ಮುಂಬೈ: ವಾಣಿಜ್ಯ ನಗರಿ ಮುಂಬೈ(Mumbai)ನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಸುರಿಯುತ್ತಿರುವ ಮಳೆಗೆ ಇಡೀ ನಗರವೇ ತತ್ತರಿಸಿರುವ ಸುದ್ದಿ ಮಧ್ಯೆಯೇ ಝೊಮಾಟೊ ಡೆಲಿವರಿ ಬಾಯ್(Zomato delivery agent) ಒಬ್ಬನ ಬಗೆಗಿನ ಸುದ್ದಿ ಭಾರೀ ವೈರಲ್(Viral News) ಆಗುತ್ತಿದೆ. ಮಳೆಯಿಂದಾಗಿ ಬೈಕ್ ಕೆಟ್ಟುನಿಂತ ಕಾರಣ ಕಾಲ್ನಡಿಗೆಯಲ್ಲೇ ಸಾಗಿ ಗ್ರಾಹಕರಿಗೆ ಆರ್ಡರ್ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಮುಂಬೈ ಬುಧವಾರ ಧಾರಾಕಾರ ಮಳೆಯಾಗಿದ್ದು, ನಗರದ ಕೆಲವು ಭಾಗಗಳಲ್ಲಿ ತೀವ್ರ ಜಲಾವೃತ ಮತ್ತು ಸಂಚಾರ ದಟ್ಟಣೆಗೆ ಕಾರಣವಾಯಿತು. ಕೆಲವು ಕಚೇರಿಗಳಲ್ಲಿ ಜನರು ನೀರಿನ ಮಟ್ಟ ಕಡಿಮೆಯಾಗುವವರೆಗೂ ಸಿಕ್ಕಿಹಾಕಿಕೊಂಡರು, ಆದರೆ ಇತರರು ಗೊಂದಲದ ನಡುವೆ ಮನೆಗೆ ತೆರಳಲು ಪ್ರಯತ್ನಿಸಿದಾಗ ಕ್ಯಾಬ್ ದರಗಳು ಗಗನಕ್ಕೇರಿದವು.
ಈ ಮಧ್ಯೆ, Zomato ಡೆಲಿವರಿ ಏಜೆಂಟ್ ರಹತ್ ಅಲಿ ಖಾನ್ ಕಾಲ್ನಡಿಗೆಯಲ್ಲೇ ಚಲಿಸಿ ಎರಡು ಆರ್ಡರ್‌ಗಳನ್ನು ವಿತರಿಸಿದರು. Zomato ಗ್ರಾಹಕರಾದ ಸ್ವಾತಿ ಮಿತ್ತಲ್ ಅವರು ಸಾಮಾಜಿಕ ಮಾಧ್ಯಮ ಥ್ರೆಡ್‌ಗಳಲ್ಲಿ ಖಾನ್ ಬಗ್ಗೆ ಮೆಚ್ಚುಗೆಯ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನಾವು ಫುಡ್ ಆರ್ಡರ್ ಮಾಡಿದ್ದೆವು. ಡೆಲಿವರಿಗೆಂದು ಬಂದಿದ್ದZomato ಡೆಲಿವರ್ ಬಾಯ್ ರಾಹತ್ ಅವರ ಬೈಕ್ ಕೆಟ್ಟು ನಿಂತಿತ್ತು. ಆದರೂ ಕರ್ತವ್ಯ ಮರೆಯದ ರಾಹತ್, ಕಾಲ್ನಡಿಗೆಯಲ್ಲೇ ಎರಡು ಕಡೆಗೆ ಫುಡ್ ಡೆಲಿವರಿ ಮಾಡಿದ್ದಾರೆ. ಧಾರಾಕಾರ ಮಳೆಯಲ್ಲೂ ತಮ್ಮ ಕರ್ತವ್ಯ ಮೆರೆದಿದ್ದಾರೆ ಎಂದು ಸ್ವಾತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಕಮೆಂಟ್ ಮಾಡಿದ್ದಾರೆ. ನಮ್ಮ ಜೀವನವನ್ನು ಸರಳಗೊಳಿಸಲು ಭಾರೀ ಮಳೆಯಲ್ಲೂ ನಮಗೆ ಆಹಾರ ತಲುಪಿಸುವ ಡೆಲಿವರಿ ಸಿಬ್ಬಂದಿಯನ್ನು ನಾವು ನಿಜವಾಗಿಯೂ ಬೆಂಬಲಿಸಬೇಕು. ಧನ್ಯವಾದಗಳು ರಾಹತ್! ಎಂದು ಒಬ್ಬ ನೆಟ್ಟಿಗ ಬರೆದುಕೊಂಡಿದ್ದಾರೆ. ಇನ್ನು ಡೆಲಿವರಿ ಬಾಯ್‌ಯ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸ್ವಾತಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಮುಂಬೈ ಮಳೆಗೆ ನಾಲ್ವರು ಬಲಿ
ಮುಂಬೈ: ನಿನ್ನೆ ಮಧ್ಯಾಹ್ನದಿಂದ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಮುಂಬೈನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಾರೀ ಮಳೆಗೆ ನಾಲ್ವರು ಸಾವನ್ನಪ್ಪಿದ್ದು, ಶಾಲಾ ಕಾಲೇಜುಗೆ ರಜೆ ಘೋಷಿಸಲಾಗಿದೆ. ಮುಂಬೈನ ಕೆಲವು ಭಾಗಗಳಲ್ಲಿ ಬುಧವಾರ ಸಂಜೆ ಸುಮಾರು 275 ಮಿಮೀ (11 ಇಂಚುಗಳು) ಮಳೆ ದಾಖಲಾಗಿದೆ, ಭಾರೀ ಮಳೆಗೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಲಕ್ಷಾಂತರ ನಿವಾಸಿಗಳು ಪ್ರತಿದಿನ ಬಳಸುವ ಮುಂಬೈ ಲೋಕಲ್ ರೈಲು ಸಂಚಾರ ವಿಳಂಬಗೊಂಡಿತ್ತು. ಮತ್ತೊಂದೆಡೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಸಂಚಾರದಲಲೂ ವ್ಯತ್ಯಯ ಉಂಟಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮುಂಬೈನಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಮುಂಬೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. IMD ಮುನ್ಸೂಚನೆಯನ್ನು ಅನುಸರಿಸಿ ನಗರ ಆಡಳಿತವು ಮುಂಬೈನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಭಾರೀ ಮಳೆಯಿಂದಾಗಿ ಪುಣೆಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಈ ಸುದ್ದಿಯನ್ನೂ ಓದಿ: Heavy Rain: ಮುಂಬೈ ಸೇರಿದಂತೆ ಮಹಾರಾಷ್ಟ್ರದೆಲ್ಲೆಡೆ ಭಾರೀ ಮಳೆ; ರೈಲು, ವಿಮಾನ ಸಂಚಾರ ರದ್ದು