ಕಂಪನಿಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸುವ ದಕ್ಷ ಸಿಇಒಗಳಿಗೆ (CEO) ಬೇಡಿಕೆ ಎಷ್ಟಿದೆಯೋ ಅವರಿಗೆ ನೀಡುವ ಪ್ಯಾಕೇಜ್‌ಗಳೂ (Highest Paid CEOs) ಅಷ್ಟೇ ಆಕರ್ಷಕವಾಗಿರುತ್ತದೆ. ಭಾರತದ ವಿವಿಧ ಕಂಪನಿಗಳ ಸಿಇಒಗಳು ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಆದಾಯದೊಂದಿಗೆ ಸಾಕಷ್ಟು ಸವಲತ್ತುಗಳನ್ನೂ ಪಡೆಯುತ್ತಾರೆ.
ಸಿ. ವಿಜಯಕುಮಾರ್ ಅವರಿಂದ ಸಲೀಲ್ ಪರೇಖ್‌ವರೆಗೆ 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ಪಟ್ಟಿ ಇಲ್ಲಿದೆ. ಇತ್ತೀಚೆಗೆ ಸಿಇಒಗಳ ಪ್ಯಾಕೇಜ್‌ಗಳು ಗಣನೀಯವಾಗಿ ಹೆಚ್ಚಳವಾಗಿದೆ. ಇದು ಪ್ರಮುಖವಾಗಿ ಬಹುರಾಷ್ಟ್ರೀಯ ಸಂಸ್ಥೆಗಳ ಹೆಚ್ಚುತ್ತಿರುವ ಸಂಕೀರ್ಣತೆ ಮತ್ತು ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ.
ಸಿಇಒಗಳಿಗೆ ನೀಡುವ ಪ್ಯಾಕೇಜ್‌ಗಳು ಸಾಮಾನ್ಯವಾಗಿ ಸಂಬಳ, ಬೋನಸ್ ಮತ್ತು ಕೆಲವು ಸಂದರ್ಭಗಳಲ್ಲಿ ಸಿಇಒ ನ ಒಟ್ಟು ಗಳಿಕೆಯನ್ನು ಹೆಚ್ಚಿಸುವ ಬಹುಮಾನಗಳನ್ನು ಒಳಗೊಂಡಿರುತ್ತವೆ.
ಎಚ್‌ಸಿಎಲ್ ಟೆಕ್ನಾಲಜೀಸ್‌ನ ಸಿ ವಿಜಯಕುಮಾರ್
ಇವರ ಸಂಭಾವನೆ 84.16 ಕೋಟಿ ರೂಪಾಯಿ. ಜಾಗತಿಕವಾಗಿ ಐಟಿ ಕ್ಷೇತ್ರದಲ್ಲಿ ಸಿ. ವಿಜಯಕುಮಾರ್ ಅವರ ನಾಯಕತ್ವವು ಎಚ್‌ಸಿಎಲ್ ಟೆಕ್ನಾಲಜೀಸ್‌ನ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದೆ. 1994ರಲ್ಲಿ ಕಂಪನಿ ಸೇರಿದ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿ ಮೊದಲ ಸ್ಥಾನದಲ್ಲಿದ್ದಾರೆ.
ಇನ್ಫೋಸಿಸ್‌ನ ಸಲೀಲ್ ಪರೇಖ್
ಇವರ ವಾರ್ಷಿಕ ಸಂಭಾವನೆ 66.25 ಕೋಟಿ ರೂಪಾಯಿ. ಭಾರತದ ಅತಿದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಸಲೀಲ್ ಅವರ ವೇತನ ಪ್ಯಾಕೇಜ್ ಕಂಪನಿಯ ಕಾರ್ಯಕ್ಷಮತೆ ಮತ್ತು ಅದರ ನಿರಂತರ ಬೆಳವಣಿಗೆಗೆ ಅವರ ಕೊಡುಗೆಗಳ ಆಧಾರದ ಮೇಲಿದೆ. ಇದು ಬೋನಸ್‌ಗಳನ್ನು ಒಳಗೊಂಡಿದೆ.
