Sunday, 24th November 2024

Coconut Oil Side Effect: ತೆಂಗಿನೆಣ್ಣೆಯನ್ನು ಮುಖಕ್ಕೆ ಹಚ್ಚುತ್ತಿದ್ದಿರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ!

Coconut Oil Side Effect

ತೆಂಗಿನೆಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಇದು ಕೂದಲನ್ನು ಹೈಡ್ರೇಟ್ ಮಾಡಿ ಹೊಳೆಯುವಂತೆ ಮಾಡುತ್ತದೆ. ಕೂದಲಿನ ಬೆಳವಣಿಗೆಗೂ ಸಹಕರಿಸುತ್ತದೆ. ಆದರೆ ಕೆಲವರು ತೆಂಗಿನೆಣ್ಣೆಯನ್ನು ಮುಖಕ್ಕೆ ಹಚ್ಚುತ್ತಾರೆ. ಚರ್ಮಕ್ಕೂ ಕೂಡ ತೆಂಗಿನೆಣ್ಣೆ ಒಳ್ಳೆಯದೇ. ಆದರೆ ಕೆಲವೊಂದು ಜನರು ಇದನ್ನು ಚರ್ಮಕ್ಕೆ ಬಳಸುವುದರಿಂದ ಕೆಲವೊಂದು ಅಡ್ಡಪರಿಣಾಮಗಳನ್ನು(Coconut Oil Side Effect) ಎದುರಿಸಬೇಕಾಗಬಹುದು. ಹಾಗಾಗಿ ತಜ್ಞರ ಸಲಹೆಯಿಲ್ಲದೆ ಚರ್ಮದ ಮೇಲೆ ತೆಂಗಿನ ಎಣ್ಣೆಯನ್ನು ಬಳಸಿದರೆ, ಅದರಿಂದ ಕೆಲವರಿಗೆ ಸಮಸ್ಯೆ ಕಾಡಬಹುದು. ಹಾಗಾಗಿ ಯಾವ ಜನರು ಅದನ್ನು ಬಳಸಬಾರದು ಎಂದು ಇಲ್ಲಿ ತಿಳಿಸಲಾಗಿದೆ.

Coconut Oil Side Effect

ಎಣ್ಣೆಯುಕ್ತ ಚರ್ಮ ಹೊಂದಿರುವವರು
ಚರ್ಮವು ತುಂಬಾ ಎಣ್ಣೆಯುಕ್ತವಾಗಿದ್ದರೆ ಅಂತವರು ತೆಂಗಿನ ಎಣ್ಣೆಯನ್ನು ಮುಖಕ್ಕೆ ಬಳಸುವುದನ್ನು ತಪ್ಪಿಸಬೇಕು. ಯಾಕೆಂದರೆ ಇದರಿಂದ ಅವರ ಮುಖದಲ್ಲಿ ಎಣ್ಣೆಯಂಶ ಹೆಚ್ಚಾಗಿ ಚರ್ಮದ ಅಂದ ಕೆಡುತ್ತದೆ. ವಾಸ್ತವವಾಗಿ, ತೆಂಗಿನ ಎಣ್ಣೆ ಕಾಮೆಡೋಜೆನಿಕ್ ಆಗಿದೆ, ಅಂದರೆ ಈ ಎಣ್ಣೆ ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಮೊಡವೆ ಸಮಸ್ಯೆಗಳಿಂದ ಬಳಲುತ್ತಿರುವವರು
ಚರ್ಮದ ಮೇಲೆ ಈಗಾಗಲೇ ಮೊಡವೆಗಳಿದ್ದರೆ, ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಏಕೆಂದರೆ ಅದು ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ. ಇದರಿಂದ ರಂಧ್ರಗಳಲ್ಲಿ ಕೊಳೆ, ಧೂಳು ಸೇರಿಕೊಂಡು ಅಲ್ಲಿ ಬ್ಯಾಕ್ಟೀರಿಯಾ ಸೋಂಕಿನಿಂದ ಮೊಡವೆಗಳು ಮೂಡಬಹುದು. ಹಾಗಾಗಿ ಅಂತವರು ತೆಂಗಿನ ಎಣ್ಣೆಯನ್ನು ಬಳಸಬೇಡಿ.

Coconut Oil Side Effect

ಅಲರ್ಜಿಯಿಂದ ಬಳಲುತ್ತಿರುವವರು
ಅನೇಕ ಜನರ ಚರ್ಮ ಬಹಳ ಬೇಗನೆ ಅಲರ್ಜಿಗೆ ಒಳಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ತೆಂಗಿನ ಎಣ್ಣೆಯನ್ನು ಬಳಸುವುದನ್ನು ತಪ್ಪಿಸಬೇಕು. ಪ್ಯಾಚ್ ಟೆಸ್ಟ್ ಮಾಡದೆ ಇದನ್ನು ಬಳಸುವುದರಿಂದ ಚರ್ಮದಲ್ಲಿ ತುರಿಕೆ, ಕೆಂಪಾಗುವಿಕೆ, ಉರಿ ಅಥವಾ ಊತ ಉಂಟಾಗಬಹುದು. ಹಾಗಾಗಿ ಅಲರ್ಜಿಯ ಸಮಸ್ಯೆ ಇದ್ದರೆ ಪ್ಯಾಚ್ ಟೆಸ್ಟ್ ಮಾಡಿ ಬಳಸುವುದು ಉತ್ತಮ.

ಇದನ್ನೂ ಓದಿ:ಮಲಬದ್ಧತೆ ನಿವಾರಿಸಲು ಈ ಗಿಡಮೂಲಿಕೆಗಳ ಚಹಾ ಸೇವಿಸಿ ನೋಡಿ!

ಎಲ್ಲಾ ಚರ್ಮಕ್ಕೆ ಒಳ್ಳೆಯದಲ್ಲ
ತೆಂಗಿನ ಎಣ್ಣೆಯ ಬಳಕೆಯು ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಲ್ಲ ಎಂದು ಹೇಳಲಾಗಿದೆ. ವಿಶೇಷವಾಗಿ ಎಣ್ಣೆಯುಕ್ತ ಅಥವಾ ಸೂಕ್ಷ್ಮ ಚರ್ಮವನ್ನು ಹೊಂದಿರುವವರಿಗೆ ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ತೆಂಗಿನ ಎಣ್ಣೆಯನ್ನು ಬಳಸುವಾಗ ಜಾಗರೂಕರಾಗಿರಬೇಕು ಮತ್ತು ನಿಮ್ಮ ಚರ್ಮ ಮತ್ತು ಕೂದಲಿನ ಅವಶ್ಯಕತೆಗಳಿಗೆ ಅನುಗುಣವಾಗಿ ಅದನ್ನು ಸರಿಯಾಗಿ ಬಳಸಿ.
ಈ ಸಲಹೆಗಳನ್ನು ಪಾಲಿಸುವ ಮೂಲಕ ತೆಂಗಿನೆಣ್ಣೆಯನ್ನು ಚರ್ಮಕ್ಕೆ ಬಳಸುವ ಮುನ್ನ ಕೆಲವು ಜನರು ಎಚ್ಚರವಹಿಸಿ. ಇದರಿಂದ ನೀವು ಚರ್ಮದ ಸಮಸ್ಯೆಗಳಿಂದ ದೂರವಿರಬಹುದು.