Wednesday, 25th September 2024

Viral Video: ಹೈ ವೋಲ್ಟೇಜ್ ತಂತಿಯಲ್ಲಿ ಮರಿ ಟ್ರ್ಯಾಪ್‌; ತಾಯಿ ಕೋತಿ ಮಾಡಿದ್ದೇನು ಗೊತ್ತಾ? ಈ ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ!

Viral Video


ಬೆಂಗಳೂರು : ತಾಯಿಯನ್ನು ಕಣ್ಣಿಗೆ ಕಾಣುವ ದೇವರೆಂದೆ ಕರೆಯುತ್ತಾರೆ. ಯಾಕೆಂದರೆ ದೇವರು ಮರೆಯಲ್ಲಿ ನಿಂತು ನಮ್ಮನ್ನು ಸಂಕಷ್ಟದಿಂದ ಕಾಪಾಡಿದರೆ ತಾಯಿ ನಮ್ಮ ಎದುರಿಗೆ ನಿಂತು ನಮ್ಮನ್ನು ಕಾಪಾಡುವಂತಹ ದೇವತೆಯಾಗಿದ್ದಾಳೆ. ತನ್ನ ಜೀವಕ್ಕೆ ಆಪತ್ತಿದ್ದರೂ ಕೂಡ ಅದನ್ನು ಲೆಕ್ಕಿಸದೆ ತನ್ನ ಮಗುವಿನ ಪ್ರಾಣ ಉಳಿಸಲು ತನ್ನ ಜೀವದ ಹಂಗನ್ನು ತೊರೆದು ಹೋರಾಡುತ್ತಾಳೆ. ಈ ಗುಣ ಬರೀ ಮನುಷ್ಯರಲ್ಲಿ ಮಾತ್ರ ಕಂಡುಬರುವುದಿಲ್ಲ. ಪ್ರಾಣಿಗಳು ಕೂಡ ತಮ್ಮ ಮರಿಗಳನ್ನು ಕಾಪಾಡಲು ಜೀವದ ಹಂಗು ತೊರೆದು ಹೋರಾಡುತ್ತವೆ. ಅವುಗಳನ್ನು ಸಂಕಷ್ಟದಿಂದ ಕಾಪಾಡುತ್ತವೆ. ಇದಕ್ಕೆ ನಿರ್ದಶನ ಎಂಬಂತೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿರುವ ಕೋತಿ ಮತ್ತು ಅದರ ಮರಿಯ ವಿಡಿಯೊ. ತನ್ನ ಪ್ರಾಣವನ್ನ ಲೆಕ್ಕಿಸದೆ ತಾಯಿ ಕೋತಿ ಹೈ ವೋಲ್ಟೇಜ್ ತಂತಿಯಲ್ಲಿ ಅಪಾಯದಲ್ಲಿ ಸಿಲುಕಿದ ತನ್ನ ಮರಿಯನ್ನು ಬುದ್ಧಿವಂತಿಕೆ ಯೋಚನೆಯ ಮೂಲಕ ಕಾಪಾಡಿದೆ. ಇದು ಅನೇಕ ವೀಕ್ಷಕರ ಮನಗೆದ್ದಿದೆ.

ಕೋತಿಗಳು ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿವೆ, ಆದರೆ ಅಪಾಯದಲ್ಲಿ ಸಿಲುಕಿದಾಗ, ತ್ವರಿತ ಚಿಂತನೆಯಿಂದ ಎಂತಹ ಕಠಿಣ ಸಂದರ್ಭವನ್ನು ಜಯಿಸಿ ಬರುತ್ತವೆ. ಈ ವೈರಲ್ ವಿಡಿಯೊದಲ್ಲಿ ತಾಯಿ ಕೋತಿ ತನ್ನ ಮರಿಗಾಗಿ ಭಯವಿಲ್ಲದೆ ಭಯಾನಕ ಕ್ಷಣವನ್ನು ಎದುರಿಸುತ್ತಿರುವುದನ್ನು ಕಾಣಬಹುದು.

ಭಯಗೊಂಡ ಮರಿಯು ಅಲುಗಾಡುತ್ತಿರುವ ತಂತಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಆಗದೆ ಹೆಣಗಾಡುತ್ತಿದ್ದಾಗ, ಆತಂಕಗೊಂಡ ತಾಯಿ ತನ್ನ ಮರಿಯನ್ನು ಉಳಿಸಲು ಹತಾಶಳಾಗಿ ದಿಕ್ಕು ತೋಚದೇ ನೋಡುತ್ತಾ ಕುಳಿತಿದೆ. ಆದರೆ ಧೈರ್ಯಗೆಡದ ಕೋತಿಯು ಅಪಾಯವನ್ನು ಮನಗೊಂಡು ಬೇಗನೆ ಒಂದು ಪ್ಲ್ಯಾನ್ ಮಾಡಿ ಸರಿಯಾದ ಸಮಯದಲ್ಲಿ ಅದು ಒಂದೇ ನೆಗೆತಕ್ಕೆ ತಂತಿಯ ಮೇಲೆ ಹಾರಿ ತನ್ನ ಮರಿಯನ್ನು ಹಿಡಿದುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿದೆ.

ಇದನ್ನೂ ಓದಿ: ಸ್ವಿಮ್ ಸೂಟ್‌ನಲ್ಲಿ ಸಖತ್‌ ಹಾಟ್ ಆಗಿ ಕಾಣಿಸಿಕೊಂಡ ನಟಿ ರಾಗಿಣಿ ದ್ವಿವೇದಿ

ಈ ಕ್ಷಣವನ್ನು ವೀಕ್ಷಿಸುತ್ತಿದ್ದ ಜನರು ತಾಯಿ ಕೋತಿಯ ಧೈರ್ಯ ಮತ್ತು ತ್ವರಿತ ಕ್ರಮಗಳನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಇದು ಹತಾಶೆಯ ಪರಿಸ್ಥಿತಿಯಲ್ಲಿಯೂ ಜೀವವನ್ನು ಉಳಿಸಿಕೊಂಡ ಅದ್ಭುತ ಕ್ಷಣವಾಗಿ ಕಂಡುಬಂದಿದೆ. ಈ ವಿಡಿಯೊವನ್ನು ನೋಡಿದಾಗ ಪ್ರಾಣಿಗಳಲ್ಲಿಯೂ ತಾಯಿ ಮತ್ತು ಮರಿಗಳ ನಡುವೆ ಬಿಡಿಸಲಾಗದ ಬಂಧವಿದೆ ಎಂಬುದನ್ನು ತಿಳಿಸುತ್ತದೆ.