Friday, 15th November 2024

ESAF: ವಾಣಿಜ್ಯ ವಾಹನ ಹಣಕಾಸು ಸೌಲಭ್ಯ ಒದಗಿಸಲು ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಮೋಟಾರ್ಸ್

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನ ಖರೀದಿಸುವ ಗ್ರಾಹಕರಿಗೆ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಆರಂಭಿಕ ಹಂತದಲ್ಲಿ ಸಣ್ಣ ವಾಣಿಜ್ಯ ವಾಹನಗಳು (ಎಸ್ ಸಿ ವಿಗಳು) ಮತ್ತು ಲಘು ವಾಣಿಜ್ಯ ವಾಹನಗಳ (ಎಲ್ ಸಿ ವಿಗಳು) ಮೇಲೆ ಗಮನ ಕೇಂದ್ರೀಕರಿಸ ಲಾಗುತ್ತಿದ್ದು, ಮುಂದಿನ ಹಂತದಲ್ಲಿ ಟಾಟಾ ಮೋಟಾರ್ಸ್‌ನ ಸಂಪೂರ್ಣ ವಾಣಿಜ್ಯ ವಾಹನ ಉತ್ಪನ್ನಗಳಿಗೆ ಹಣಕಾಸು ಸೌಲಭ್ಯ ಒದಗಿಸುವಂತೆ ವ್ಯವಸ್ಥೆ ಮಾಡಲಾಗುವುದು.

ಈ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್‌ ನ ಎಸ್‌ಸಿವಿ ಮತ್ತು ಪಿಯು ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ ವಿನಯ್ ಪಾಠಕ್ ಅವರು, “ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಜೊತೆಗಿನ ನಮ್ಮ ಪಾಲುದಾರಿಕೆಯು ದೇಶದ ವಿವಿಧ ಹಿನ್ನೆಲೆಯ ನಮ್ಮ ಗ್ರಾಹಕರಿಗೆ ಸುಲಭವಾಗಿ ಹಣಕಾಸು ಸೌಲಭ್ಯವನ್ನು ಒದಗಿಸುವಂತೆ ಮಾಡುತ್ತದೆ. ನಮ್ಮ ಗ್ರಾಹಕರಿಗೆ ಸೂಕ್ತವಾದ ಮತ್ತು ಸಮರ್ಥ ಉತ್ಪನ್ನಗಳನ್ನು ಒದಗಿಸಿ ನೆರವಾಗುವ ನಮ್ಮ ಬದ್ಧತೆಗೆ ಈ ವ್ಯವಸ್ಥೆಯು ಒಂದು ಪುರಾವೆಯಾಗಿದೆ. ಈ ಹಣಕಾಸು ಸೌಲಭ್ಯವು ಗ್ರಾಹಕರಿಗೆ ಅವರ ವ್ಯಾಪಾರದ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಈ ಸಹಯೋಗವು ಲಾಜಿಸ್ಟಿಕ್ ವಿಭಾಗದಲ್ಲಿ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.

ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿರುವ ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ಹೇಮಂತ್ ಕುಮಾರ್ ತಮ್ತಾ ಅವರು, “ಟಾಟಾ ಮೋಟಾರ್ಸ್ ಜೊತೆ ನಾವು ಸಂತೋಷದಿಂದ ಪಾಲುದಾರಿಕೆ ಮಾಡಿಕೊಂಡಿದ್ದೇವೆ. ಈ ಮೂಲಕ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಸೂಕ್ತವಾದ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತೇವೆ. ಉದ್ಯಮಿಗಳನ್ನು ಸಬಲೀಕರಣಗೊಳಿಸುವ ನಮ್ಮ ಉದ್ದೇಶದ ಜೊತೆ ಈ ಪಾಲುದಾರಿಕೆಯು ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ನಮ್ಮ ವ್ಯಾಪಕವಾದ ನೆಟ್‌ವರ್ಕ್ ಮತ್ತು ಹಣಕಾಸು ಕ್ಷೇತ್ರದ ಪರಿಣತಿಯ ಮೂಲಕ ಈ ಪಾಲುದಾರಿಕೆಯು ಗ್ರಾಹಕರ ಅಭಿವೃದ್ಧಿ ಉಂಟು ಮಾಡಲಿದೆ ಮತ್ತು ವಾಣಿಜ್ಯ ವಾಹನ ವ್ಯವಹಾರ ವಿಭಾಗದಲ್ಲಿ ಬೆಳವಣಿಗೆ ಸಾಧಿಸಲು ನೆರವಾಗುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.

ಲಾಜಿಸ್ಟಿಕ್ಸ್ ಮತ್ತು ಸಮೂಹ ಸಾರಿಗೆಯ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್‌ಗಳು, ಟ್ರಕ್‌ ಗಳು ಮತ್ತು ಬಸ್‌ಗಳ ವಿಭಾಗಗಳಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು 1-ಟನ್‌ನಿಂದ ಹಿಡಿದು 55-ಟನ್ ಗಳವರೆಗಿನ ಸರಕು ಸಾಗಾಣಿಕಾ ವಾಹನಗಳು ಮತ್ತು 10-ಆಸನಗಳಿಂದ ಹಿಡಿದು 51-ಆಸನಗಳ ವರೆಗಿನ ಸಮೂಹ ಸಾರಿಗೆ ಉತ್ಪನ್ನಗಳನ್ನು ಒದಗಿಸುತ್ತದೆ.

ಕಂಪನಿಯು ತನ್ನ 2500ಕ್ಕೂ ಹೆಚ್ಚು ಟಚ್‌ ಪಾಯಿಂಟ್‌ ಗಳ ದೊಡ್ಡ ನೆಟ್‌ವರ್ಕ್ ಮೂಲಕ ಅತ್ಯುತ್ತಮ ಗುಣ ಮಟ್ಟದ ಸರ್ವೀಸ್ ಅನ್ನು ಒದಗಿಸುತ್ತದೆ. ಈ ಟಚ್ ಪಾಯಿಂಟ್ ಗಳು ತರಬೇತಿ ಪಡೆದ ನುರಿತ ತಂತ್ರಜ್ಞರಿಂದ ನಿರ್ವಹಿಸಲ್ಪಡುತ್ತದೆ ಮತ್ತು ಇಲ್ಲಿ ಟಾಟಾದ ಅಸಲಿ ಭಾಗಗಳು ಸುಲಭವಾಗಿ ದೊರೆಯುತ್ತವೆ.