Friday, 15th November 2024

Sex Racket: ಚಲಿಸುತ್ತಿದ್ದ ಕಾರಿನಲ್ಲಿ ನಗ್ನವಾಗಿದ್ದ ಮಹಿಳೆ, 6 ಮಂದಿ ಪುರುಷರ ಬಂಧನ!

Sexual Abuse

ಉತ್ತರ ಪ್ರದೇಶದಲ್ಲಿ ದಿನೇ ದಿನೇ ಲೈಂಗಿಕ ಕಿರುಕುಳ, ಲೈಂಗಿಕ ದಂಧೆ (Sex Racket) ಪ್ರಕರಣಗಳು ಹೆಚ್ಚು ಕೇಳಿಬರುತ್ತಿವೆ. ಇದೀಗ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಚಲಿಸುತ್ತಿರುವ ಕಾರಿನೊಳಗೆ ಆರು ಪುರುಷರು ಮತ್ತು ಒಬ್ಬ ಮಹಿಳೆ ನಗ್ನವಾಗಿ ಪತ್ತೆಯಾಗಿದ್ದಾರೆ. ಲೈಂಗಿಕ ದಂಧೆ ನಡೆಸುವ ಮೂಲಕ ಅಕ್ರಮ ಚಟುವಟಿಕೆಗಳಲ್ಲಿ ಇವರು ತೊಡಗಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಎಲ್ಲಾ ಏಳು ಮಂದಿಯನ್ನು ಬಂಧಿಸಲಾಗಿದೆ, ವಿಶೇಷವಾಗಿ ಇದರಲ್ಲಿ ಬ್ಯಾಂಕ್ ಉದ್ಯೋಗಿ ಸೇರಿದಂತೆ, ಎಲ್ಲರ ಮೇಲೂ ಸೆಕ್ಸ್ ರಾಕೆಟ್ ಕಾರ್ಯಾಚರಣೆಗೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ ಕಠಿಣ ಕಾನೂನು ಜಾರಿ ಮಾಡಲಾಗುವುದು ಎಂಬುದನ್ನು ಜನಸಾಮಾನ್ಯರಿಗೆ ಈ ಘಟನೆಯಿಂದ ತಿಳಿಸಲಾಗಿದೆ.

ಸೋಮವಾರ, ದಾರಿಹೋಕರೊಬ್ಬರು ನಡೆದು ಹೋಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಕಾರನ್ನು ತನಿಖೆ ಮಾಡಿದಾಗ, ಆರು ಪುರುಷರು ಮತ್ತು ಒಬ್ಬ ಮಹಿಳೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗವಾಗಿದೆ. ತನಿಖೆಯಿಂದ ದಂಧೆಯ ಬಗ್ಗೆ ಸಂಪೂರ್ಣ ವಿವರ ತಿಳಿದುಬಂದ ಹಿನ್ನೆಲೆಯಲ್ಲಿ ಇದರಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗಿದೆ.

ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಮಾಸ್ಟರ್ ಮೈಂಡ್‍ಗಳು ನಿಶಾ ಎಂಬ ಮಹಿಳೆಯನ್ನು ಆಕೆಯ ಕೆಲಸಕ್ಕಾಗಿ ದಿನಕ್ಕೆ 6,000 ರೂ.ಗಳನ್ನು ನೀಡುವುದಾಗಿ ಭರವಸೆ ಮೂಡಿಸಿ ಆಮಿಷವೊಡ್ಡಿದ್ದರು.

ಸ್ಥಳೀಯ ಶಾಖೆಯ ಬ್ಯಾಂಕ್ ಆಫ್ ಬರೋಡಾ ಕ್ಯಾಷಿಯರ್ ಸತೀಶ್ ಕುಮಾರ್ ಸೇರಿದಂತೆ ಕೆಲವು ಆರೋಪಿಗಳು ಈ ಅಕ್ರಮ ದಂಧೆಯ ಬಗ್ಗೆ ಪ್ಲ್ಯಾನ್ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಪ್ರಾಣ ಉಳಿಸಿಕೊಳ್ಳಲು ವಿಲವಿಲ ಒದ್ದಾಡುತ್ತಿದ್ದ ಹಸು;‌ ದೇವರಂತೆ ಬಂದು ಕಾಪಾಡಿದ ಬೈಕ್ ಸವಾರರು; ವಿಡಿಯೊ ಫುಲ್ ವೈರಲ್

ಈ ವ್ಯಕ್ತಿಗಳು ಹಣದ ಲಾಭದ ಸುಳ್ಳು ಭರವಸೆಗಳನ್ನು ನೀಡುತ್ತಾ ನಿಶಾ ಮತ್ತು ಇತರರನ್ನು ಈ ರೀತಿ ಶೋಷಣೆಗೆ ಒಳಪಡಿಸಿದ್ದಾರೆ. ಆದರೆ ಈಗ ಅವರ ಪ್ಲ್ಯಾನ್ ಬಯಲಾಗಿದ್ದು, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ. ಅಜಂಗಢದ ಮಹುವಾದ ಬ್ಯಾಂಕ್ ಆಫ್ ಬರೋಡಾ ಉದ್ಯೋಗಿ ಸತೀಶ್ ಕುಮಾರ್, ಅಲಾಪುರದ ಅಮಾ ದರ್ವೇಶ್ಪುರದ ಶಿವಂ ಯಾದವ್, ನಾಸಿರ್ಪುರದ ಅಮೃತ್ ಲಾಲ್, ಪವನ್, ಕಟ್ಕಾದ ಬಾನ್ಪುರ್ವಾದ ಮುಖೇಶ್ ಯಾದವ್, ರಿತಿಕ್ ಮತ್ತು ಈ ದಂಧೆಯಲ್ಲಿ ಭಾಗಿಯಾಗಿದ್ದ ಮಹಿಳೆ ನಿಶಾ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ಎಲ್ಲರನ್ನೂ ಜೈಲಿಗೆ ಕಳುಹಿಸಲಾಗಿದೆ.