ಪರ್ಸಿಸ್ಟೆಂಟ್ ಸಿಸ್ಟಮ್ಸ್ ನ ಸಂದೀಪ್ ಕಾಲ್ರಾ
ಇವರ ವಾರ್ಷಿಕ ಸಂಭಾವನೆ 61.7 ಕೋಟಿ ರೂಪಾಯಿ. ಪರ್ಸಿಸ್ಟೆಂಟ್ ಸಿಸ್ಟಮ್ಸ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿರುವ ಖ್ಯಾತಿ ಸಂದೀಪ್ ಕಾಲ್ರಾ ಅವರದ್ದಾಗಿದೆ. ಅವರಿಗೆ ನೀಡಲಾಗುವ ಪ್ಯಾಕೇಜ್ ಅವರ ನಾಯಕತ್ವದಲ್ಲಿ ಕಂಪನಿಯ ಗಮನಾರ್ಹ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಸಂಬಳ ಮತ್ತು ಬೋನಸ್‌ಗಳನ್ನು ಒಳಗೊಂಡಿದೆ.
ಎಂಫಾಸಿಸ್‌ನ ನಿತಿನ್ ರಾಕೇಶ್
ಇವರ ಸಂಭಾವನೆ 59.2 ಕೋಟಿ ರೂಪಾಯಿ. ತಂತ್ರಜ್ಞಾನ ಮತ್ತು ಹಣಕಾಸು ಎರಡರಲ್ಲೂ ವ್ಯಾಪಕ ಅನುಭವ ಹೊಂದಿರುವ ನಿತಿನ್ ರಾಕೇಶ್ ಎಂಫಾಸಿಸ್‌ನ ಅಧಿಕಾರ ವಹಿಸಿಕೊಂಡ ಅನಂತರ ಐಟಿ ಸೇವೆಗಳ ಉದ್ಯಮದಲ್ಲಿ ಸ್ಪರ್ಧಾತ್ಮಕ ಸ್ಥಾನವನ್ನು ಕಾಯ್ದುಕೊಳ್ಳುವಂತೆ ಮಾಡಿದ್ದಾರೆ. ಅವರ ಸಂಭಾವನೆಯು ಅವರ ಸಾಧನೆ ಮತ್ತು ಎಂಫಾಸಿಸ್‌ನ ಪ್ರಬಲ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ.
ಬಜಾಜ್ ಆಟೋನ ರಾಜೀವ್ ಬಜಾಜ್
ಇವರ ಸಂಭಾವನೆ 53.8 ಕೋಟಿ ರೂಪಾಯಿ. ಬಜಾಜ್ ಆಟೋವನ್ನು ಆಟೋಮೋಟಿವ್ ವಲಯದಲ್ಲಿ ಜಾಗತಿಕ ಸ್ಪರ್ಧಿಯಾಗಿ ಪರಿವರ್ತಿಸುವಲ್ಲಿ ರಾಜೀವ್ ಬಜಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಪಲ್ಸರ್ ಬೈಕ್ ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಬಿಡುಗಡೆಯಾಗಿದೆ.
ವಿಪ್ರೋದ ಶ್ರೀನಿವಾಸ್ ಪಲಿಯಾ
ಇವರ ಸಂಭಾವನೆ 50 ಕೋಟಿ ರೂಪಾಯಿ. ನಿಗದಿತ ಸಮಯಕ್ಕಿಂತ ಒಂದು ವರ್ಷ ಮುಂಚಿತವಾಗಿ ಡೆಲಾಪೋರ್ಟೆ ಅವರು ರಾಜೀನಾಮೆ ನೀಡಿದ ಬಳಿಕ ಶ್ರೀನಿವಾಸ್ ಪಾಲ್ಲಿಯಾ ಅವರು 2024ರ ಏಪ್ರಿಲ್‌ನಲ್ಲಿ ವಿಪ್ರೋ ಸಿಇಒ ಮತ್ತು ಎಂಡಿಯಾಗಿ ಅಧಿಕಾರ ಸ್ವೀಕರಿಸಿದರು. ಪಾಲ್ಲಿಯಾ ಅವರು ಮೂರು ದಶಕಗಳಿಂದ ವಿಪ್ರೊದಲ್ಲಿ ಕೆಲಸ ಮಾಡುತ್ತಿದ್ದಾರೆ. ವೈವಿಧ್ಯಮಯ ಉದ್ಯಮ ವಲಯಗಳ ಮೇಲ್ವಿಚಾರಣೆ ಮಾಡಿರುವ ಅವರು ವಿವಿಧ ಕಾರ್ಯತಂತ್ರಗಳು ಕಂಪನಿಯ ಮಾರುಕಟ್ಟೆ ಷೇರುಗಳು ಹೆಚ್ಚಿಸಿವೆ. ಹಿಂದಿನ ವಿಪ್ರೋ ಸಿಇಒ ಡೆಲಾಪೋರ್ಟೆ ಕಳೆದ ವರ್ಷ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದು, ಇವರ ವಾರ್ಷಿಕ ಪ್ಯಾಕೇಜ್ 82 ಕೋಟಿ ರೂ. ಆಗಿತ್ತು.
