ಬೆಂಗಳೂರು: ಆನ್ಲೈನ್ ಶಾಪಿಂಗ್ ಪ್ರಿಯರು ಬಹು ಸಮಯಗಳಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್ (Amazon) ಮತ್ತು ಫ್ಲಿಪ್ಕಾರ್ಟ್ (Flipkart) ವಾರ್ಷಿಕ ದರ ಕಡಿತ ಮಾರಾಟ ದಿನಾಂಕವನ್ನು ಘೋಷಿಸಿವೆ (Festival Sale). ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮತ್ತು ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಲಿದೆ. ಅದಾಗ್ಯೂ ಎರಡೂ ಅಪ್ಲಿಕೇಷನ್ನ ಪೈಡ್ ಸಬ್ಸ್ಕ್ರೈಬರ್ಸ್ (Paid subscribers)ಗೆ ಈ ಕೊಡುಗೆ ನಾಳೆಯಿಂದಲೇ (ಸೆಪ್ಟೆಂಬರ್ 26) ಸಿಗಲಿದೆ.
ಈ ವಾರ್ಷಿಕ ಮಾರಾಟ ಮೇಳದಲ್ಲಿ ಎರಡೂ ಕಂಪನಿಗಳು ಸ್ಮಾರ್ಟ್ಫೋನ್ ಸಹಿತ ಹಲವು ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಿವೆ. ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ಹೆಚ್ಚುವರಿ ರಿಯಾಯಿತಿಯೂ ಇದೆ.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್
ಅಮೆಜಾನ್ ಪ್ರೈಮ್ ಸದಸ್ಯರಿಗೆ ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದಲೇ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನ ಕೊಡುಗೆಗಳು ದೊರೆಯಲಿವೆ. ಉಳಿದ ಬಳಕೆದಾರರಿಗೆ ಈ ಕೊಡುಗೆ ಸೆಪ್ಟೆಂಬರ್ 27ರಂದು ಆರಂಭವಾಗಲಿದೆ. ಈ ಸೇಲ್ನಲ್ಲಿ ಎಸ್ಬಿಐ ಕಾರ್ಡ್ ಹೊಂದಿದವರು ಎಲ್ಲ ಖರೀದಿಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಲಿದ್ದಾರೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಸ್ಮಾರ್ಟ್ ಫೋನ್ ಖರೀದಿಗೆ ಅತ್ಯುತ್ತಮ ಕೊಡುಗೆ ಸಿಗಲಿದೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಕೂಡ ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಲಿದೆ. ಅದಾಗ್ಯೂ ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯರಿಗೆ ಸೆಪ್ಟೆಂಬರ್ 26ರಂದೇ ಅಂದರೆ ಒಂದು ದಿನ ಮುಂಚಿತವಾಗಿ ಈ ಕೊಡುಗೆ ದೊರೆಯಲಿದೆ. ಫ್ಲಿಪ್ಕಾರ್ಟ್ ಜತೆಗೆ ಎಚ್ಡಿಎಫ್ಸಿ ಬ್ಯಾಂಕ್ ಕೂಡ ಕೈಜೋಡಿಸಿದೆ. ಹೀಗಾಗಿ ಎಚ್ಡಿಎಫ್ಸಿ ಡೆಬಿಟ್ / ಕ್ರೆಡಿಟ್ ಕಾರ್ಡ್ ಹೊಂದಿದವರು ಹೆಚ್ಚುವರಿಯಾಗಿ ಶೇ. 10ರಷ್ಟು ರಿಯಾಯಿತಿ ಪಡೆದುಕೊಳ್ಳಲಿದ್ದು, ಸುಲಭ ಇಎಂಐ ವಹಿವಾಟುಗಳ ಸೌಲಭ್ಯವೂ ದೊರೆಯಲಿದೆ.
ಫ್ಲಿಪ್ಕಾರ್ಟ್ನಲ್ಲಿ ಹಲವು ಸ್ಮಾರ್ಟ್ಫೋನ್ಗಳು ಅತಿ ಕಡಿಮೆ ದರದಲ್ಲಿ ಸಿಗಲಿವೆ. ಉದಾಹರಣೆಗೆ 75,999 ರೂ. ಬೆಲೆಯ ಗೂಗಲ್ ಪಿಕ್ಸೆಲ್ 8 (Google Pixel 8) ಫೋನ್ 40,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 (Samsung Galaxy S23) ಫೋನ್ 89,999 ರೂ. ಬೆಲೆ ಹೊಂದಿದ್ದು, 40,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಆದಾಗ್ಯೂ ನಿಖರ ಬೆಲೆಗಳನ್ನು ಇನ್ನೂ ಬಹಿರಂಗಗೊಂಡಿಲ್ಲ.
ಅಲ್ಲದೆ 79,999 ರೂ.ಗೆ ಮಾರಾಟವಾಗುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಎಫ್ಇ (Samsung Galaxy S23 FE)ಯ ಮೂಲ ಮಾದರಿ 30,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಪರ್ಫಾಮೆನ್ಸ್ ಆಧಾರಿತ ಪೋಕೋ ಎಕ್ಸ್ 6 ಪ್ರೊ 5ಜಿ (Poco X6 Pro 5G) ಕೂಡ 20,000 ರೂ.ಗಿಂತ ಕಡಿಮೆ ಬೆಲೆಯನ್ನು ಲಭಿಸುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: PM Vishwakarma Scheme: ಪಿಎಂ ವಿಶ್ವಕರ್ಮ ಯೋಜನೆಗೆ ಯಾರು ಅರ್ಹರು, ಇದರಿಂದೇನು ಪ್ರಯೋಜನ? ಅರ್ಜಿ ಸಲ್ಲಿಕೆ ಹೇಗೆ?