Saturday, 16th November 2024

Bengaluru VS North Indians: ಬೆಂಗಳೂರಿಗರನ್ನು ಕೆಣಕಿದ ಉತ್ತರ ಭಾರತೀಯ ಮಹಿಳೆಗೆ ಇನ್ನೊಂದು ಸಂಕಷ್ಟ

Bengaluru vs north indians

ಬೆಂಗಳೂರು: ನಾವು ನಾರ್ತ್ ಇಂಡಿಯನ್ಸ್ (Bengaluru vs North indians) ನಗರ ಬಿಟ್ಟು ಹೋದರೆ ಬೆಂಗಳೂರು (bengaluru news) ಖಾಲಿ ಹೊಡೆಯುತ್ತದೆ ಎಂದು ಹೇಳಿ ನಾಲಿಗೆ ಹರಿಬಿಟ್ಟು ಕನ್ನಡಿಗರನ್ನು ಕೆಣಕಿದ್ದ ರೀಲ್ಸ್ ರಾಣಿ (viral video) ಸುಗಂಧ ಶರ್ಮಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಕೆಯ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಉತ್ತರ ಭಾರತ ಮೂಲದ ಸುಗಂಧ ಶರ್ಮಗೆ ಈಗ ತನ್ನ ರೀಲ್ಸ್‌ನಿಂದಾಗಿ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಬೆಂಗಳೂರಿಗರ ಸಿಟ್ಟಿಗೆ ಗುರಿಯಾಗಿ ಕೆಲಸ ಕಳೆದುಕೊಂಡಿದ್ದರು. ಇದೀಗ ಈಕೆಯ ವಿರುದ್ಧ ಕನ್ನಡಿಗರಿಂದ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉತ್ತರ ಭಾರತ ಮೂಲದ ಸುಗಂಧ ಶರ್ಮ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಪ್ರವೀಣ್ ಕುಮಾರ್ ಶೆಟ್ಟಿ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಸುಗಂಧ ಶರ್ಮ ಕೀಳಾಗಿ ಮಾತನಾಡಿದ್ದರು. ಉತ್ತರ ಭಾರತದವರು ಇಲ್ಲ ಅಂದರೆ ಬೆಂಗಳೂರು ಖಾಲಿ ಆಗುತ್ತದೆ. ಕೋರಮಂಗಲದ ಪಿಜಿಗಳು, ಪಬ್‌ಗಳು ಖಾಲಿಯಾಗುತ್ತವೆ. ಬೆಂಗಳೂರಿಗರಿಗೆ ಆದಾಯದ ಮೂಲವೇ ಇರುವುದಿಲ್ಲ. ಉತ್ತರ ಭಾರತೀಯರು ಬಂದಿರುವುದರಿಂದಲೇ ಬೆಂಗಳೂರು ಅಭಿವೃದ್ಧಿ ಆಗಿದೆ ಎಂದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಈ ಪೋಸ್ಟ್ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಸುಗಂಧ ಶರ್ಮ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಬೆಂಗಳೂರು ಜನ ಈಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನೀನು ಬೆಂಗಳೂರಿನಿಂದ ತೊಲಗು ಎಂದಿದ್ದರು. ರೂಪೇಶ್‌ ರಾಜಣ್ಣ ನೇತೃತ್ವದ ಕನ್ನಡ ಬಣ ಆಕೆಯ ಕಚೇರಿಗೆ ಭೇಟಿ ನೀಡಿ ದೂರು ನೀಡಿತ್ತು. ಇದರ ಬೆನ್ನಲ್ಲಿಯೇ ಸುಗಂಧ ಶರ್ಮಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದೀಗ ಸುಗಂಧ ಶರ್ಮ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆಯಿಂದ ದೂರು ದಾಖಲಿಸಲಾಗಿದೆ.

ಕ್ಷಮೆ ಕೇಳಿದ ಸುಗಂಧ ಶರ್ಮ

ಇದೆಲ್ಲದರಿಂದ ಬೆಚ್ಚಿ ಬಿದ್ದಿರುವ ಸುಗಂಧ ಶರ್ಮ, ಬೆಂಗಳೂರನ್ನು ತಾನು ಪ್ರೀತಿಸುತ್ತೇನೆ ಎಂದು ರೀಲ್ಸ್ ಮಾಡಿ ಹಾಕಿದ್ದಳು. ನಾನು ಊರೂರು ಸುತ್ತುತ್ತೇನೆ. ನನಗೆ ಬೆಂಗಳೂರು ಅಂದ್ರೆ ಇಷ್ಟ. ಬೆಂಗಳೂರಿನ ಬಗ್ಗೆ ನನಗೆ ಗೌರವ ಇದೆ. ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂಬ ಭೇದ-ಭಾವ ನನ್ನಲ್ಲಿ ಇಲ್ಲ. ನಾವೆಲ್ಲಾ ಭಾರತೀಯರು ಎಂದು ವಿಡಿಯೋ ಮಾಡಿ ಹಂಚಿದ್ದಾಳೆ. ಜನರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈಕೆ ʼಐ ಲವ್ ಬೆಂಗಳೂರುʼ ಎಂಬ ರಾಗ ಹಾಡಿದ್ದಾಳೆ.

ಇದನ್ನೂ ಓದಿ: Bengaluru vs North Indians: ನಾವಿಲ್ಲದಿದ್ರೆ ಬೆಂಗಳೂರೇ ಖಾಲಿ ಎಂದಿದ್ದ ಯುವತಿ ಕೆಲಸದಿಂದ ವಜಾ