಂಡುಬರುವಂತಹ ಸಾಮಾನ್ಯವಾದ ಸಮಸ್ಯೆಯಾಗಿದೆ. ನುಗ್ಗೆ ಸೊಪ್ಪಿನಲ್ಲಿ ಕಿತ್ತಳೆ ಹಣ್ಣಿಗಿಂತ 7 ಪಟ್ಟು ವಿಟಮಿನ್ ಸಿ ಇದೆ . ಹಾಗಾಗಿ ಇದು ಕಪ್ಪು ಕಲೆಗಳು ಮತ್ತು ಹೈಪರ್ ಪಿಂಗ್ಮೆಂಟೇಶನ್ ಅನ್ನು ನಿವಾರಿಸಿ ನಿಮ್ಮ ಚರ್ಮವನ್ನು ಕಲೆರಹಿತವಾಗಿಸುತ್ತದೆ.
ಇದನ್ನೂ ಓದಿ:ಮಹಿಳೆಯರು ಬ್ರಾ ಧರಿಸದಿದ್ದರೆ ಏನಾಗುತ್ತದೆ? ಈ ಬಗ್ಗೆ ತಜ್ಞರು ಹೇಳುವುದೇನು?
ನುಗ್ಗೆ ಸೊಪ್ಪಿನ ನೀರನ್ನು ತಯಾರಿಸುವ ವಿಧಾನ:
ನುಗ್ಗೆ ಸೊಪ್ಪಿನ ನೀರನ್ನು ತಯಾರಿಸಲು ಒಣಗಿದ ಅಥವಾ ತಾಜಾ ನುಗ್ಗೆ ಸೊಪ್ಪನ್ನು ಬಳಸಬಹುದು. ಅಥವಾ ನುಗ್ಗೆ ಸೊಪ್ಪಿನ ಪುಡಿಯನ್ನು ಕೂಡ ಬಳಸಿ ತಯಾರಿಸಬಹುದು. ನೀರಿನಲ್ಲಿ ಇದನ್ನು ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. 3-4 ನಿಮಿಷ ಬಿಟ್ಟು ಅದನ್ನು ಸೋಸಿ ಉಗುರುಬೆಚ್ಚಗಿರುವಾಗಲೇ ಕುಡಿಯಿರಿ. ಇದನ್ನು ಪ್ರತಿದಿನ ಸೇವಿಸಿದರೆ ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಈ ನೈಸರ್ಗಿಕ ಸಸ್ಯದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಇದನ್ನು ಸೇವಿಸುವುದರಿಂದ ಅಲರ್ಜಿ ಸಮಸ್ಯೆಯಾಗಿರುವುದು ವರದಿಯಾಗಿಲ್ಲ. ಹಾಗಾಗಿ ಇದನ್ನು ಯಾವುದೇ ವಸ್ತುವಿನ ಜೊತೆ ಬೆರೆಸಿ ಸೇವಿಸಬಹುದು. ಇದು ಎಲ್ಲಾ ಪ್ರಕಾರದ ಚರ್ಮ ಹಾಗೂ ಕೂದಲಿನ ಸಮಸ್ಯೆಗೂ ಪರಿಹಾರ ನೀಡುತ್ತದೆ.