ಬೆಂಗಳೂರು: ಸೋಶಿಯಲ್ ಮೀಡಿಯಾಗಳಲ್ಲಿ ಹಲವಾರು ವಿಡಿಯೊಗಳು ಪೋಸ್ಟ್ ಆಗುತ್ತಿರುತ್ತದೆ. ಅದರಲ್ಲಿ ಹೆಚ್ಚು ಗಮನ ಸೆಳೆಯುವುದು ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೊಗಳು. ಇದರಲ್ಲಿ ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳ ಜೊತೆ ಮನುಷ್ಯರ ಒಡನಾಟವನ್ನು ತೋರಿಸುವಂತಹ ಸಾಕಷ್ಟು ವಿಡಿಯೊಗಳು ಆಗಾಗ ಅಪ್ಲೋಡ್ ಆಗುತ್ತಿರುತ್ತದೆ. ಅದರಲ್ಲಿ ಕೆಲವು ವಿಡಿಯೊಗಳು ವೀಕ್ಷಕರಿಗೆ ಮನೋರಂಜನೆಯನ್ನು ನೀಡಿದರೆ, ಕೆಲವೊಂದು ಆಶ್ಚರ್ಯ, ಆಘಾತವನ್ನು ಉಂಟುಮಾಡುತ್ತವೆ. ಅಂತಹದೊಂದು ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral Video)ಆಗಿದೆ. ಇದರಲ್ಲಿ ವಯಸ್ಸಾದ ಮಹಿಳೆ ಮತ್ತು ಕೋತಿಯನ್ನು ಯನ್ನು ತೋರಿಸಲಾಗಿದೆ. ಮಹಿಳೆ ಕೋತಿಯನ್ನು ಮುದ್ದಿಸುತ್ತಿರುವಾಗ ಅದು ಏಕಾಏಕಿ ಅವಳ ಮೇಲೆ ದಾಳಿ ಮಾಡಿದೆ.ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.
ಈ ವಿಡಿಯೊವನ್ನು ‘ಪೇಜ್ ಪೋಸ್ಟಿಂಗ್ ಅನಿಮಲ್ ಅಟ್ಯಾಕ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಈ ವೈರಲ್ ವಿಡಿಯೊದಲ್ಲಿ, ವೃದ್ಧ ಮಹಿಳೆ ಕೋತಿಯನ್ನು ಎತ್ತಿಕೊಂಡು ಅದನ್ನು ಮುದ್ದು ಮಾಡಿದ್ದಾಳೆ. ವಿಡಿಯೊದಲ್ಲಿ ಕಂಡುಬಂದಂತೆ ಅದು ಆಕೆಯನ್ನು ತಬ್ಬಿಕೊಂಡು ಮುದ್ದಾಡಿದೆ. ಇದನ್ನು ನೋಡಿದವರಿಗೆ ಮಹಿಳೆ ಮತ್ತು ಕೋತಿಯ ನಡುವಿನ ಬಾಂಧವ್ಯವನ್ನು ಕಂಡು ಖುಷಿಯಾಗುವುದಂತು ಖಂಡಿತ. ಆದರೆ ಕ್ಷಣ ಮಾತ್ರದಲ್ಲಿ ಎಲ್ಲವೂ ಬದಲಾಗಿದೆ. ಅಲ್ಲಿತನಕ ಸುಮ್ಮನೆ ಇದ್ದ ಕೋತಿ ಇದ್ದಕ್ಕಿದ್ದಂತೆ ಮಹಿಳೆಯ ಮುಖದ ಮೇಲೆ ದಾಳಿ ಮಾಡಿದಾಗ ಇದು ಎಲ್ಲರಿಗೂ ಆಘಾತವನ್ನು ಉಂಟುಮಾಡಿದೆ.
ಮಹಿಳೆ ನೋವಿನಿಂದ ಮುಖವನ್ನು ಮುಚ್ಚಿಕೊಂಡಿದ್ದಾಳೆ. ಆಗ ಕೋತಿ ಅಲ್ಲಿಂದ ಓಡಿ ಹೋಗಿದೆ. ಈ ಇಡೀ ದೃಶ್ಯವನ್ನು ಹತ್ತಿರದಲ್ಲಿದ್ದ ಯಾರೋ ರೆಕಾರ್ಡ್ ಮಾಡಿದ್ದಾರೆ. ಈ ಅನಿರೀಕ್ಷಿತ ತಿರುವು ಸೋಶಿಯಲ್ ಮೀಡಿಯಾದ ಜನರನ್ನು ಬೆಚ್ಚಿ ಬೀಳಿಸಿದೆ. ಹಾಗಾಗಿ ಕಾಮೆಂಟ್ ಮೂಲಕ ತಮ್ಮ ಆತಂಕವನ್ನು ಹೊರಹಾಕಿದ್ದಾರೆ. ಇದು ಕಾಡು ಪ್ರಾಣಿಗಳೊಂದಿಗಿನ ವ್ಯವಹರಿಸುವಾಗ ಮನುಷ್ಯರು ಎಚ್ಚರದಿಂದಿರಬೇಕು ಎಂಬ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ:ಇಲ್ಲಿ ಮದುವೆಯಾದ ವಧು ಒಂದು ವಾರದವರೆಗೆ ನಗ್ನವಾಗಿರಬೇಕು!
ಒಬ್ಬ ನೆಟ್ಟಿಗರು ಹತಾಶೆಯನ್ನು ವ್ಯಕ್ತಪಡಿಸಿ, “ನೀವು ಕಾಡು ಪ್ರಾಣಿಯನ್ನು ಏಕೆ ಚುಂಬಿಸುತ್ತೀರಿ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಕೋತಿಗಳು ನಿಮ್ಮ ಮುಖಕ್ಕೆ ಹಾನಿಮಾಡಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ. ಇತರರು ಕೋತಿಯ ನಡವಳಿಕೆಯನ್ನು ಟೀಕಿಸಿದ್ದಾರೆ. ಇನ್ನೊಬ್ಬರು “ಪ್ರಾಣಿಗಳನ್ನು ಪ್ರಾಣಿಗಳಂತೆ ಪರಿಗಣಿಸಬೇಕು. ಯಾಕೆಂದರೆ ಇದು ಸಾಕುಪ್ರಾಣಿ ಅಲ್ಲ.” ಎಂದು ತಿಳಿಸಿದ್ದಾರೆ. ಕಾಡು ಪ್ರಾಣಿಗಳು, ಎಷ್ಟೇ ಸ್ನೇಹಪರವಾಗಿ ಕಂಡರೂ, ಅವು ಎಂದಿಗೂ ಅಪಾಯಕಾರಿ ಎಂಬುದನ್ನು ಈ ವಿಡಿಯೊ ವೀಕ್ಷಕರಿಗೆ ತಿಳಿಸುತ್ತದೆ.