ಬೆಂಗಳೂರು : ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ವಿಟಮಿನ್‍ಗಳು ಅತ್ಯಗತ್ಯವಾಗಿಬೇಕು. ಈ ವಿಟಮಿನ್‍ಗಳ ಕೊರತೆಯಾದರೆ ದೇಹ ಅದನ್ನು ಕೆಲವೊಂದು ಸೂಚನೆಗಳ ಮೂಲಕ ನಮಗೆ ತಿಳಿಸುತ್ತದೆ. ಹಾಗಾಗಿ ಅದನ್ನು ನಾವು ಅರ್ಥ ಮಾಡಿಕೊಂಡು ದೇಹಕ್ಕೆ ಅಗತ್ಯವಿರುವ ವಿಟಮಿನ್‍ಗಳನ್ನು ನೀಡಬೇಕು. ದೇಹಕ್ಕೆ ಬೇಕಾದ ವಿಟಮಿನ್‍ಗಳಲ್ಲಿ ಬಯೋಟಿನ್ (Biotin Deficiency)ಕೂಡ ಒಂದು. ಇದನ್ನು ವಿಟಮಿನ್ ಎಚ್ ಅಥವಾ ಬಿ -7 ಎಂದೂ ಕರೆಯುತ್ತಾರೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಆರೋಗ್ಯಕರ ಕೂದಲು, ಚರ್ಮ ಮತ್ತು ಉಗುರುಗಳನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಯೋಟಿನ್ ಕೊರತೆಯು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಆ ಮೂಲಕ ನಿಮ್ಮ ದೇಹಕ್ಕೆ ಬಯೋಟಿನ್ ಕೊರತೆ ಇದೆ ಎಂಬುದನ್ನು ತಿಳಿದುಕೊಳ್ಳಿ.
ಕೂದಲು ತೆಳುವಾಗುವುದು:
ದೇಹದಲ್ಲಿ ಬಯೋಟಿನ್ ಕೊರತೆಯಾದರೆ ಕೂದಲು ಉದುರಲು ಅಥವಾ ತೆಳುವಾಗಲು ಶುರುವಾಗುತ್ತದೆ. ಯಾಕೆಂದರೆ ಕೂದಲಿನ ಕಿರುಚೀಲಗಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಯೋಟಿನ್ ಪ್ರಮುಖ ಪಾತ್ರ ವಹಿಸುವುದರಿಂದ, ನೀವು ಕೂದಲಿನ ಎಳೆಗಳು ಮತ್ತು ಅವುಗಳ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳಬಹುದು.
ದೇಹದ ಭಾಗಗಳ ಮೇಲೆ ದದ್ದುಗಳು ಮೂಡುತ್ತವೆ:
ನಿಮ್ಮ ಕಣ್ಣುಗಳು, ಮೂಗು ಅಥವಾ ಬಾಯಿಯ ಸುತ್ತಲಿನ ಚರ್ಮದಲ್ಲಿ ಕೆಂಪು ಸ್ಕೇಲ್ ಪ್ಯಾಚ್‍ಗಳು ಮೂಡಿದರೆ ಅದು ಬಯೋಟಿನ್ ಕೊರತೆಯ ಮತ್ತೊಂದು ಚಿಹ್ನೆಯಾಗಿದೆ. ಬಯೋಟಿನ್ ಕೊರತೆಯಿಂದ ದೇಹದ ಸೂಕ್ಷ್ಮ ಪ್ರದೇಶಗಳಲ್ಲಿ ಶುಷ್ಕತೆ ಮತ್ತು ಕಿರಿಕಿರಿಗೆ ಕಾರಣವಾಗಬಹುದು.
ಒಡೆಯುವ ಉಗುರುಗಳು:
ಬಯೋಟಿನ್ ಕೊರತೆಯು ಉಗುರುಗಳ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಉಗುರುಗಳನ್ನು ದುರ್ಬಲಗೊಳಿಸಿ ಒಡೆಯುವಂತೆ ಮಾಡುತ್ತದೆ. ಇದರಿಂದಾಗಿ ಉಗುರುಗಳು ಬಿರುಕು ಬಿಡುವುದು ಮತ್ತು ಸುಲಭವಾಗಿ ಸಿಪ್ಪೆ ಸುಲಿಯುತ್ತವೆ.
ಆಲಸ್ಯ:
ಇಡೀ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೂ ಕೂಡ ನಿಮಗೆ ಆಲಸ್ಯದ ಭಾವನೆ ಕಾಡಿದರೆ ಅದು ಬಯೋಟಿನ್ ಕೊರತೆಯಾಗಿದೆ. ಬಯೋಟಿನ್ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಬಯೋಟಿನ್ ಕೊರತೆಯಾದರೆ ಶಕ್ತಿಯ ಮಟ್ಟವು ಕಡಿಮೆಯಾಗಬಹುದು. ಇದರಿಂದ ನೀವು ಎಲ್ಲಾ ಸಮಯದಲ್ಲೂ ಆಲಸ್ಯವನ್ನು ಅನುಭವಿಸಬಹುದು.
ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ:
ತಜ್ಞರ ಪ್ರಕಾರ, ಬಯೋಟಿನ್ ಕೊರತೆಯು ದೇಹದ ಭಾಗಗಳಲ್ಲಿ ವಿಶೇಷವಾಗಿ ಕೈಗಳಲ್ಲಿ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವ ಸಮಸ್ಯೆಗೆ ಕಾರಣವಾಗಬಹುದು. ಏಕೆಂದರೆ ಬಯೋಟಿನ್ ದೇಹದಲ್ಲಿನ ಹಲವಾರು ನರಮಂಡಲಗಳು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದರ ಕೊರತೆಯಾದಾಗ ದೇಹದ ಭಾಗಗಳಲ್ಲಿ ಮರಗಟ್ಟುವಿಕೆಗೆ ಉಂಟಾಗಬಹುದು.
ಇದನ್ನೂ ಓದಿ: ಮಹಿಳೆಯರು ಬ್ರಾ ಧರಿಸದಿದ್ದರೆ ಏನಾಗುತ್ತದೆ? ಈ ಬಗ್ಗೆ ತಜ್ಞರು ಹೇಳುವುದೇನು?
ಹಾಗಾಗಿ ನಿಮ್ಮ ದೇಹದಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಬಯೋಟಿನ್ ಕೊರತೆಯಾಗಿದೆ ಎಂಬುದನ್ನು ತಿಳಿಯಿರಿ. ಹಾಗೇ ದೇಹಕ್ಕೆ ಬೇಕಾದ ಬಯೋಟಿನ್ ಅಂಶವನ್ನು ಪೂರೈಸಲು ಬಯೋಟಿನ್ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ. ಮಾಂಸಗಳು, ಬೇಯಿಸಿದ ಮೊಟ್ಟೆಗಳು, ಸಿಹಿ ಗೆಣಸು, ಸೋಯಾಬೀನ್, ಕಡಲೆಕಾಯಿ, ಅಣಬೆಗಳಲ್ಲಿ ಬಯೋಟಿನ್ ಸಮೃದ್ಧವಾಗಿದೆ. ಹಾಗಾಗಿ ಇವುಗಳನ್ನು ಪ್ರತಿದಿನ ಸೇವಿಸಿ ದೇಹದ ಆರೋಗ್ಯ ಕಾಪಾಡಿಕೊಳ್ಳಿ.