Friday, 22nd November 2024

Unique Tradition: ಈ ನಗರದ ಗಡಿಯಾರದಲ್ಲಿ 12 ಸಂಖ್ಯೆಯೇ ಇಲ್ಲ!

Unique Tradition

ದಿನದಲ್ಲಿ ಎಷ್ಟು ಗಂಟೆಗಳಿವೆ (Time) ಎಂದು ಯಾರಾದರೂ ನಮ್ಮನ್ನು ಪ್ರಶ್ನಿಸಿದರೆ ನಾವು 24 ಗಂಟೆ ಎಂದು ಹೇಳುತ್ತೇವೆ. ಆದರೆ ಈ ಒಂದು ನಗರದ (Town) ಜನರು ಮಾತ್ರ 22 ಗಂಟೆ ಎಂದು ಹೇಳುತ್ತಾರೆ. ಯಾಕೆಂದರೆ ಇದು ಇಲ್ಲಿನ ವಿಶಿಷ್ಟ ಸಂಪ್ರದಾಯದ (Unique Tradition) ಭಾಗವಾಗಿದೆ. ಇಲ್ಲಿನ ಗಂಟೆಗಳಲ್ಲಿ 12 ಸಂಖ್ಯೆಯೇ ಇಲ್ಲ. ಈ ನಗರದಲ್ಲಿ ಎಲ್ಲಿ ಹೋದರೂ ನಾವು ಕೇವಲ 11 ಗಂಟೆಗಳಿರುವ ಬಳಿಕ 1 ಅನ್ನು ತೋರಿಸುವ ಗಡಿಯಾರವನ್ನು ಕಾಣಬಹುದು.

ಜಗತ್ತಿನ ಯಾವ ಮೂಲೆಗೆ ಹೋದರೂ ನಾವು ಗಡಿಯಾರದಲ್ಲಿ 12 ಗಂಟೆಗಳನ್ನು ಕಾಣಬಹುದು. ಆದರೆ ಸ್ವಿಟ್ಜರ್ಲೆಂಡ್ ನ (Switzerland) ಸೊಲೊಥರ್ನ್ (Solothurn) ಪಟ್ಟಣದಲ್ಲಿ ಮಾತ್ರ 11 ಗಂಟೆಗಳು ಮಾತ್ರ ಇವೆ. ಇಲ್ಲಿನ ಗಡಿಯಾರಗಳ ಸಂಖ್ಯೆಯಲ್ಲಿ 11ರ ಅನಂತರ 1 ಅನ್ನು ಹೊಂದಿದೆ. ಇಲ್ಲಿನ ಗಡಿಯಾರ 12 ಸಂಖ್ಯೆಯನ್ನು ಹೊಂದಿಲ್ಲ .

Unique Tradition

ಗಂಟೆಯಲ್ಲಿ ಸಂಖ್ಯೆ ಕಡಿಮೆ ಇರಲು ಒಂದು ಕಥೆಯು ಇದೆ. ಒಮ್ಮೆ ಇಲ್ಲಿನ ಜನರು ತಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲ ಎಂದು ಬೇಸರದಲ್ಲಿದ್ದರು. ಆಗ ಪರ್ವತಗಳಿಂದ ಬಂದ “ಎಲ್ಫ್” ಎನ್ನುವ ಒಂದು ನಿಗೂಢ ಜೀವಿ ಜನರ ಸಂಕಟಗಳನ್ನು ಹೋಗಲಾಡಿಸಿತ್ತು. ಇದರ ಸ್ಮರಣಾರ್ಥವಾಗಿ ನಗರವಾಸಿಗಳು “ಇಲೆವನ್” ಅಂದರೆ 11 ಸಂಖ್ಯೆಯನ್ನು ಪರಿಗಣಿಸುತ್ತಾರೆ ಎಂಬ ಕಥೆಯಿದೆ. ಆದ್ದರಿಂದ ಅವರು ಎಲ್ಲಾ ಕೆಲಸಗಳಲ್ಲಿ 11 ಅನ್ನು ಮಾನದಂಡವಾಗಿ ಪರಿಗಣಿಸುತ್ತಾರೆ.

11 ಸಂಖ್ಯೆಯು ಸೊಲೊಥರ್ನ್‌ನಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ನಗರದಾದ್ಯಂತ ಕಾಣಬಹುದು. ಸೊಲೊಥರ್ನ್ 11 ವಸ್ತುಸಂಗ್ರಹಾಲಯಗಳು, ಕಾರಂಜಿಗಳು, ಪ್ರಾರ್ಥನಾ ಮಂದಿರಗಳು, ಚರ್ಚುಗಳನ್ನು ಹೊಂದಿದೆ. ಗಡಿಯಾರದಲ್ಲೂ 11 ಸಂಖ್ಯೆ ಮಾತ್ರ ಇದೆ. ಸ್ಥಳೀಯ ಬಿಯರ್ ಬ್ರ್ಯಾಂಡ್ ಅನ್ನು ಸಹ “ಒಫಿ” ಎಂದು ಕರೆಯಲಾಗುತ್ತದೆ. ಇದು ಸ್ಥಳೀಯ ಉಪಭಾಷೆಯಲ್ಲಿ “ಹನ್ನೊಂದು” ಎಂದಾಗಿದೆ.

Unique Tradition

ಮ್ಯಾಜಿಕ್ ಸಂಖ್ಯೆ 11ರಿಂದ ಪ್ರೇರಿತವಾದ ಸೇಂಟ್ ಉರ್ಸಸ್ ಕ್ಯಾಥೆಡ್ರಲ್ ಸೊಲೊಥರ್ನ್‌ನ ಹೆಗ್ಗುರುತಾಗಿದೆ. ಅಸ್ಕೋನಾದ ಮಾಸ್ಟರ್ ಬಿಲ್ಡರ್ ಗೇಟಾನೊ ಮ್ಯಾಟಿಯೊ ಪಿಸೋನಿ ಅವರು 1762ರಲ್ಲಿ ಇದನ್ನು ವಿನ್ಯಾಸಗೊಳಿಸಿದರು.

Costly Rice: ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ; ಕೆಜಿಗೆ 15,000 ರೂ!

ಇದರ ಬೆಲ್ ಟವರ್ 6 x 11 ಮೀಟರ್ ಅಳತೆಯನ್ನು ಹೊಂದಿದ್ದು, 11 ಗಂಟೆಗಳನ್ನು ಹೊಂದಿದೆ. ಕ್ಯಾಥೆಡ್ರಲ್‌ನ 11 ಬಲಿಪೀಠವದ ಹನ್ನೊಂದನೇ ಕಪ್ಪು ಕಲ್ಲುಗಳನ್ನು ನೇವ್‌ನ ಒಂದು ಸ್ಥಳದಿಂದ ಏಕಕಾಲದಲ್ಲಿ ಕಾಣಬಹುದು. ಸ್ಮಾರಕ ಹೊರ ಮೆಟ್ಟಿಲು 11 ಹಂತಗಳ ಮೂರು ಸೆಟ್‌ಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಕ್ಯಾಥೆಡ್ರಲ್ ನಿರ್ಮಿಸಲು 11 ವರ್ಷಗಳು ಬೇಕಾಯಿತು.