Saturday, 23rd November 2024

Tumkur News: ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರಿದ್ದಾರೆ: ಶಾಸಕ ಬಿ. ಸುರೇಶ್‌ಗೌಡ

Tumkur News

ತುಮಕೂರು: ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರು ಇರುತ್ತಾರೆ. ಈ ಶಾಲೆಗಳಲ್ಲಿ ಓದಿದವರೇ ಜೀವನದಲ್ಲಿ ದೊಡ್ಡ ಹುದ್ದೆಗಳಿಗೆ ಹೋಗಿ ತಲುಪಿದ್ದಾರೆ. ನಾನು ಕೂಡ ಇಂತಹ ಸರ್ಕಾರಿ ಶಾಲೆಯಲ್ಲಿಯೇ ಓದಿ ಸಾರ್ವಜನಿಕ ಜೀವನಕ್ಕೆ ಬಂದೆ ಎಂದು ಶಾಸಕ ಬಿ. ಸುರೇಶ್‌ ಗೌಡ ಪ್ರಶಂಸಿಸಿದರು. ತಾಲೂಕಿನ (Tumkur News) ನಾಗವಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿ, ಬಳಿಕ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Job Guide: GTTCಯಲ್ಲಿದೆ ಉದ್ಯೋಗಾವಕಾಶ; ಡಿಪ್ಲೊಮಾ ಪಾಸಾದವರು ಅರ್ಜಿ ಸಲ್ಲಿಸಿ

ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದ ವತಿಯಿಂದ ಸಮವಸ್ತ್ರ, ಶೂ, ಮಧ್ಯಾಹ್ನದ ಊಟ ಮಾತ್ರವಲ್ಲದೇ ಇದೀಗ ಮೊಟ್ಟೆಯಂತಹ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮ ಆರಂಭವಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಲು ದಾನ ಮಾಡಿದ ಅಜೀಂ ಪ್ರೇಮ್‌ಜಿ ಅವರ ಕೊಡುಗೈ ಗುಣವನ್ನು ಅವರು ಶ್ಲಾಘಿಸಿದರು ಎಲ್ಲ ಶ್ರೀಮಂತರು, ಉದ್ಯಮಿಗಳು ಹೀಗೆ ಸರ್ಕಾರದ ಶಾಲೆಗಳ ಬೆಂಬಲಕ್ಕೆ ಬಂದು ನಿಲ್ಲಬೇಕು. ತಮ್ಮ ಸಿಎಸ್‌ಆರ್‌ ನಿಧಿಯನ್ನು ಇದಕ್ಕೆ ಬಳಸಬೇಕು ಎಂದು ಅವರು ಹೇಳಿದರು.

ತಾವು ಕೂಡ ತಮ್ಮ ಹಿಂದಿನ ಅವಧಿಯಲ್ಲಿ ತಮ್ಮ ಕ್ಷೇತ್ರದಾದ್ಯಂತ ಹತ್ತಾರು ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದುದನ್ನು ಅವರು ನೆನಪಿಸಿಕೊಂಡು ಸರ್ಕಾರದ ಶಾಲೆಗಳ ರಕ್ಷಣೆಗೆ ಮತ್ತು ಅಭಿವೃದ್ಧಿಗೆ ತಾವು ನಿರಂತರವಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru News: ಗಮನಿಸಿ, ವಿವಿಧ ಯೋಜನೆಯಡಿ ಸಹಾಯಧನ, ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕಾರ್ಯಕ್ರಮದಲ್ಲಿ ಬಿಇಒ ಹನುಮಂತಪ್ಪ, ಎಸ್‌ಡಿಎಂಸಿ ಸದಸ್ಯರಾದ ನಾಗಣ್ಣ, ಮಂಗಳಮ್ಮ, ಮೂಡಲಗಿರಿಯಪ್ಪ ನಾಗರತ್ನಮ್ಮ, ಪಾಪಣ್ಣ, ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.