ಹಿಂಡಾಲ್ಕೊ ಇಂಡಸ್ಟ್ರೀಸ್‌ನ ಸತೀಶ್ ಪೈ
ಇವರ ವಾರ್ಷಿಕ ಸಂಭಾವನೆ 37.1 ಕೋಟಿ ರೂಪಾಯಿ. ಹಿಂಡಾಲ್ಕೊ ಇಂಡಸ್ಟ್ರೀಸ್ ಜಾಗತಿಕ ಅಲ್ಯೂಮಿನಿಯಂ ವ್ಯವಹಾರವನ್ನು ನಿರ್ವಹಿಸುವಲ್ಲಿ ಸತೀಶ್ ಪೈ ಅವರ ಪರಿಣತಿ ಕಂಪನಿಯ ಸ್ಥಿರ ಬೆಳವಣಿಗೆಗೆ ಕಾರಣವಾಗಿದೆ. ಲೋಹಗಳ ವಲಯದಲ್ಲಿನ ಸವಾಲುಗಳನ್ನು ಎದುರಿಸಿ ಹಿಂಡಾಲ್ಕೊವನ್ನು ಮುನ್ನಡೆಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಅವರ ಸಂಭಾವನೆಯು ಪ್ರತಿಬಿಂಬಿಸುತ್ತದೆ.
Financial Rules: ಅಕ್ಟೋಬರ್‌ನಿಂದ ಹಲವು ಸೇವೆಗಳಲ್ಲಿ ಬದಲಾವಣೆ-ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಕಾಗ್ನಿಜೆಂಟ್‌ನ ರವಿ ಕುಮಾರ್ ಸಿಂಗಿಸೆಟ್ಟಿ
ಇವರ ವಾರ್ಷಿಕ ಸಂಭಾವನೆ 186 ಕೋಟಿ ರೂಪಾಯಿ. ಕಾಗ್ನಿಜೆಂಟ್‌ನ ಸಿಇಒ ರವಿ ಕುಮಾರ್ ಸಿಂಗಿಸೆಟ್ಟಿ ಅವರು ಅತ್ಯಧಿಕ ಪ್ಯಾಕೇಜ್ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. ಇವರ ಸಂಭಾವನೆಯಲ್ಲಿ ಒಟ್ಟಾರೆ 169 ಕೋಟಿ ರೂ.ನ ಸ್ಟಾಕ್ ಕೂಡ ಇದೆ. ಅವರ ಮೂಲ ವೇತನ ಮತ್ತು ಬೋನಸ್ ಅನ್ನು ಇತರ ಉನ್ನತ ಸಿಇಒಗಳಿಗೆ ಹೋಲಿಸಬಹುದಾದರೂ ಸ್ಟಾಕ್ ಅನುದಾನವು 2023ರಲ್ಲಿ ಅವರ ಒಟ್ಟು ಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಐಟಿ ವಲಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಕಾರ್ಯನಿರ್ವಾಹಕರಾಗಿ ಪ್ರಸ್ತುತ ಇವರನ್ನು ಗುರುತಿಸುವಂತೆ ಮಾಡಿದೆ.