Friday, 22nd November 2024

Wedding Traditions: ಇಲ್ಲಿ ಮದುವೆಯಾದ ವಧು ಒಂದು ವಾರದವರೆಗೆ ನಗ್ನವಾಗಿರಬೇಕು!

Wedding Traditions

ಮದುವೆ ಒಂದು ಪವಿತ್ರವಾದ ಬಂಧನ. ಮದುವೆಯ(Wedding Traditions) ದಿನದ ಆಚರಣೆ ಒಂದೊಂದು ಕಡೆ ಒಂದೊಂದು ರೀತಿಯಾಗಿರುತ್ತದೆ. ಒಂದೊಂದು ಜಾತಿ, ಧರ್ಮದಲ್ಲೂ ಇದರ ಆಚರಣೆ, ಪದ್ಧತಿ, ನಿಯಮಗಳು ಭಿನ್ನವಾಗಿರುತ್ತವೆ. ಭಾರತದಲ್ಲಿ ವಿವಾಹ ಸಂಪ್ರದಾಯಗಳು ವಿವಿಧ ಸಮುದಾಯಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರಕಾರ ಅತ್ಯಂತ ಭಿನ್ನವಾಗಿವೆ. ಕೆಲವು ಸಮುದಾಯಗಳಲ್ಲಿ, ಮದುವೆಯ ನಂತರ ಬಟ್ಟೆಗಳನ್ನು ಹರಿದುಹಾಕಲಾಗುತ್ತದೆ. ಕೆಲವು ಸಮುದಾಯಗಳಲ್ಲಿ, ವಧು ಮತ್ತು ವರನನ್ನು ಕೋಣೆಯಲ್ಲಿ ಲಾಕ್ ಮಾಡಲಾಗುತ್ತದೆ.ಆದರೆ ಹಿಮಾಚಲ ಪ್ರದೇಶದಲ್ಲಿ ಹಳ್ಳಿಯೊಂದರಲ್ಲಿ ವಿಭಿನ್ನವಾದ ಆಚರಣೆಯೊಂದಿದೆಯಂತೆ. ಇದನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗುತ್ತದೆ. ಇಲ್ಲಿ ಮದುವೆಯಾದ ಮೇಲೆ ವಧು ಒಂದು ವಾರದವರೆಗೆ ನಗ್ನವಾಗಿರಬೇಕಂತೆ!

ಭಾರತದ ಅನೇಕ ಭಾಗಗಳಲ್ಲಿ, ವಿವಾಹವು ಒಂದು ಭವ್ಯವಾದ ಆಚರಣೆಯಾಗಿದೆ, ಎಲ್ಲಾ ಸಂಬಂಧಿಕರು ಒಟ್ಟಿಗೆ ಸೇರಿ ಈ ದಿನದಂದು ಸಂಭ್ರಮ ಪಡುತ್ತಾರೆ. ಆದರೆ ಅನೇಕ ಸ್ಥಳಗಳಲ್ಲಿ ನಡೆಯುವ ವಿವಾಹ ಸಂಪ್ರದಾಯಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಈ ಸಂಪ್ರದಾಯವನ್ನು ಭಾರತದಲ್ಲಿಯೇ ಅನುಸರಿಸಲಾಗುತ್ತಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಇಲ್ಲಿ ಒಂದು ಸಮುದಾಯದಲ್ಲಿ, ಇಡೀ ಕುಟುಂಬವು ಒಟ್ಟಿಗೆ ಕುಳಿತು ವರನ ಬಟ್ಟೆಗಳನ್ನು ಹರಿದು ಹಾಕಿದರೆ, ಮತ್ತೊಂದು ಸಮುದಾಯದಲ್ಲಿ ವಧು ಮದುವೆಯ ನಂತರ ಬಟ್ಟೆಗಳನ್ನು ಧರಿಸುವುದಿಲ್ಲ, ಮತ್ತು ಮತ್ತೊಂದು ಸ್ಥಳದಲ್ಲಿ ವಧು ಮತ್ತು ವರರ ಮೇಲೆ ಟೊಮೆಟೊಗಳನ್ನು ಎಸೆಯುವ ಮೂಲಕ ಸ್ವಾಗತಿಸುವ ವಿಚಿತ್ರ ಸಂಪ್ರದಾಯವಿದೆ.

