Friday, 22nd November 2024

ಬೆಂಗಳೂರಿನಲ್ಲಿ ದೇಶ್‌ ಕಾ ಟ್ರಕ್ ಉತ್ಸವ ಆಯೋಜಿಸುವ ಮೂಲಕ ಗ್ರಾಹಕರು ಉದ್ಯಮದಲ್ಲಿ ಹೆಚ್ಚಿನ ಲಾಭ ಗಳಿಸುವಂತೆ ಮಾಡಲಿರುವ ಟಾಟಾ ಮೋಟಾರ್ಸ್

• ಟಾಟಾ ಮೋಟಾರ್ಸ್‌ ನ ಹೊಸ ಟ್ರಕ್‌ ಉತ್ಪನ್ನಗಳನ್ನು ಹತ್ತಿರದಿಂದ ನೋಡಿ ತಿಳಿಯುವ ಅವಕಾಶ
• ಇಂಧನ ದಕ್ಷತೆಯನ್ನು ಉತ್ತಮಗೊಳಿಸಲು, ಕಾರ್ಯನಿರ್ವಹಣೆಗಳ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ತಜ್ಞರಿಂದ ಮಾರ್ಗದರ್ಶನ

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್ 2024ರ ಸೆಪ್ಟೆಂಬರ್ 24 ರಂದು ಬೆಂಗಳೂರಿನಲ್ಲಿ ಒಂದು ದಿನದ ದೇಶ್ ಕಾ ಟ್ರಕ್ ಉತ್ಸವವನ್ನು ಆಯೋಜಿಸಲು ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಟ್ರಕ್ ಮಾಲೀಕರ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನ ಒದಗಿಸುವ ಗುರಿಯನ್ನು ಹೊಂದಲಾಗಿದ್ದು, ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್‌ ನ ಹೊಸ ಟ್ರಕ್‌ ಶ್ರೇಣಿಗಳನ್ನು ಹತ್ತಿರದಿಂದ ನೋಡಿ ತಿಳಿಯುವ ಅವಕಾಶ ಒದಗಿಸಲಾಗುತ್ತದೆ. ಜೊತೆಗೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುವ ಮೂಲಕ ಹೆಚ್ಚಿನ ಲಾಭದಾಯಕತೆ ಉಂಟು ಮಾಡುವ ಮತ್ತು ಮಾಲೀಕತ್ವದ ವೆಚ್ಚವನ್ನು (ಟಿಸಿಓ- ಟೋಟಲ್ ಕಾಸ್ಟ್ ಆಫ್ ಓನರ್ ಶಿಪ್) ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ಉತ್ಪನ್ನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಇಂಧನ ದಕ್ಷತೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ಲಾಭದಾಯಕತೆಯನ್ನು ಸಾಧಿಸಲು ತಜ್ಞರಿಂದ ಮಾರ್ಗದರ್ಶನವನ್ನು ಪಡೆಯುತ್ತಾರೆ. ವಾಹನಗಳ ಕುರಿತಾದ ಸಮಗ್ರ ಮಾಹಿತಿಯನ್ನು ಪಡೆಯುತ್ತಾರೆ ಮತ್ತು ಟಾಟಾ ಮೋಟಾರ್ಸ್‌ ನ ಮಾರಾಟ ನಂತರದ ಸಮಗ್ರ ಸೇವೆಗಳ ಒಳನೋಟಗಳನ್ನು ಪಡೆಯುತ್ತಾರೆ. ಕಾರ್ಯಕ್ರಮದಲ್ಲಿ ವಾಹನ ನಿರ್ವಹಣೆ ಸಂವಾದಗಳು, ವಾಹನ ನಿರ್ವಹಣೆ ಉತ್ಪನ್ನಗಳು, ವಾರ್ಷಿಕ ನಿರ್ವಹಣಾ ಪ್ಯಾಕೇಜ್‌ ಗಳು ಮತ್ತು ಸಂಪೂರ್ಣ ಸೇವಾ 2.0 ಯೋಜನೆಯ ಮೂಲಕ 24/7 ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳನ್ನು ಇಲ್ಲಿ ಹೊಂದಬಹುದು. ಗ್ರಾಹಕರು ತಮ್ಮ ಉತ್ಪನ್ನಗಳನ್ನು ಬಳಸಿಕೊಂಡು ದೀರ್ಘಾವಧಿಯ ಯಶಸ್ಸನ್ನು ಸಾಧಿಸಲು ಬೇಕಾದ ಅವಶ್ಯ ಮಾಹಿತಿ ಗಳನ್ನು ಒದಗಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಕಂಪನಿಯು ಪಾಲುದಾರಿಕೆ ಮತ್ತು ಬೆಂಬಲಕ್ಕಾಗಿ ಪ್ರಮುಖ ಗ್ರಾಹಕರನ್ನು ಗೌರವಿಸಲಿದೆ. ಒಟ್ಟಾರೆ ಕಾರ್ಯಕ್ರಮವು ಗ್ರಾಹಕರಿಗೆ ಹೆಚ್ಚು ಲಾಭದಾಯಕ ವಾಗಿದೆ.

