Tuesday, 24th September 2024

Pawan Kalyan: TTDಯ ಮಾಜಿ ಅಧ್ಯಕ್ಷರಿಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ? ಪವನ್‌ ಕಲ್ಯಾಣ್‌ ಮತ್ತೆ ಗುಡುಗು

Pawan kalyan

ಹೈದರಾಬಾದ್: ತಿರುಪತಿಯ ಲಡ್ಡುವಿನಲ್ಲಿ ಗೋವು ಸೇರಿದಂತೆ ನಾನಾ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ (Tirupati Laddoos Row) ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್‌(Pawan Kalyan) ಮತ್ತೆ ಗುಡುಗಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಂ(TTD)ನ ಮಾಜಿ ಮುಖ್ಯಸ್ಥರಾದ ವೈವಿ ಸುಬ್ಬಾ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ವಿರುದ್ಧ ಕಿಡಿ ಕಾರಿದ ಪವನ್‌ ಕಲ್ಯಾಣ್‌, ಇವರಿಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

ಶುದ್ದೀಕರಣ ಕಾರ್ಯಕ್ಕಾಗಿ ಬೆಳಗ್ಗೆ ವಿಜಯವಾಡದ ಕನಕದುರ್ಗಾ ದೇಗುಲಕ್ಕೆ ಭೇಟಿ ನೀಡಿದ ಅವರು, ಟಿಟಿಡಿಯ ಮಾಜಿ ಅಧ್ಯಕ್ಷರಿಬ್ಬರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದ್ರಕೀಲಾದ್ರಿಯ ಮೇಲಿರುವ ಕನಕದುರ್ಗಾ ದೇವಿಯ ರಥಕ್ಕೆ ಜೋಡಿಸಲಾಗಿದ್ದ ಮೂರು ಚಿನ್ನದ ಸಿಂಹಗಳ ಮೂರ್ತಿಯನ್ನು ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಲೂಟಿ ಮಾಡಲಾಗಿದೆ. ಟಿಟಿಡಿ ಅಧ್ಯಕ್ಷರನ್ನು ಪ್ರಶ್ನಿಸಿದಾಗ ಬರೀ ಮೌನವೇ ನಮಗೆ ಉತ್ತರವಾಗಿ ಸಿಕ್ಕಿತ್ತು. ವೈ.ವಿ.ಸುಬ್ಬಾ ರೆಡ್ಡಿ ಮತ್ತು ಕರುಣಾಕರ್ ರೆಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೋ ಎಂಬುದು ಗೊತ್ತಿಲ್ಲ. ನಿಮ್ಮ ಆಡಳಿತದಲ್ಲಿ ಟಿಟಿಡಿ ಸ್ಥಾಪನೆಯಾಯಿತು. ದೇವರ ಪ್ರಸಾದಗಳಿಗೆ ಅಪಚಾರ ಎಸಗಿರುವ ಈ ಕಾರ್ಯಕ್ಕೆ ನೀವೇ ಜವಾಬ್ದಾರರು. ವರದಿಗಳನ್ನು ಸ್ವೀಕರಿಸಿದ ನಂತರವೇ ನಾವು ಈ ಪ್ರಶ್ನೆಗಳನ್ನು ಎತ್ತುತ್ತಿದ್ದೇವೆ ಎಂದಿದ್ದಾರೆ.

ಮತ್ತೊಂದೆಡೆ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚಿಸುವಂತೆ ಕೋರಿ ಟಿಟಿಡಿ ಮಾಜಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಂಡಳಿಯ ಮತ್ತೊಬ್ಬ ಮಾಜಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ, ಕಲಬೆರಕೆ ತುಪ್ಪದ ಬಳಕೆಯ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಆರೋಪ ನಿರಾಧಾರ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Tirupati Laddoo Row: ಕಠಿಣ ಪ್ರಾಯಶ್ಚಿತ ಕಾರ್ಯ ಆರಂಭಿಸಿದ ಆಂ‍ಧ್ರ ಡಿಸಿಎಂ ಪವನ್‌ ಕಲ್ಯಾಣ