ಅಹಮದಾಬಾದ್: ಆರು ವರ್ಷದ ಬಾಲಕಿ ಮೇಲೆ ಶಾಲೆಯ ಪ್ರಾಂಶುಪಾಲ(Principal)ನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ(Attempt to physical abuse) ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿರುವ ಹೀನ ಕೃತ್ಯವೊಂದು ಗುಜರಾತ್‌ನಲ್ಲಿ ನಡೆದಿದೆ(Gujarat Horror). ಒಂದನೇ ತರಗತಿಯ ವಿದ್ಯಾರ್ಥಿ ಅತ್ಯಾಚಾರ(Physical Abuse)ಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದಿರುವ ಪಾಪಿ ಪ್ರಾಂಶುಪಾಲ, ಮೃತದೇಹವನ್ನು ಶಾಲಾ ಕಾಂಪೌಂಡ್ ಬಳಿ ಎಸೆದಿದ್ದಾನೆ.
ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಈ ಹೀನ ಕೃತ್ಯ ನಡೆದಿದ್ದು, ಆರಫಿ ಪ್ರಾಂಶುಪಾಲನನ್ನು 55 ವರ್ಷದ ಗೋವಿಂದ್ ನಟ್ ಎಂದು ಗುರುತಿಸಲಾಗಿದ್ದು, ಆತನನ್ನು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ರಾಜದೀಪ್ ಸಿಂಗ್ ಝಾಲಾ ಅವರು ಪ್ರತಿಕ್ರಿಯಿಸಿದ್ದು, ಆರು ವರ್ಷದ ಬಾಲಕಿಯ ಮೃತದೇಹ ಗುರುವಾರ ಸಂಜೆ ಶಾಲೆಯ ಆವರಣದಲ್ಲಿ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 10 ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಘಟನೆ ವಿವರ:
ಪ್ರತಿದಿನ ಪ್ರಾಂಶುಪಾಲ ಗೋವಿಂದ್ ನಟ್ ಜೊತೆ ಬಾಲಕಿ ಶಾಲೆಗೆ ಹೋಗುತ್ತಿದ್ದಳು. ಆರೋಪಿ ನಟ್, ಬೆಳಗ್ಗೆ 10.20 ರ ಸುಮಾರಿಗೆ ಬಾಲಕಿಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದ. ಸ್ವತಃ ತಾಯಿಯೇ ಮಗಳನ್ನು ಪ್ರಿನ್ಸಿಪಾಲರ ಕಾರಿನಲ್ಲಿ ಕೂರಿಸಿದ್ದಳು. ಆದರೆ ಅವಳು ಶಾಲೆಗೆ ತಲುಪಿರಲಿಲ್ಲ. ಶಾಲೆಗೆ ಹೋಗುವ ದಾರಿಯಲ್ಲಿ, ಆರೋಪಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಆಗ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣ ನಟ್ ಬಾಲಕಿಯ ಬಾಯಿಯನ್ನು ಕೈಗಳಿಂದ ಮುಚ್ಚಿದ್ದಾನೆ. ಆಗ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.
ಶಾಲೆ ತಲುಪಿದ ಪ್ರಾಂಶುಪಾಲರು ಬಾಲಕಿಯ ಶವವನ್ನು ಕಾರಿನಲ್ಲಿಟ್ಟು ವಾಹನಕ್ಕೆ ಬೀಗ ಹಾಕಿದ್ದರು. “ಸಂಜೆ 5 ಗಂಟೆ ಸುಮಾರಿಗೆ, ಅವನು ಶವವನ್ನು ಶಾಲೆಯ ಕಟ್ಟಡದ ಹಿಂದೆ ಎಸೆದಿದ್ದು, ಬಾಲಕಿಯ ಶಾಲಾ ಬ್ಯಾಗ್ ಮತ್ತು ಬೂಟುಗಳನ್ನು ಅವಳ ತರಗತಿಯ ಬಳಿ ಎಸೆದು ಹೋಗುತ್ತಾನೆ. ಇತ್ತ ಬಾಲಕಿ ಮನೆಗೆ ಬಾರದೇ ಇರುವುದನ್ನು ಕಂಡು ಗಾಬರಿಗೊಂಡ ಪೋಷಕರು ಶಾಲೆಗೆ ಬಂದಾಗ ಬಾಲಕಿಯ ಶವ ಪತ್ತೆಯಾಗಿತ್ತು. ಆಗ ಏನೂ ಅರಿಯದಂತೆ ನಟಿಸಿದ್ದ ಪ್ರಾಂಶುಪಾಲ, ತಾನು ಬಾಲಕಿಯನ್ನು ಶಾಲೆಗೆ ಬಿಟ್ಟು ಬೇರೆ ಕೆಲಸ ಇತ್ತೆಂದು ಹೊರಗೆ ಹೋಗಿದ್ದ ಎಂದಿದ್ದಾನೆ.
ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ವಿಚಾರಣೆ ವೇಳೆ ಆರೋಪಿ ತನ್ನ ನೀಚ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ಗೋವಿಂದ್ ನಟ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಪ್ರತಿಕ್ರಿಯಿಸಿದ್ದು, ಇದರಿಂದ ನನಗೆ ನೋವಾಗಿದೆ. ನಾವು ಇದನ್ನು ಮೂರು ದಿನಗಳಿಂದ ಅನುಸರಿಸುತ್ತಿದ್ದೇವೆ. ನಾವು ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದೇವೆ. ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ನಾನು ಈ ಘಟನೆಯನ್ನು ಖಂಡಿಸುತ್ತೇನೆ ಮತ್ತು ಅಂತಹ ಅಪರಾಧಗಳು ಪುನರಾವರ್ತನೆಯಾಗದಂತೆ ನಾವು ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse : ಚಲಿಸುವ ಕಾರಿನಲ್ಲಿ 13 ವರ್ಷದ ದಲಿತ ಬಾಲಕಿಯ ಮೇಲೆ ಮೂವರಿಂದ ಅತ್ಯಾಚಾರ