ಈ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್‌ ನ ಟ್ರಕ್ಸ್‌ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ ರಾಜೇಶ್ ಕೌಲ್ ಅವರು, “ಟಾಟಾ ಮೋಟಾರ್ಸ್ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ತಕ್ಕ ಪರಿಹಾರವನ್ನು ಒದಗಿಸಲು ಬದ್ಧವಾಗಿದೆ. ದೇಶ್ ಕಾ ಟ್ರಕ್ ಉತ್ಸವವು ನಾವು ಗ್ರಾಹಕರೊಂದಿಗೆ ನೇರವಾಗಿ ಸಂವಹನ ಮಾಡಲು ಅವಕಾಶ ಒದಗಿಸುವ ಪ್ರಮುಖ ವೇದಿಕೆಯಾಗಿದ್ದು, ಅಲ್ಲಿ ನಮ್ಮ ಇತ್ತೀಚಿನ ಡಿಜಿಟಲ್ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನಮ್ಮ ದೃಢವಾದ ಟ್ರಕ್ ಉತ್ಪನ್ನಗಳ ಶ್ರೇಣಿ ಮತ್ತು ಮೌಲ್ಯವರ್ಧಿತ ಸೇವೆಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಗ್ರಾಹಕರಿಗೆ ದೀರ್ಘಕಾಲೀನ ಲಾಭದಾಯಕತೆ ಮತ್ತು ಯಶಸ್ಸನ್ನು ಉಂಟು ಮಾಡಲು ಹಲವು ಸೌಲಭ್ಯಗಳನ್ನು, ಮಾಹಿತಿಗಳನ್ನು ನೀಡಲಾಗು ತ್ತದೆ. ನಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಗ್ರಾಹಕರ ಉದ್ಯಮವು ಭವಿಷ್ಯಕ್ಕೆ ಸಿದ್ಧಗೊಳ್ಳುವಂತೆ ವಿನ್ಯಾಸಗೊಳಿಸ ಲಾಗಿದೆ. ಅವರು ಬೆಳೆಯುತ್ತಿರುವ ಈ ಜಗತ್ತಿನಲ್ಲಿ ಮುಂದೆ ಇರುವಂತೆ ನೋಡಿಕೊಳ್ಳುತ್ತದೆ. ನಮ್ಮ ಸಹಯೋಗ ವನ್ನು ಬಲಪಡಿಸಲು ಮತ್ತು ಜೊತೆಯಾಗಿ ಯಶಸ್ಸನ್ನು ಸಾಧಿಸಲು ನಮ್ಮ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಸಂವಹನ ನಡೆಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.

ಎಲ್‌ಪಿಟಿ, ಅಲ್ಟ್ರಾ, ಸಿಗ್ನಾ ಮತ್ತು ಪ್ರೈಮಾ ಸೇರಿದಂತೆ ಹಲವು ರೀತಿಯ ಕ್ಯಾಬಿನ್ ಆಯ್ಕೆಗಳುಳ್ಳ ವ್ಯಾಪಕ ಶ್ರೇಣಿಯ ಟ್ರಕ್‌ ಗಳನ್ನು ಟಾಟಾ ಮೋಟಾರ್ಸ್ ನೀಡುತ್ತದೆ. ಮಾರ್ಕೆಟ್ ಸರಕು, ಕೃಷಿ, ಸಿಮೆಂಟ್, ಕಬ್ಬಿಣ ಮತ್ತು ಉಕ್ಕು, ಕಂಟೇನರ್, ಪೆಟ್ರೋಲಿಯಂ, ರಾಸಾಯನಿಕ, ನೀರಿನ ಟ್ಯಾಂಕರ್‌ಗಳು, ಎಲ್‌ಪಿಜಿ, ಎಫ್‌ಎಂಸಿಜಿ, ನಿರ್ಮಾಣ, ಗಣಿಗಾರಿಕೆ, ಪುರಸಭೆ ಕಾರ್ಯಾಚರಣೆ ಸೇರಿದಂತೆ ಸರಕು ಸಾಗಣಿಕಾ ಕ್ಷೇತ್ರದ ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸಂಪೂರ್ಣ ನಿರ್ಮಿತ ಟ್ರಕ್‌ ಗಳು ಲಭ್ಯವಿವೆ.

ಈ ಉತ್ಪನ್ನ ಶ್ರೇಣಿಯು ಫ್ಲೀಟ್ ಎಡ್ಜ್ ಅನ್ನು ಹೊಂದಿದ್ದು, ಅದು ಉತ್ಪನ್ನಗಳ ಸಮರ್ಥ ನಿರ್ವಹಣೆಗಾಗಿ ಇರುವ ಟಾಟಾ ಮೋಟಾರ್ಸ್ ನ ಸಂಪರ್ಕಿತ ವಾಹನ ವೇದಿಕೆ ಆಗಿದೆ. ಹೆಚ್ಚು ಬಾಳಿಕೆ ಬರಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ವಿನ್ಯಾಸ ಮಾಡಲಾಗಿದೆ ಮತ್ತು ನಿರ್ದಿಷ್ಟ ಗ್ರಾಹಕರ ಅಗತ್ಯಗಳನ್ನು ಪೂರೈಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಈ ವಾಹನಗಳು ಟಾಟಾ ಮೋಟಾರ್ಸ್‌ ನ ವ್ಯಾಪಕ ನೆಟ್‌ ವರ್ಕ್‌ ನ ನೆರವನ್ನು ಪಡೆಯಬಹು ದಾಗಿದ್ದು, ಕರ್ನಾಟಕದಲ್ಲಿ 146 ಸೇರಿದಂತೆ ರಾಷ್ಟ್ರವ್ಯಾಪಿ 2500ಕ್ಕೂ ಹೆಚ್ಚು ಟಾಟಾ ಮೋಟಾರ್ಸೋ ಮಾರಾಟ ಮತ್ತು ಸೇವಾ ಕೇಂದ್ರಗಳಲ್ಲಿ ಗ್ರಾಹಕರು ನೆರವನ್ನು ಪಡೆಯಬಹುದಾಗಿದೆ