Friday, 22nd November 2024

Job News: ಇಸ್ರೋದಲ್ಲಿ 103 ಕಾಯಂ ಹುದ್ದೆಗಳಿವೆ, ಇಂದೇ ಅರ್ಜಿ ಸಲ್ಲಿಸಿ!

isro job news

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) 103 ವಿವಿಧ ಹುದ್ದೆಗಳಿಗೆ ಅರ್ಜಿ (job alert) ಕರೆಯಲಾಗಿದೆ. ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ (HSFC) ಕಾಯಂ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು (job news) ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ.

ಈ ಸಂಸ್ಥೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ ವೈದ್ಯಕೀಯ ಅಧಿಕಾರಿ – ಎಸ್‌ಡಿ (ಏವಿಯೇಷನ್ ​​ಅಥವಾ ಕ್ರೀಡೆ), ವೈದ್ಯಕೀಯ ಅಧಿಕಾರಿ – ಎಸ್‌ಸಿ, ವಿಜ್ಞಾನಿ ಅಥವಾ ಎಂಜಿನಿಯರ್ – ಎಸ್‌ಸಿ, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ತಂತ್ರಜ್ಞ – ಬಿ, ಡ್ರಾಫ್ಟ್‌ಮನ್ – ಬಿ, ಸಹಾಯಕ (ರಾಜ್ ಭಾಷಾ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅ.9.

ಈ ನೇಮಕಾತಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳು ಈ ಕೆಳಗಿನಂತಿವೆ:

ಖಾಲಿ ಹುದ್ದೆಗಳು: ವೈದ್ಯಕೀಯ ಅಧಿಕಾರಿ – SD (ಏವಿಯೇಷನ್ ​​ಅಥವಾ ಕ್ರೀಡೆ), ವೈದ್ಯಕೀಯ ಅಧಿಕಾರಿ – SC, ವಿಜ್ಞಾನಿ ಅಥವಾ ಇಂಜಿನಿಯರ್ – SC, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ತಂತ್ರಜ್ಞ – B, ಡ್ರಾಫ್ಟ್ಸ್ಮನ್ – B, ಸಹಾಯಕ (ರಾಜ್ ಭಾಷಾ)

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ : 103

ವೈದ್ಯಕೀಯ ಅಧಿಕಾರಿ SD (ವಾಯುಯಾನ ಅಥವಾ ಕ್ರೀಡೆ) – 02
ವೈದ್ಯಕೀಯ ಅಧಿಕಾರಿ SC – 01
ವಿಜ್ಞಾನಿ ಅಥವಾ ಇಂಜಿನಿಯರ್ SC – 10
ತಾಂತ್ರಿಕ ಸಹಾಯಕ – 28
ವೈಜ್ಞಾನಿಕ ಸಹಾಯಕ – 01
ತಂತ್ರಜ್ಞ ಬಿ – 43
ಡ್ರಾಟ್ಸ್ ಮೆನ್ ಬಿ – 13
ಸಹಾಯಕ (ರಾಜ್ ಭಾಷಾ) – 05

ಶೈಕ್ಷಣಿಕ ಅರ್ಹತೆ: ಅರ್ಜಿ ಸಲ್ಲಿಸುವವರು 10ನೇ+ಐಟಿಐ, ಡಿಪ್ಲೊಮಾ, ಬಿಇ/ಬಿಟೆಕ್, ಎಂಇ/ಎಂಟೆಕ್‌ನಂತಹ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರಬೇಕು.

ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯೋಮಿತಿ 35 ವರ್ಷಗಳು.

ವಯೋಮಿತಿ ಸಡಿಲಿಕೆ : ಈ ಕೆಳಕಂಡಂತೆ ಅಭ್ಯರ್ಥಿಗಳಿಗೆ ಸಡಿಲಿಕೆ ಅನ್ವಯಿಸುತ್ತದೆ.

ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ.
OBC ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
PwBD ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ.

ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: 09-10-2024

ಅರ್ಜಿ ಸಲ್ಲಿಸುವ ವಿಧಾನ: ಈ ಉದ್ಯೋಗಗಳಿಗೆ ಅರ್ಹರಾಗಿರುವವರು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಹುದ್ದೆಗಳ ನಂತರ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Job News: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