ಅಂತೆಯೇ, ಭಾರತದ ಈ ಹಳ್ಳಿಯ ಸಮುದಾಯದಲ್ಲಿ, ವಧು ಮದುವೆಯಾದ ನಂತರ ಒಂದು ವಾರದವರೆಗೆ ಬಟ್ಟೆಗಳನ್ನು ಧರಿಸುವುದಿಲ್ಲ, ಇದು ಮಾತ್ರವಲ್ಲ, ಈ ಸಮಯದಲ್ಲಿ ಗಂಡ ಮತ್ತು ಹೆಂಡತಿ ಪರಸ್ಪರ ಮಾತನಾಡುವುದು ಕೂಡ ಇಲ್ಲವಂತೆ. ಇಬ್ಬರನ್ನೂ ಪರಸ್ಪರ ದೂರವಿರಿಸಲಾಗುತ್ತದೆಯಂತೆ.

ಈ ವಿಚಿತ್ರ ಸಂಪ್ರದಾಯವು ಹಿಮಾಚಲ ಪ್ರದೇಶದ ಮಣಿಕರಣ್ ಕಣಿವೆಯಲ್ಲಿರುವ ಪಿನಿ ಗ್ರಾಮದಲ್ಲಿದೆ. ಮದುವೆಯ ನಂತರ, ವಧು ಇಲ್ಲಿ ಒಂದು ವಾರದವರೆಗೆ ಸಂಪೂರ್ಣವಾಗಿ ನಗ್ನವಾಗಿರಬೇಕು. ಆದರೆ ಈ ಸಮಯದಲ್ಲಿ, ಆಕೆಗೆ ಮುಟ್ಟಾದರೆ ಅವಳು ಉಣ್ಣೆಯಿಂದ ಮಾಡಿದ ಬೆಲ್ಟ್ ಅನ್ನು ಮಾತ್ರ ಧರಿಸಬಹುದಂತೆ.

ಇದನ್ನೂ ಓದಿ: ತೆಂಗಿನೆಣ್ಣೆಯನ್ನು ಮುಖಕ್ಕೆ ಹಚ್ಚುತ್ತಿದ್ದಿರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ!

ಇದು ಪಿನಿ ಗ್ರಾಮದ ಕೆಲವು ಸಮುದಾಯಗಳ ಮಹಿಳೆಯರ ಸಂಪ್ರದಾಯವನ್ನು ಹೋಲುತ್ತದೆಯಂತೆ. ಅವರು ಶ್ರಾವಣ ತಿಂಗಳ ಐದು ದಿನಗಳವರೆಗೆ ಸಂಪೂರ್ಣ ನಗ್ನರಾಗಿರುತ್ತಾರೆಯಂತೆ. ಇಲ್ಲಿ ಮಹಿಳೆಯರು ಶ್ರಾವಣ ತಿಂಗಳಲ್ಲಿ ಬಟ್ಟೆಗಳನ್ನು ಧರಿಸುವುದಿಲ್ಲ. ಇನ್ನು ಪುರುಷರಿಗೂ ಕೆಲವು ನಿಯಮಗಳಿವೆ, ಈ ಐದು ದಿನಗಳಲ್ಲಿ ಪುರುಷರು ಯಾವುದೇ ಮಾದಕವಸ್ತುಗಳನ್ನು ಸೇವಿಸಬಾರದು ಅಥವಾ ಮಾಂಸವನ್ನು ತಿನ್ನಬಾರದು, ಪುರುಷರು ಮತ್ತು ಮಹಿಳೆಯರು ಇಬ್ಬರೂ ಈ ಸಂಪ್ರದಾಯವನ್ನು ಅನುಸರಿಸಿದರೆ ಅದು ಅವರಿಗೆ ಒಳ್ಳೆಯದು ಎಂದು ಇಲ್ಲಿನ ಜನರು ನಂಬುತ್ತಾರೆ.